Breakfast: ಮೊಸರು, ಅವಲಕ್ಕಿಯಲ್ಲಿ ಮಲ್ಲಿಗೆಯಂತ ಇಡ್ಲಿ ರೆಡಿ! ಅಕ್ಕಿ ನೆನೆಸೋದು,ರುಬ್ಬೋದೂ ಚಿಂತೆ ಇನ್ನಿಲ್ಲ!

Breakfast: ಇಡ್ಲಿ ತಿನ್ಬೇಕು ಅಂದ್ರೆ ಒಂದು ದಿನ ಮೊದಲೇ ಅಕ್ಕಿ ನೆನೆಸಬೇಕು, ರುಬ್ಬಬೇಕು ಹೀಗೆ ನಾಲ್ಕೈದು ಕೆಲಸ ಅಂತಾ ಇಡ್ಲಿ ಸಹವಾಸಕ್ಕೆ ಕೆಲವರು ಹೋಗಲ್ಲ. ಆದ್ರೆ ಇನ್ಮುಂದೆ ಇಡ್ಲಿ ತಿನ್ನಬೇಕು ಅಂದ್ರೆ ಟೆನ್ಷನ್ ಆಗಬೇಕಿಲ್ಲ. ಈ ರೆಸಿಪಿ ಫಾಲೋ ಮಾಡಿದರೆ ಕೇವಲ 30 ನಿಮಿಷದಲ್ಲೇ ನೀವು ಮೃದು ಆಗಿರುವ ಇಡ್ಲಿಗಳನ್ನು ಹೊಟ್ಟೆ ತುಂಬಾ ತಿನ್ನಬಹುದು.

ಇದನ್ನೂ ಓದಿ: Vitla: ವಿಟ್ಲ; ವ್ಯಕ್ತಿಯ ಸಾವಿನಲ್ಲಿ ಅನುಮಾನ; ಸಹೋದರನ ದೂರು; ತನಿಖೆಗೆ ಮುಂದಾದ ಪೊಲೀಸರು

ಹೌದು, ಮನೆಯಲ್ಲಿ ಅವಲಕ್ಕಿ, ಮೊಸರು ಇದ್ದರೆ ತುಂಬಾ ಈಸಿಯಾಗಿ ಸಾಫ್ಟ್ ಇಡ್ಲಿ ಮಾಡಬಹುದು. ಹೊರಗಡೆ ಹೋಗ್ಬೇಕು ಅಂದಾಗ ಬೇಗ ಬೇಗ ಬ್ರೇಕ್ ಫಾಸ್ಟ್ (Breakfast) ಮಾಡೋಕೆ ಈ ರೆಸಿಪಿ ಯೂಸ್ ಆಗುತ್ತದೆ.

ಇದನ್ನೂ ಓದಿ: Gold Price: ಚಿನ್ನದ ದರದಲ್ಲಿ 1,000 ರೂ ಇಳಿಕೆ !!

ಇಡ್ಲಿಗೆ ಬೇಕಾಗುವ ಸಾಮಾಗ್ರಿಗಳು ಅವಲಕ್ಕಿ 1 ಕಪ್

ಮೊಸರು ಒಂದೂವರೆ ಕಪ್

ಅಡುಗೆ ಸೋಡಾ ಅರ್ಧ ಟೀ ಸ್ಪೂನ್ ಬಾಂಬೆ ರವೆ – 1 ಕಪ್

ಉಪ್ಪು ರುಚಿಗೆ ತಕ್ಕಷ್ಟು

 

ಸಾಫ್ಟ್ ಇಡ್ಲಿ ಮಾಡುವ ವಿಧಾನ: ಮೊದಲಿಗೆ 1 ಕಪ್ ಪೇಪರ್ ಅವಲಕ್ಕಿಯನ್ನು ನೀರಲ್ಲಿ ಹಾಕಿ ಚೆನ್ನಾಗಿ ತೊಳೆದು ಒಂದು ಬೌಲ್ ಗೆ ಹಾಕಿ ಅದು ಮುಳುಗುವವರೆಗೂ ನೀರು ಹಾಕಿ 30 ನಿಮಿಷ ನೆನೆಸಿಡಬೇಕು. ಇನ್ನೊಂದು ಬೌಲ್ ಗೆ ಒಂದೂವರೆ ಕಪ್ ಮೊಸರು ಹಾಕಿ, ಇದಕ್ಕೆ ಅರ್ಧ ಟೀ ಸ್ಪೂನ್ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು 2 ನಿಮಿಷ ಹಾಗೇ ಬಿಡಬೇಕು.

 

2 ನಿಮಿಷದ ಬಳಿಕ ಮೊಸರಿಗೆ 1 ಕಪ್ ಬಾಂಬೆ ರವೆ ಹಾಕಿ ಮಿಕ್ಸ್ ಮಾಡಬೇಕು. ಈ ಮಿಶ್ರಣವನ್ನು ಸಹ 30 ನಿಮಿಷಗಳ ಕಾಲ ನೆನೆಯಲು ಬಿಡಬೇಕು. 30 ನಿಮಿಷದ ಬಳಿಕ ನೆನೆಸಿದ್ದ ಅವಲಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಮೆತ್ತಗೆ ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕು. 30 ನಿಮಿಷ ನೆನೆಯಲು ಬಿಟ್ಟಿದ್ದ ಮೊಸರು, ರವೆ ಮಿಶ್ರಣ ಸಹ ಹುಳಿ ಬಂದಿರುತ್ತದೆ. ಇದಕ್ಕೆ ರುಬ್ಬಿದ ಅವಲಕ್ಕಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಸ್ವಲ್ಪ ನೀರನ್ನು ಬೆರೆಸುತ್ತಾ ಇಡ್ಲಿ ಹಿಟ್ಟಿನ ಹದಕ್ಕೆ ಹಿಟ್ಟನ್ನು ರೆಡಿ ಮಾಡಿಕೊಳ್ಳಬೇಕು. ಹಿಟ್ಟಿನ ಮಿಶ್ರಣಕ್ಕೆ ರುಚಿಗೆ ಬೇಕಾಗುವಷ್ಟು ಉಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.

 

ನಂತ್ರ ಸ್ಟೌವ್ ಮೇಲೆ ಇಡ್ಲಿ ಪಾತ್ರೆಗೆ ನೀರನ್ನು ಹಾಕಿ ಇಡಬೇಕು. ಇಡ್ಲಿ ತಟ್ಟೆಯ ಮೇಲೆ ಎಣ್ಣೆ ಸವರಿಕೊಂಡು, ಇಡ್ಲಿ ಹಿಟ್ಟು ಹಾಕಿ ಇಡ್ಲಿ ಪಾತ್ರೆಯಲ್ಲಿ ಸುಮಾರು 8-9 ನಿಮಿಷ ಮೀಡಿಯಂ ಫ್ಲೇಮ್ ನಲ್ಲಿ ಇಟ್ಟು ಬೇಯಿಸಿಕೊಳ್ಳಬೇಕು. ನಂತರ ಸ್ಟೌವ್ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಟ್ಟು, ನಂತರ ಇಡ್ಲಿಯನ್ನು ತಟ್ಟೆಯಿಂದ ತೆಗೆದುಕೊಳ್ಳಬೇಕು. ಈ ರೀತಿ ಮಾಡಿದರೆ ಮೃದುವಾದ ಇಡ್ಲಿ ಬಿಸಿಬಿಸಿಯಾಗಿ ತಿನ್ನುವುದಕ್ಕೆ ರೆಡಿಯಾಗುತ್ತದೆ.

Leave A Reply

Your email address will not be published.