Sara Ali Khan: ಸೀಕ್ರೇಟ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಸಾರಾ; ಹುಡುಗ ಯಾರು ಗೊತ್ತೇ?

Sara Ali Khan: ನಟ ನಟಿಯರು ತಮ್ಮ ವೈಯಕ್ತಿಕ ಜೀವನವನ್ನು ಹೆಚ್ಚಾಗಿ ಸೀಕ್ರೆಟ್ ಆಗಿ ಇಡಲು ಬಯಸುತ್ತಾರೆ. ಅಂತೆಯೇ ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಇದೀಗ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್‌ ಆಗ್ತಿದೆ.

ಇದನ್ನೂ ಓದಿ: Kadaba: ಬೈಕ್‌ನೊಂದಿಗೆ ಸೇತುವೆಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

ಹೌದು, ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರಿ ಸಾರಾ ಅಲಿ ಖಾನ್ (Sara Ali Khan) ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡ್ತಿದೆ. ಈ ಬಗ್ಗೆ ಅಭಿಮಾನಿಗಳಿಗೆ ಮೊದಲು ಹುಟ್ಟೋ ಪ್ರಶ್ನೆ ಹುಡುಗ ಯಾರು, ಮದುವೆ ಯಾವಾಗ ಅನ್ನೋದು. ಒಟ್ಟಿನಲ್ಲಿ ಖ್ಯಾತ ನಟ ರಿಂದ ಹಿಡಿದು ಕ್ರಿಕೆಟಿಗ ಶುಭ್ ಮನ್ ಗಿಲ್ ವರೆಗೆ ಅನೇಕರ ಜೊತೆ ಸಾರಾ ಅಲಿ ಖಾನ್ ನಂಟು ಇದ್ದು, ಇದೀಗ ಕೊನೆಗೆ ಅವರ ಕೈ ಹಿಡಿವ ಅದೃಷ್ಟವಂತ ಹುಡುಗ ಯಾರು ಅನ್ನೋದು ನೋಡಬೇಕಾಗಿದೆ.

ಇದನ್ನೂ ಓದಿ: Canara Bank: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ; ಮಾಸಿಕ ರೂ.30ಸಾವಿರ ಸಂಬಳ, ಈ ಕೂಡಲೇ ಅರ್ಜಿ ಸಲ್ಲಿಸಿ

ವಿಶೇಷ ಅಂದ್ರೆ ಇನ್ನೂ ಸ್ವಲ್ಪ ದಿನದಲ್ಲೇ ಸಾರಾ ಅಲಿ ಖಾನ್ ಮದುವೆ(Marriage) ದಿನಾಂಕ ಕೂಡ ಅನೌನ್ಸ್‌ ಮಾಡ್ತಾರಂತೆ. ಸದ್ಯ, ಉದ್ಯಮಿಯೊಬ್ಬರ ಜೊತೆ ಈಗಾಗಲೇ ಸಾರಾ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದು, ನಟಿ ಮದುವೆಗೆ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.