Hubbali: ಮದುವೆಯಾಗಿದ್ದರು ಪರ ಸ್ತ್ರೀ ಸಂಘ ಮಾಡಿದ ಕಾನ್ಸ್ ಟೇಬಲ್ : ಕೊನೆಗೆ ಪರ ಸ್ತ್ರೀ ಜೊತೆ ನೇಣುಬಿಗಿದುಕೊಂಡು ಆತ್ಮಹತ್ಯೆ : ಆತ್ಮಹತ್ಯೆಗೆ ಅನೈತಿಕ ಸಂಬಂಧವೇ ಮುಳ್ಳಾಯ್ತ

Hubbali: ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್‌ ಒಬ್ಬರು ಮಹಿಳೆಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ(Suside) ಮಾಡಿಕೊಂಡಿದ್ದು, ಮೂರು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ ಹೆಸರೂರು, ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿರುವ ಮನೆಯಲ್ಲಿ ವಿಜಯಲಕ್ಷ್ಮೀ ವಾಲಿ(30) ಎಂಬ ಮಹಿಳೆಯೊಂದಿಗೆ ಆತ್ಮಹತ್ಯೆ (Suside) ಮಾಡಿಕೊಂಡಿದ್ದಾರೆ.

ಸಾವನಪ್ಪಿ ಮೂರು ದಿನಗಳ ಬಳಿಕ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಆಗಮಿಸಿ ಬಾಗಿಲು ಒಡೆದಾಗ ನೋಡಿದಾಗ ಮಹಿಳೆ ಮತ್ತು ಕಾನ್ಸ್‌ಟೇಬಲ್ ಮಹೇಶ್ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.

ಮೇಲ್ನೋಟಕ್ಕೆ ಎರಡು ಮೂರು ದಿನಗಳ ಹಿಂದೆ ಇವರಿಬ್ಬರು ಆತ್ಮಹತ್ಯೆ(Suside) ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಹೇಶ ಜೊತೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಹೆಸರು ವಿಜಯಲಕ್ಷ್ಮೀ ವಾಲಿ ಎಂದಷ್ಟೇ ತಿಳಿದುಬಂದಿದೆ.

ಕಾನ್ಸ್ ಟೆಬಲ್ ಮಹೇಶ್‌ಗೆ ಈ ಮುಂಚೆಯೇ ಮದುವೆಯಾಗಿದ್ದು, ವಿಜಯಲಕ್ಷ್ಮೀ ಜತೆ ಅನೈತಿಕ ಸಂಬಂಧ ಹೊಂದಿದ್ದ. ಕಳೆದ 15 ದಿನಗಳಿಂದ ವಿಜಯಲಕ್ಷ್ಮೀ ಜತೆ ಮನೆ ಮಾಡಿಕೊಂಡಿದ್ದ. ಆದರೆ, ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರ ನಡುವಿನ ಅನೈತಿಕ ಸಂಬಂಧವೇ ಆತ್ಮಹತ್ಯೆಗೆ(Suside) ಕಾರಣ ಎಂಬ ಅನುಮಾನ ಮೂಡಿದೆ.

ಆದರೆ ಇದುವರೆಗೂ ಇವರಿಬ್ಬರ ಆತ್ಮಹತ್ಯೆಗೆ (Suside)ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಈ ಸಾವಿನ ಕುರಿತು ಈಗಾಗಲೇ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.