Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ಹಿಸ್ಟರಿ ಹೀಗಿದೆ!

Arecanut Price: ಕೆಲವು ದಿನಗಳಿಂದ (Arecanut Price) ಅಡಿಕೆ ಧಾರಣೆ ಇಳಿಮುಖದ ಕಡೆಗೆ ವಾಲಿದೆ. ಮಾಹಿತಿ ಪ್ರಕಾರ ಜೂನ್ ನಾಲ್ಕರ ನಂತರ ಬೆಲೆ ಏರಿಕೆ ಅಧಿಕೃತ ಸ್ಥಿರತೆ ಪಡೆಯಲಿದೆ. ಕಳೆದ ವಾರ ಅಂದರೆ 14.05.2024ರಂದು ಗರಿಷ್ಠ ₹ 54,596 ದಾಖಲಿಸಿದ್ದ ರಾಶಿ ಇಡಿ ಧಾರಣೆ, ದಿನ ದಿನವೂ ಇಳಿಯುತ್ತ, ಇವತ್ತು ₹ 53,009 ಬಂದು ನಿಂತಿದೆ. ಸರಿ ಸುಮಾರು ₹ 1,500 ದರ ‘ಅಡಿಕೆ ರಾಶಿ ಇಡಿ’ಯಲ್ಲಿ ಕೊರತೆ ಕಾಣಿಸಿದೆ. ಅಡಿಕೆ ರಾಶಿ ಇಡಿಯಲ್ಲಿ ₹1,500 ಇಳಿಮುಖವಾಗಿದ್ದರೆ, ಅಡಿಕೆ ಬೆಟ್ಟೆ ಧಾರಣೆಯಲ್ಲಿ ಕೇವಲ ₹.500 ಮಾತ್ರ ಇಳಿಕೆಯಾಗಿದ್ದು, ಸದ್ಯಕ್ಕೆ ಸ್ಥಿರತೆಯನ್ನೇ ಉಳಿಸಿಕೊಂಡಿದೆ.

ಇದನ್ನೂ ಓದಿ: RBI New Rules: ಎರಡು ಬ್ಯಾಂಕ್ ಖಾತೆಗೆ ಒಂದೇ ಮೊಬೈಲ್ ನಂಬರ್ ನೀಡಿದವರಿಗೆ RBI ಕಡೆಯಿಂದ ಹೊಸ ರೂಲ್ಸ್ ಜಾರಿ!

ಶಿವಮೊಗ್ಗ APMC ದಾಖಲೆಗಳ ಪ್ರಕಾರ ಹೆಚ್ಚು ವ್ಯಾಪಾರವಾಗುವ ‘ರಾಶಿ ಇಡಿ ಅಡಿಕೆ’ ಪೂರೈಕೆ ‘ಏರಿಳಿಕೆ’ ಹೀಗಿದೆ: 

ದಿನಾಂಕ 14.05.2024 – 15,921 ಕ್ವಿಂಟಾಲ್

ದಿನಾಂಕ 15.05.2024 – 5,435 ಕ್ವಿಂಟಾಲ್

ದಿನಾಂಕ 16.05.2024 – 14,464 ಕ್ವಿಂಟಾಲ್

ದಿನಾಂಕ 20.05.2024 – 3231 ಕ್ವಿಂಟಾಲ್

ದಿನಾಂಕ 21.05.2024 – 11,538 ಕ್ವಿಂಟಾಲ್

ರಾಶಿ ಇಡಿ ಧಾರಣೆ 53,009ಕ್ಕೆ ಇಳಿಕೆಯಾದಾಗ, ಗೊರಬಲು ಅಡಿಕೆ ₹.38,800 ಆಸು ಪಾಸಿನಲ್ಲಿದೆ.

ಇದನ್ನೂ ಓದಿ: Astro Tips: ಕಾಗೆಗಳು ಮನೆಯ ಹತ್ತಿರ ಬಂದು ಕೂಗಿದರೆ ಏನರ್ಥ? ಇಲ್ಲಿದೆ ಕಂಪ್ಲೀಟ್ ಆಸ್ಟ್ರೋ ಟಿಪ್ಸ್

ಸಿಪ್ಪೆ ಗೋಟು ದರ ಏರಿಕೆ

ಈ ಎಲ್ಲ ವೆರೈಟಿಗಳ ಧಾರಣೆಯ ಇಳಿಕೆ ಕಾಣುತ್ತಿರುವಾಗ, ಸಿಪ್ಪೆ ಗೋಟು ದರ ಮಾತ್ರ ಸಣ್ಣ ಮಟ್ಟದ ಏರಿಕೆಯನ್ನು ದಾಖಲಿಸಿದೆ.

ಇನ್ನು APMC ಮಂಡಿ ಮತ್ತು ಸೊಸೈಟಿಗಳಲ್ಲಿ ಸಿಪ್ಪೆ ಗೋಟು ಅಡಿಕೆ ವ್ಯವಹಾರ ಬಹಳ ಕಮ್ಮಿ ಮತ್ತು ನಗದು ಮಾರುಕಟ್ಟೆಯಲ್ಲೇ ಹೆಚ್ಚಾಗಿ ಸಿಪ್ಪೆ ಗೋಟು ಅಡಿಕೆ ವ್ಯಾಪಾರ ಕಾಣುವುದು. ಪ್ರತೀ ವರ್ಷವೂ ನಗದು ಮಾರುಕಟ್ಟೆಯಲ್ಲಿ ಮೇ 15 ರ ನಂತರ ಸಿಪ್ಪೆ ಗೋಟು ಅಡಿಕೆ ಚೇತರಿಕೆ ಕಾಣುತ್ತದೆ. ಅದರಂತೆ ಮೇ 15 ರಿಂದ ಸಿಪ್ಪೆ ಗೋಟು ಅಡಿಕೆ ಏರಿಕೆಯೊಂದಿಗೆ ₹.19,000 ದಲ್ಲಿ ವ್ಯಾಪಾರ ನೆಡೆಯುತ್ತಿದೆ.

ಸದ್ಯ ಸಿಪ್ಪೆ ಗೋಟು ದರ ಇನ್ನಷ್ಟು ಏರುವ ನಿರೀಕ್ಷೆಯಿದ್ದು, ಸದ್ಯದಲ್ಲೇ ಓಪನ್ ನಗದು ಮಾರುಕಟ್ಟೆಯಲ್ಲಿ ₹.20,000 ದಾಟುವ ನಿರೀಕ್ಷೆ ರೈತರದು. ಒಟ್ಟಿನಲ್ಲಿ ಅಡಿಕೆ ಬೆಳೆಗಾರರ ನಿರೀಕ್ಷೆ ಮತ್ತು ಅಭಿಪ್ರಾಯ ಪ್ರಕಾರ, ಎಲ್ಲಾ ವೆರೈಟಿ ಅಡಿಕೆಗಳ (ಹಸ, ಬೆಟ್ಟೆ, ಇಡಿ, ಗೊರಬಲು, ಸಿಪ್ಪೆ ಗೋಟು) ಧಾರಣೆಗಳು ಚುನಾವಣೆ ನೀತಿ ಸಂಹಿತೆ ತೆರವುಗೊಂಡ ಮೇಲೆ, ವ್ಯಾಪಾರ ವಹಿವಾಟು ತೀವ್ರತೆ ಪಡೆದು, ಧಾರಣೆ ಗ್ರಾಫ್ ಮೇಲ್ಮುಖವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

Leave A Reply

Your email address will not be published.