Owl Swallowed the Snake :ನ್ಯೂಡಲ್ಸ್ ರೀತಿ ಹಾವನ್ನು ಸರಕ್ಕನೆ ಎಳೆದು ತಿಂದ ಗೂಬೆ – ಮೈ ಝುಮ್ಮೆನ್ನಿಸೋ ವಿಡಿಯೋ ವೈರಲ್!!

Owl Swallowed the Snake : ಸೋಷಿಯಲ್ ಮೀಡಿಯಾಗಳಲ್ಲಿ ನೀವು ಹಲವು ಬಗೆಯ ವೈರಲ್ ವಿಡಿಯೋಗಳನ್ನು ನೋಡಿರುತ್ತೀರಿ. ಆದರೆ ಇದೀಗ ನಾವು ಹೇಳ ಹೊರಟಿರುವ ವಿಡಿಯೋ ವಿಚಾರ ಅಪರೂಪದಲ್ಲಿ ಅಪರೂಪ. ಮಾತ್ರವಲ್ಲ ಅಚ್ಚರಿ, ಕುತೂಹಲ, ರೋಮಾಂಚನ ಎಲ್ಲವನ್ನೂ ಉಂಟುಮಾಡುತ್ತದೆ.

https://www.instagram.com/reel/C41LJ1Boasy/?igsh=MWpidHR4c3F5Nm1rMA==

ಹೌದು, ಗೂಬೆಯೊಂದು ಹಾವೊಂದನ್ನು ನ್ಯೂಡಲ್ಸ್ ರೀತಿ ಹಿಡಿದು ನುಂಗಿದ(Owl Swallowed the Snake ) ರೋಚಕವಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಅಂತೂ ನೋಡಿದರೆ ಮೈ ಝುಮ್ಮೆನ್ನಿಸುತ್ತದೆ.

ಇದನ್ನೂ ಓದಿ: Harsish Poonja: ‘ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ ಆದ್ರೆ ಪೋಲೀಸರ ಕಾಲರ್ ಕೂಡ ಹಿಡಿಯುತ್ತೇನೆ’ – ಶಾಸಕ ಹರೀಶ್ ಪೂಂಜ ಅಬ್ಬರ !!

@reidasserpentesoficial ಎಂಬ ಬಳಕೆದಾರರು Instagramನಲ್ಲಿ ಆಘಾತಕಾರಿ ವಿಡಿಯೋ ಹಂಚಿಕೊಂಡಿದ್ದು ಈ ವೀಡಿಯೊದಲ್ಲಿ, ಗೂಬೆಯು ಒಂದೇ ಗುಟುಕಿನಲ್ಲಿ ಹಾವನ್ನು ನುಂಗುವ ಮೂಲಕ ವೀಕ್ಷಕರನ್ನು ಬೆರಗುಗೊಳಿಸಿದೆ. ಈ ದೃಶ್ಯಾವಳಿಯು ಗೂಬೆಯು ಸಂಪೂರ್ಣ ಹಾವನ್ನು ಒಂದೇ ಗುಟುಕಿನಲ್ಲಿ ಸಲೀಸಾಗಿ ಕಬಳಿಸುವುದನ್ನು ಸೆರೆ ಹಿಡಿದಿದೆ.

ಇದನ್ನೂ ಓದಿ: Remedy for lizard-cockroach: ಹಲ್ಲಿ, ಜಿರಲೆಗಳ ಕಾಟದಿಂದ ರೋಸಿ ಹೋಗಿದ್ದೀರಾ? ಈ ಟ್ರಿಕ್ ಬಳಿಸಿದ್ರೆ ಕಾಂಪೌಂಡ್ ಒಳಗೂ ಬರುವುದಿಲ್ಲ !!

ಹಾವಿನ ಮೇಲೆ ಪ್ರಾಬಲ್ಯ ಸಾಧಿಸುವ, ಕಣ್ಣಿನಲ್ಲೇ, ನೋಡುವ ನೋಟದಿಂದಲೇ ನೋಡುಗರನ್ನು ಒಮ್ಮೆ ಭಯಗೊಳಿಸುವ ಗೂಬೆಯ ಈ ವಿಡಿಯೋ ಕಂಡು ಇದೀಗ ನೆಟ್ಟಿಗರೇ ಬೆಕ್ಕಸಬೆರಗಾಗಿದ್ದಾರೆ.

ಅಂದಹಾಗೆ ಅಪ್ಲೋಡ್ ಆದ ಕೆಲವೇ ಸಮಯದಲ್ಲಿ ಈ ವಿಡಿಯೋ ಲಕ್ಷಗಟ್ಟಲೆ ವೀವ್ಸ್ ಜೊತೆ ಲೈಕ್ಸ್ ಕೂಡ ಪಡೆದಿದೆ. ನೆಟ್ಟಿಗರಂತೂ ಇದಕ್ಕೆ ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದು, ವಿಡಿಯೋ ವೀಕ್ಷಿಸಿದಾಗ ತಮಗಾದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

Leave A Reply

Your email address will not be published.