Mangalore: ಮಂಗಳೂರು ದುರಂತ! ವಿಮಾನ ಪತನ ಸಂಭವಿಸಿ ಇಂದಿಗೆ 14 ವರ್ಷ!

Mangalore: ಮಂಗಳೂರು (Mangalore) ವಿಮಾನ ನಿಲ್ದಾಣದ ಸಮೀಪದ ಕೆಂಜಾರಿನಲ್ಲಿ 2010ರ ಮೇ 22ರ ಬೆಳಗ್ಗೆ 6.20ಕ್ಕೆ ದುಬಾೖಯಿಂದ ಮಂಗಳೂರಿಗೆ ಆಗಮಿಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಅಪಘಾತವಾಗಿದ್ದು, ಇಂದಿಗೆ 14 ವರ್ಷಗಳೇ ಸಂದಿವೆ.

ಇದನ್ನೂ ಓದಿ: Hubbali: ಮದುವೆಯಾಗಿದ್ದರು ಪರ ಸ್ತ್ರೀ ಸಂಘ ಮಾಡಿದ ಕಾನ್ಸ್ ಟೇಬಲ್ : ಕೊನೆಗೆ ಪರ ಸ್ತ್ರೀ ಜೊತೆ ನೇಣುಬಿಗಿದುಕೊಂಡು ಆತ್ಮಹತ್ಯೆ : ಆತ್ಮಹತ್ಯೆಗೆ ಅನೈತಿಕ ಸಂಬಂಧವೇ ಮುಳ್ಳಾಯ್ತ

ದುಬಾೖಯಿಂದ ಆಗಮಿಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಲ್ಯಾಂಡ್‌ ಆಗುವ ವೇಳೆ ರನ್‌ವೇಯಲ್ಲಿ ಸ್ಥಿರತೆ ಸಿಗದೆ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿ ಹೊಡೆದು ವಿದ್ಯುತ್‌ ತಂತಿಗಳಿಗೆ ಬಡಿಯುತ್ತಾ ಬಳಿಕ ಕೆಂಜಾರಿನಲ್ಲಿ ಗುಡ್ಡ ಪ್ರಪಾತದ ಕೆಳಕ್ಕೆ ಉರುಳಿ ಸ್ಫೋಟಗೊಂಡಿತ್ತು. ಆದರೆ ಇದಕ್ಕೂ ಮೊದಲು ಮರಕ್ಕೆ ಬಡಿದು ವಿಮಾನದ ಬಾಗಿಲು ತೆರೆದುಕೊಂಡಾಗ 8 ಮಂದಿ ಹೊರಗೆ ಎಸೆಯಲ್ಪಟ್ಟಿದ್ದರು. ಹಾಗಾಗಿ ವಿಮಾನದಲ್ಲಿದ್ದ 166 ಮಂದಿ ಪ್ರಯಾಣಿಕರಲ್ಲಿ 158 ಮಂದಿ ಸಜೀವ ದಹನಗೊಂಡಿದ್ದರು.

ಇದನ್ನೂ ಓದಿ: HSRP Number Plate: HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನ ಸವಾರರಿಗೆ ಗುಡ್ನ್ಯೂಸ್!

ವಿಮಾನದ ಬ್ಲ್ಯಾಕ್‌ ಬಾಕ್ಸ್‌ನ ವಿಶ್ಲೇಷಣೆಯ ಪ್ರಕಾರ ವಿಮಾನದ ಮುಖ್ಯ ಪೈಲಟ್‌ ಕ್ಯಾ| ಗ್ಲುಸಿಕಾ ಅವರು ಮಾಡಿದ ತಪ್ಪಿನಿಂದಾಗಿ ದುರಂತ ಸಂಭವಿಸಿತ್ತು. ಸಹ ಪೈಲಟ್‌ ಕ್ಯಾ| ಅಹ್ಲುವಾಲಿಯಾ ಅವರ ಎಚ್ಚರಿಕೆಯನ್ನು ಪರಿಗಣಿಸದೆ ಕ್ಯಾ| ಗ್ಲುಸಿಕಾ ಅವರು ವಿಮಾನವನ್ನು ಇಳಿಸಲು ನಿರ್ಧರಿಸಿದ್ದರು ಮಾಹಿತಿ ದೊರಕಿತ್ತು.

ಸದ್ಯ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಕೂಳೂರು ತಣ್ಣೀರು ಬಾವಿ ರಸ್ತೆ ಬಳಿ ಇರುವ ಪಾರ್ಕ್‌ನಲ್ಲಿ ಜಿಲ್ಲಾಡಳಿತದ ವತಿಯಿಂದ ಮೇ 22ರ ಬೆಳಗ್ಗೆ 9.30ಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ.

Leave A Reply

Your email address will not be published.