Things In Puja Room: ಮನೆಯ ದೇವರ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಏನಾಗುತ್ತೆ ಗೊತ್ತಾ?

Things In Puja Room: ಮನೆಯಲ್ಲಿ ಮೊದಲು ದೇವರ ಕೋಣೆಗೆ ಮಹತ್ವ ನೀಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ನಂಬಿಕೆಗೆ ಅನುಗುಣವಾಗಿ ದೇವರ ಪೂಜೆ ಮಾಡುತ್ತಾನೆ. ಇನ್ನು ಪೂಜೆ ಕೋಣೆಯಲ್ಲಿ ಎಲ್ಲಾ ಪೂಜೆ ಸಾಮಾಗ್ರಿಗಳು ಒಂದೇ ಸ್ಥಳದಲ್ಲಿ ಇಟ್ಟುಕೊಂಡಿರುವುದು ಸಹಜ. ಆದರೆ ಶಾಸ್ತ್ರದಲ್ಲಿ ಯಾವುದನ್ನು ದೇವರ ಕೋಣೆಯಲ್ಲಿ ಇಟ್ಟುಕೊಂಡಿರಬಾರದು ಎಂದು ಹೇಳಲಾಗಿದೆಯೋ ಅದನ್ನೇ ದೇವರ ಕೋಣೆಯಲ್ಲಿ ಇಟ್ಟುಕೊಂಡಿರಬಾರದು. ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳುವುದರಿಂದ (Things In Puja Room) ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ.

ಇದನ್ನೂ ಓದಿ: Beauty Tips: ಮೂಗಿನ ತುದಿಯಲ್ಲಿ ಬ್ಲ್ಯಾಕ್‌ಹೆಡ್ಸ್‌ ಆಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಹಾಗಾದ್ರೆ ದೇವರ ಕೋಣೆಯಲ್ಲಿ ಇಡಬಾರದ ವಸ್ತುಗಳು ಯಾವುದೆಂದು ಇಲ್ಲಿ ತಿಳಿಯಿರಿ:

ಬಾಗಿಲಿನಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋ ಇಡಬೇಡಿ.

ಮುಖ್ಯವಾಗಿ ಒಂದೇ ದೇವರ ಒಂದಕ್ಕಿಂತ ಹೆಚ್ಚು ವಿಗ್ರಹ ಅಥವಾ ಫೋಟೋಗಳನ್ನು ಇಟ್ಟುಕೊಳ್ಳಬಾರದು.

ಇದನ್ನೂ ಓದಿ: Seeds benefits: ಪುರುಷರು ಮತ್ತು ಮಹಿಳೆಯರು ಯಾವ ಯಾವ ಸೀಡ್ಸ್ ತಿನ್ನಬೇಕು ಮತ್ತು ತಿನ್ನಬಾರದು ಎಂದು ಇಲ್ಲಿ ತಿಳಿಯಿರಿ!

ಪಿತೃಗಳ ಫೋಟೋಗಳನ್ನು ಇಟ್ಟುಕೊಳ್ಳಬಾರದು.

ಭೈರವ, ಶನಿದೇವ ಮತ್ತು ಕಾಳಿ ಮಾತೆಯ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ.

ಕೋಣೆಯಲ್ಲಿ ಇರಿಸಬಹುದಾದ ವಸ್ತುಗಳು ಯಾವುದೆಂದು ನೋಡೋಣ:

ಲಕ್ಷ್ಮಿ ದೇವಿಯ ವಿಗ್ರಹವನ್ನು ಕುಳಿತುಕೊಳ್ಳುವ ಭಂಗಿಯಲ್ಲಿ ಇಡುವುದು ಒಳ್ಳೆಯದು.

ಮಣ್ಣಿನಿಂದ ಮಾಡಿದ ದೀಪಗಳು ಮತ್ತು ಅಗರಬತ್ತಿಗಳನ್ನು ಇಡುವುದು ಉತ್ತಮ. ಒಂದು ವೇಳೆ ಮಣ್ಣಿನ ದೀಪ ಸಿಗದಿದ್ದರೆ, ಲೋಹದ ದೀಪವನ್ನು ಸಹ ಬಳಸಬಹುದು.

ಕಲಶವನ್ನು ಇಟ್ಟುಕೊಳ್ಳುವುದರ ಜೊತೆಗೆ ಕುಂಕುಮದಿಂದ ಅದರ ಮೇಲೆ ಸ್ವಸ್ತಿಕವನ್ನು ಸಹ ಮಾಡಬೇಕು. ಇದರಿಂದ ಅದು ಮಂಗಳಕರ ಕಲಶವಾಗುತ್ತದೆ.

ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಮತ್ತು ಅದರಿಂದ ಪ್ರತಿದಿನ ಶಬ್ದ ಮಾಡುವುದು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶಂಖದೊಂದಿಗೆ ಗರುಡ ಗಂಟೆಯನ್ನೂ ಇಡಬೇಕು ಮತ್ತು ಆರತಿಯ ಸಮಯದಲ್ಲಿ ಇವೆರಡರ ಶಬ್ಧವನ್ನು ಮಾಡಬೇಕು. ಶಂಖ ಮತ್ತು ಗಂಟೆಯ ಶಬ್ದವು ಸಕಾರಾತ್ಮಕತೆಯನ್ನು ನೀಡುತ್ತದೆ.

ಶುದ್ಧವಾದ ಪಾತ್ರೆಯಲ್ಲಿ ಗಂಗಾಜಲವನ್ನು ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸದಾ ಸಮೃದ್ಧಿ ಇರುತ್ತದೆ ಮತ್ತು ಸಂಪತ್ತು ಸಿದ್ಧಿ ಆಗುತ್ತದೆ.

ನಾವು ಪೂಜೆ ಮಾಡುವ ದೇವರ ಕೋಣೆಯಲ್ಲಿ ಸ್ವಸ್ತಿಕವನ್ನು ಹಾಕಬೇಕು. ಸ್ವಸ್ತಿಕ ಚಿಹ್ನೆಯನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ.

Leave A Reply

Your email address will not be published.