KPCC ಅಧ್ಯಕ್ಷರು ಬದಲಾವಣೆ ?! ಡಿಕೆಶಿ ಪಟ್ಟದ ಮೇಲೆ ಕಣ್ಣಿದ್ಯಾರು ?!

KPCC: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಈ ಬೆನ್ನಲ್ಲೇ ಕೆಪಿಸಿಸಿ(KPCC) ಅಧ್ಯಕ್ಷರ ಬದಲಾವಣೆ ಚರ್ಚೆ ಕೂಡ ಮುನ್ನಲೆಗೆ ಬಂದಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಈ ಚರ್ಚೆ ಇನ್ನೂ ಜೋರಾಗಿದೆ. ಹೀಗಾಗಿ ಡಿಕೆಶಿ ಪಟ್ಟದ ಮೇಲೆ ಕಣ್ಣಿಟ್ಟವರು ಯಾರು ಎಂಬ ಗುಸು ಗುಸು ಕೂಡ ಶುರುವಾಗಿದೆ.

ಇದನ್ನೂ ಓದಿ: Shah Rukh Khan: ಬಾಲಿವುಡ್ ಬಾದ್‌ಶಾ ಗೆ ಏನಾಯ್ತು? ವೈದ್ಯರು ಹೇಳೋದು ಏನು?

ಹೌದು, ಸಿಎಂ ಸಿದ್ದರಾಮಯ್ಯ(CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈ ಹಿನ್ನಲೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್(D K Shivkumar) , ತಮ್ಮ ಸರ್ಕಾರದ ಸಚಿವರಿಗೆ ಔತಣಕೂಟ ಆಯೋಜಿಸಿದ್ದಾರೆ. ಆದರೆ ಇದು ಕೇವಲ ಸರ್ಕಾರ ಒಂದು ವರ್ಷ ಕಂಪ್ಲೀಟ್ ಮಾಡಿದ ಹಿನ್ನಲೆಯಲ್ಲಿ ಆಯೋಜಿಸಿರುವ ಡಿನ್ನರ್ ಪಾರ್ಟಿಯಲ್ಲ, ಬದಲಾಗಿ ಇದೇ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಸುಳಿವನ್ನು ನೀಡಲು ನಡೆಸಿದ ಕೂಟವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: HSRP Number Plate: ವಾಹನ ಸವಾರರಿಗೆ ಮಹತ್ವ ಮಾಹಿತಿ! ಇನ್ನೂ HSRP ನಂಬರ್‌ ಪ್ಲೇಟ್‌ ಅಳವಡಿಸಿಲ್ವ?

ಅಂದಹಾಗೆ ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ(DCM) ಹುದ್ದೆಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಲೋಕಸಭಾ ಚುನಾವಣೆವರೆ(Parliament Election) ಗೆ ನಿಭಾಯಿಸುವಂತೆ ಪಕ್ಷದ ಹೈಕಮಾಂಡ್ ಶಿವಕುಮಾರ್ ಅವರಿಗೆ ಸೂಚಿಸಿತ್ತು. ಇದೀಗ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಆದರೆ ಇತ್ತೀಚೆಗೆ ನಡೆದ ಪಕ್ಷದ ಸಭೆಗಳಲ್ಲಿ ಡಿಕೆಶಿ ಅವರು ಅಧ್ಯಕ್ಷ ಹುದ್ದೆಯಲ್ಲಿ ಎಷ್ಟು ದಿನ ಮುಂದುವರಿಯುತ್ತೇನೊ ಎಂಬುದು ಗೊತ್ತಿಲ್ಲ, ಬದಲಾವಣೆ ಆಗಲೂಬಹುದು ಎಂದು ಕೆಪಿಸಿಸಿ ಜವಾಬ್ದಾರಿಯಿಂದ ಹೊರಬರುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಸಚಿವರಾದ ಸತೀಶ್ ಜಾರಕಿಹೊಳಿ(Satish Jarkiholi), ಡಾ ಜಿ ಪರಮೇಶ್ವರ್(Dr G Parameshwar) ಅವರು KPCC ಅಧ್ಯಕ್ಷ ಸ್ಥಾನದ ಕುರಿತು ತಮ್ಮ ಅಭಿಪ್ರಾಯಗಳನ್ನು ಹೊರಹಾಕುವ ಮೂಲಕವೂ ಅಧ್ಯಕ್ಷರ ಬದಲಾವಣೆ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಏನಂದ್ರು ?

ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ. ಅದು ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟ ವಿಚಾರ. ಹೊಸ ಅಧ್ಯಕ್ಷರ ನೇಮಕಕ್ಕೆ ರಾಜ್ಯ ಸುತ್ತಿದ್ದ ಹಾಗೂ ಸಮರ್ಥರಿಗೆ ಅವಕಾಶ ನೀಡಬೇಕು. ಮುಂದಿನ ನಾಲ್ಕು ವರ್ಷ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಶಕ್ತಿ ಇರುವವರು ಅಧ್ಯಕ್ಷರಾಗಲಿ ಎಂದು ಹೇಳಿದರು

Leave A Reply

Your email address will not be published.