Sullia: ಅಕ್ರಮ ಜಾನುವಾರು ಸಾಗಾಟ ಪತ್ತೆ ಹಚ್ಚಿದ ಸಾರ್ವಜನಿಕರು

Sullia: ಪಿಕಪ್ ನಲ್ಲಿ ದನಗಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಸ್ಥಳೀಯರು ಪತ್ತೆಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಲೂರು ಕೆಮ್ರಾಜೆ ಗ್ರಾಮದ ಎಲಿಮಲೆ ಎಂಬಲ್ಲಿ ವರದಿಯಾಗಿದೆ.

ಇದನ್ನೂ ಓದಿ: New Scheme: ಇವರ ಖಾತೆಗಳಿಗೆ 10,000 ಹಣ ಬರೋದು ಪಕ್ಕಾ! ಹೀಗೆ ಅರ್ಜಿ ಸಲ್ಲಿಸಿ

ಎಲಿಮಲೆಯ ಅಂಬೆಕಲ್ಲು ಕಡೆಯಿಂದ 4 ದನಗಳನ್ನು ರಾತ್ರಿ 3 ಗಂಟೆಯ ವೇಳೆಗೆ (ಕೆಎ 21 ಎ 0824) ಪಿಕ್‌ಅಪ್ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿ ತಿಳಿದ ಸ್ಥಳೀಯ ಯುವಕರು ಎಲಿಮಲೆ ಅಂಬೆಕಲ್ಲು ರಸ್ತೆಯ ಕಲ್ಲುಪಣೆ ಎಂಬಲ್ಲಿ ವಾಹನವನ್ನು ಅಡ್ಡ ಗಟ್ಟಿದರು.

ಇದನ್ನೂ ಓದಿ: Belthangady: ರಾತ್ರಿ ಪೋಲೀಸ್ ಠಾಣೆಗೆ ಹಾಜರಾದ ಹರೀಶ್ ಪೂಂಜ- ಜಾಮೀನು ಮೇಲೆ ಬಿಡುಗಡೆ!!

ಈ ವೇಳೆ ಇಬ್ಬರು ಪರಾರಿಯಾಗಿದ್ದು ಇಬ್ಬರನ್ನು ಸ್ಥಳೀಯರು ಹಿಡಿದರೆಂದು ತಿಳಿದು ಬಂದಿದೆ.

ಪುತ್ತೂರಿನ ಹರೀಶ್ ಮತ್ತು ಕೋಣಾಜೆಯ ಇಬ್ರಾಹಿಂ ಎಂಬವರನ್ನು ಸ್ಥಳೀಯರು ಹಿಡಿದಿದ್ದಾರೆ.

Leave A Reply

Your email address will not be published.