Aadhaar card update: ಹತ್ತು ವರ್ಷದಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್ ಏನಾಗುತ್ತೆ ಗೊತ್ತಾ? ಯುಐಡಿಎಐ ಯಿಂದ ಮಹತ್ವದ ಮಾಹಿತಿ!

Aadhaar Card Update: ಕಳೆದ 10 ವರ್ಷದಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ (Aadhaar card update) ಮಹತ್ವ ಮಾಹಿತಿ ಇಲ್ಲಿದೆ. ಈಗಾಗಲೇ ಹತ್ತು ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ಗಳು ಜೂನ್ 14 ರ ಬಳಿಕ ನಿಷ್ಕ್ರಿಯಗೊಳ್ಳಲಿವೆ ಎನ್ನುವಂತಹ ಸುಳ್ಳು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಯುಐಡಿಎಐ ಈ ಮಾಹಿತಿಯನ್ನು ಸುಳ್ಳು ಎಂದು ಸ್ಪಷ್ಟಪಡಿಸಿದೆ.

 

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ, ಒಂದು ವೇಳೆ ಹತ್ತು ವರ್ಷದಿಂದ ಅಪ್ಡೇಟ್ ಆಗದಿದ್ದರೆ ಅಂಥ ಆಧಾರ್ ಕಾರ್ಡ್ ಏನಾಗುತ್ತದೆ? ಇಂಥದ್ದೊಂದು ಪೋಸ್ಟ್ ವೈರಲ್ ಆಗಿದೆ. ಜೂನ್ 14ರ ಬಳಿಕ ಇಂತಹ ಆಧಾರ್ ಕಾರ್ಡ್ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಈ ವೈರಲ್ ಪೋಸ್ಟ್ನಲ್ಲಿ ಬರೆಯಲಾಗಿದೆ. ಆದರೆ, ಆಧಾರ್ ಕಾರ್ಡ್ ರೂಪಿಸಿರುವ ಯುಐಡಿಎಐ ಸಂಸ್ಥೆ ಈ ಅಂಶವನ್ನು ಸುಳ್ಳು ಎಂದು ಸ್ಪಷ್ಟ ಪಡಿಸಿದೆ. ಹೌದು,ಹತ್ತು ವರ್ಷವಾದರೂ ಅಪ್ಡೇಟ್ ಆಗದ ಆಧಾರ್ ಕಾರ್ಡ್ಗೆ ಏನೂ ಆಗುವುದಿಲ್ಲ. ಅದು ಚಾಲನೆಯಲ್ಲಿ ಇರುತ್ತದೆ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.

 

ಯುಐಡಿಎಐ ಪ್ರಕಾರ, ಆಧಾರ್ ವಿವರವನ್ನು ಆನ್ಲೈನ್ನಲ್ಲಿ ಉಚಿತವಾಗಿ ಮಾಡುವ ಅವಕಾಶವನ್ನು ಕಲ್ಪಿಸಿದ್ದು, 2024ರ ಜೂನ್ 14 ಅಲ್ಲಿಯವರೆಗೆ ಆನ್ಲೈನ್ನಲ್ಲಿ ಶುಲ್ಕ ಇಲ್ಲದೇ ಉಚಿತವಾಗಿ ಆಧಾರ್ ವಿವರವನ್ನು ಅಪ್ಡೇಟ್ ಮಾಡಬಹುದು ಎಂಬ ಮಾಹಿತಿ ಇತ್ತು. ಕೆಲವರು ಇದನ್ನೇ ತಿರುಚಿ, ಹತ್ತು ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ಜೂನ್ 14ರ ಬಳಿಕ ನಿಷ್ಕ್ರಿಯಗೊಳ್ಳುತ್ತದೆ ಎನ್ನುವಂತಹ ವದಂತೆ ಹಬ್ಬಿಸಿರಬಹುದು ಎನ್ನಲಾಗಿದೆ.

 

ಈಗ ಆನ್ಲೈನ್ನಲ್ಲಿ ಆಧಾರ್ ವಿವರನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು. ಆಧಾರ್ ಸೆಂಟರ್ಗೆ ಹೋಗಿಯೂ ಅಪ್ಡೇಟ್ ಮಾಡಿಸಬಹುದು. ಆದರೆ, ಅಲ್ಪಮೊತ್ತದ ಶುಲ್ಕ ಕೊಡಬೇಕು. ಜೂನ್ 14ರ ಬಳಿಕವೂ ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಬಹುದು. ಆದರೆ ಉಚಿತ ಇರುವುದಿಲ್ಲ. 50 ರೂ ಅಥವಾ ಅದರ ಆಸುಪಾಸಿನ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

 

ಆನ್ಲೈನ್ನಲ್ಲಿ ಆಧಾರ್ ವಿವರ ಅಪ್ಡೇಟ್ ಮಾಡುವುದು ವಿಧಾನ:

ಯುಐಡಿಎಐನ ಸೆಲ್ಫ್ ಸರ್ವಿಸ್ ಪೋರ್ಟಲ್ ssup.uidai.gov.in/ssup/ ಗೆ ಹೋಗಿ, ಆಧಾರ್ ನಂಬರ್, ಒಟಿಪಿ ಬಳಸಿ ಲಾಗಿನ್ ಆಗಿ ಆದ ಬಳಿಕ ‘ಸರ್ವಿಸಸ್’ ಟ್ಯಾಬ್ ಅಡಿಯಲ್ಲಿ ‘ಅಪ್ಡೇಟ್ ಆಧಾರ್ ಆನ್ಲೈನ್’ ಅನ್ನು ಆಯ್ಕೆ ಮಾಡಿ. ಇಲ್ಲಿ ‘ಪ್ರೊಸೀಡ್ ಟು ಅಪ್ಡೇಟ್ ಆಧಾರ್’ ಅನ್ನು ಕ್ಲಿಕ್ ಮಾಡಿ. ಬಳಿಕ ನಿಮಗೆ ಯಾವ ವಿವರ ಬದಲಿಸಬೇಕೋ ಅದನ್ನು ಆಯ್ದುಕೊಳ್ಳಿ.

ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ಹೆಸರು ಕಾಣುತ್ತದೆ. ನೀವು ಬೇಕಾದ ವಿವರವನ್ನು ಬದಲಿಸಬಹುದು. ಅದಕ್ಕೆ ಪೂರಕವಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ವಿವರ ಬದಲಾವಣೆಯನ್ನು ಖಚಿತಪಡಿಸಿದರೆ ಅದು ಅಪ್ಡೇಟ್ ಆಗುತ್ತದೆ.

Leave A Reply

Your email address will not be published.