Nalin Kumar: ಹರೀಶ್ ಪೂಂಜರನ್ನು ಅರೆಸ್ಟ್ ಮಾಡಿದ್ರೆ ದ.ಕ ಜಿಲ್ಲೆ ಬಂದ್ ಮಾಡ್ತೇವೆ – ನಳೀನ್ ಕುಮಾರ್ ಹೇಳಿಕೆ !!

Nalin Kumar: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಿದರೆ ಇಂದು ದ.ಕ ಜಿಲ್ಲೆ(Dakshina Kannada ) ಯನ್ನು ಬಂದ್ ಮಾಡುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್(Nalin Kumar Kateel) ಹೇಳಿದ್ದಾರೆ.

ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ(MLA Harish Poonja) ಅವರ ಮನೆಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್ ಅವರು “ಶಾಸಕರ ಮೇಲೆ ಕಾಂಗ್ರೆಸ್ ಸರಕಾರದ ಒತ್ತಡದಿಂದಾಗಿ ಕಾನೂನು ಮೀರಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ನಾವು ಯಾವುದೇ ಕಾರಣಕ್ಕೂ ಶಾಸಕ ಹರೀಶ್ ಪೂಂಜರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಇದು ಕಾನೂನು ಉಲ್ಲಂಘನೆ. ಸಂಸದರು, ಶಾಸಕರನ್ನು ಬಂಧಿಸುವ ದುಸ್ಸಾಹಸಕ್ಕೆ ಪೊಲೀಸರು ಕೈಹಾಕಬಾರದು. ಒಂದು ವೇಳೆ ಪೂಂಜರ ಬಂಧನ ಆದ್ರೆ ಇಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಶಾಸಕ ಹರೀಶ್ ಪೂಂಜರ ಮನೆಗೆ ಭೇಟಿ ನೀಡಿದ ಸಂಸದ ಕಟೀಲ್ ಅವರು ಮಾತನಾಡಿ, ಶಾಸಕರು ಕಾನೂನಿಗೆ ಗೌರವ ಕೊಟ್ಟು ನೋಟೀಸು ತೆಗೆದುಕೊಂಡಿದ್ದಾರೆ. ಕಾನೂನಿಗೆ ಗೌರವ ಕೊಟ್ಟು ಪ್ರಕ್ರಿಯೆಯನ್ನು ಪೊಲೀಸರು ಮಾಡಬೇಕು, ಐದು ದಿನ ಕಾಲವಕಾಶವನ್ನು ಕೇಳಿದ್ದಾರೆ. ಶಾಸಕರ ಮೇಲೆ ಪೊಲೀಸರು ಒತ್ತಡ ಹಾಕಿ ಬಂಧಿಸಿದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದಿದ್ದಾರೆ.

Leave A Reply

Your email address will not be published.