Harsish Poonja: ‘ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ ಆದ್ರೆ ಪೋಲೀಸರ ಕಾಲರ್ ಕೂಡ ಹಿಡಿಯುತ್ತೇನೆ’ – ಶಾಸಕ ಹರೀಶ್ ಪೂಂಜ ಅಬ್ಬರ !!

Harish Poonja: ಬಿಜೆಪಿಯ ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಕಾಲರ್ ಹಿಡಿಯಲೂ ನಾನು ಸಿದ್ಧ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ(Harish Poonja) ಅಬ್ಬರಿಸಿದ್ದಾರೆ.

ಇದನ್ನೂ ಓದಿ: Nalin Kumar: ಹರೀಶ್ ಪೂಂಜರನ್ನು ಅರೆಸ್ಟ್ ಮಾಡಿದ್ರೆ ದ.ಕ ಜಿಲ್ಲೆ ಬಂದ್ ಮಾಡ್ತೇವೆ – ನಳೀನ್ ಕುಮಾರ್ ಹೇಳಿಕೆ !!

ಕೆಲವು ದಿನಗಳ ಹಿಂದಷ್ಟೇ ಬೆಳ್ತಂಗಡಿ(Belthangady)ಮಿನಿ ವಿಧಾನ ಸೌಧದ(Mini Vidhana Soudha) ಎದುರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ(Shashiraj Shetty) ಬಂಧನ ವಿರೋಧಿಸಿ ಹಾಗೂ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲಿಸಿದನ್ನು ವಿರೋಧಿಸಿ ಬೆಳ್ತಂಗಡಿ ಬಿಜೆಪಿ(BJP) ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹರೀಶ್ ಪೂಂಜ ಅವರು ‘ನನ್ನ ಮೇಲೆ ಎರಡು ಬಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದೀರಿ ತಾಕತ್ತಿದ್ದರೆ ಬಂಧಿಸಿ. ಬಿಜೆಪಿಯ ಕಾರ್ಯಕರ್ತರಿಗೆ ಅನ್ಯಾಯ ಮಾಡಿದರೆ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಕಾಲರ್ ಹಿಡಿಯಲೂ ನಾನು ಸಿದ್ದವಿರುತ್ತೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದಾರೆ.

 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(SP) ವಿರುದ್ಧ ಹರಿಹಾಯ್ದ ಅವರು ‘ಶಶಿರಾಜ್ ಬಂಧನ ಆದಾಗ ಸುಬ್ಬಾಪುರ ಮಠ್‌ಗೆ ಫೋನ್ ಮಾಡಿದರೆ ರಿಸೀವ್ ಮಾಡಿಲ್ಲ. ತಹಶೀಲ್ದಾರ್‌ಗೆ ಫೋನ್ ಮಾಡಿದರೆ ಅವರ ಫೋನೂ ಸ್ವಿಚ್ ಆಫ್. ಜಿಲ್ಲೆಯಿಂದ ತಾಲ್ಲೂಕಿನವರೆಗೂ ಇರುವ ನೀವೆಲ್ಲಾ ಕಾಂಗ್ರೆಸ್ ಏಜೆಂಟರಾ? ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯು ಒಬ್ಬ ಶಾಸಕ ಮಾಡಿದ ಕರೆಯನ್ನು ಸ್ವೀಕರಿಸುವುದಿಲ್ಲ ಎಂದಾದರೆ ನೀವು ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುವವರು ಎಂದರ್ಥ. ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ವಿನಾ ಕಾರಣ ಒಳಗೆ ಕುಳ್ಳಿರಿಸುವಾಗ ನಾನು ಆಕ್ರೋಶದಲ್ಲಿಯೇ ಮಾತನಾಡುತ್ತೇನೆ. ಅಧಿಕಾರಯುತವಾಗಿಯೇ ಮಾತನಾಡುತ್ತೇನೆ. ನಿರಪರಾಧಿಗೆ ಶಿಕ್ಷೆ ಆಗದ ಹಾಗೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದು ಕಿಡಿಕಾರಿದ್ದಾರೆ.

 

ಏನಿದು ಪ್ರಕರಣ?

ಅಕ್ರಮ ಕಲ್ಲು ಕ್ವಾರಿ ಹಾಗೂ ಸ್ಪೋಟ ಚಟುವಟಿಕೆ ಕೇಸ್ ನಲ್ಲಿ ರೌಡಿ ಶೀಟರ್ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ(Shashiraj Shetty) ಅವರು ಶಾಮೀಲಾಗಿರುವ ಆರೋಪದ ಮೇಲೆ ಶಶಿರಾಜ್ ಶೆಟ್ಟಿ ಅವರನ್ನು ಪೋಲೀಸರು ಬಂಧಿಸಿದ್ದರು. ಈ ವೇಳೆ ಠಾಣೆಗೆ ಬಂದ ಶಾಸಕರು ರಾತ್ರೋರಾತ್ರಿ ಧರಣಿ ಮಾಡಿ, ಠಾಣೆಗೆ ನುಗ್ಗಿ ಪೋಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅವಾಚ್ಯವಾಗಿ ಬೈದು ಬೆದರಿಸಿದ್ದಾರೆ. ಅಲ್ಲದೆ ತಮ್ಮ ಪಕ್ಷದ ಕಾರ್ಯಕರ್ತನಾದ ಶಶಿರಾಜ್ ಶೆಟ್ಟಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಸದ್ಯ ಈ ಎಲ್ಲಾ ಆರೋಪಗಳ ಮೇರೆಗೆ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಕಲಂ 353,504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Leave A Reply

Your email address will not be published.