Health Tips: ತುಳಸಿ ಇದ್ರೆ ಸಾಕು ಅಜೀರ್ಣ-ಗ್ಯಾಸ್ಟ್ರಿಕ್ ಇದ್ದವರಿಗೆ ಔಷಧಿಯೇ ಬೇಕಿಲ್ಲ!

Health Tips: ತುಳಸಿ ಶಕ್ತಿಯುತವಾದ ಗಿಡಮೂಲಿಕೆಯಾಗಿದ್ದು, ತುಳಸಿ ಎಲೆಗಳಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಅನೇಕ ವಿಟಮಿನ್ ಹಾಗೂ ಖನಿಜಾಂಶಗಳು ಅಡಗಿವೆ. ಮುಖ್ಯವಾಗಿ ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ ಹಾಗೂ ಒಮೆಗಾ 3 ಆಮ್ಲಗಳು ಸಿಗುತ್ತವೆ. ಇದರಲ್ಲಿ ತಾಮ್ರ, ಕ್ಯಾಲ್ಸಿಯಂ, ಮ್ಯಾಂಗನೀಸ್, ಪಾಸ್ಪರಸ್, ಜಿಂಕ್ ಹಾಗೂ ಪೋಟಾಸಿಯಂ ಪ್ರಮಾಣ ಹೇರಳವಾಗಿ ಕಂಡು ಬರುತ್ತದೆ. ಆದಕಾರಣ ಉತ್ತಮ ಆರೋಗ್ಯ ಲಾಭಗಳಿವೆ (Health Tips) .

 

ಮುಖ್ಯವಾಗಿ ಜೀರ್ಣಶಕ್ತಿಯನ್ನು ನಮ್ಮದಾಗಿಸಿ ಕೊಳ್ಳಲು ತುಳಸಿ ಎಲೆಗಳನ್ನು ಸೇವಿಸುವುದು ಒಳ್ಳೆಯದು. ಆರೋಗ್ಯ ತಜ್ಞರ ಪ್ರಕಾರ, ಹೊಟ್ಟೆಯ ಆಮ್ಲಿಯತೆಯನ್ನು ಕಡಿಮೆ ಮಾಡಲು ಎರಡರಿಂದ ಮೂರು ತುಳಸಿ ಎಲೆಗಳನ್ನು ಜಗಿದು ಸೇವಿಸುವುದು ಉತ್ತಮ.

 

ನೀವು ಕುಡಿಯುವ ಯಾವುದಾದರೂ ಆರೋಗ್ಯಕರವಾದ ಜ್ಯೂಸ್ ನಲ್ಲಿ ತುಳಸಿ ಎಲೆಗಳನ್ನು ಸೇರಿಸಿ ಸೇವಿಸಿ.

ಉದಾಹರಣೆಗೆ ಎಳನೀರು, ನಿಂಬೆ, ಹಣ್ಣಿನ ರಸ ಅಥವಾ ಮಜ್ಜಿಗೆಯಲ್ಲಿ ಎರಡರಿಂದ ಮೂರು ಸ್ಪೂನ್ ತುಳಸಿ ಎಲೆಗಳ ರಸ ಸೇರಿಸಿ ಸೇವಿಸಿ. ಇದು ಅಜೀರ್ಣತೆ ಸಮಸ್ಯೆಯನ್ನು ದೂರ ಮಾಡುವಲ್ಲಿ ನೆರವಾಗುತ್ತದೆ.

 

ತುಳಸಿ ಎಲೆ ನಮ್ಮ ಹೊಟ್ಟೆ ಆಮ್ಲವನ್ನು ಉಪಶಮನ ಮಾಡುತ್ತದೆ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾದ ಕಾರಣದಿಂದ ಅಲ್ಸರ್ ಉಂಟಾಗದ ಹಾಗೆ ನೋಡಿಕೊಳ್ಳುತ್ತದೆ. ಕೆಟ್ಟುಹೋದ ಹೊಟ್ಟೆಯನ್ನು ಸರಿಪಡಿಸುತ್ತದೆ.

ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫೆರಲ್ ಹಾಸ್ಪಿಟಲ್ ನಲ್ಲಿ ಮುಖ್ಯ ಆಹಾರ ತಜ್ಞರಾಗಿರುವ ಪವಿತ್ರ ಎನ್ ರಾಜ್ ಪ್ರಕಾರ, ತುಳಸಿ ಎಲೆಗಳಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳ ಪ್ರಮಾಣ ಹೇರಳವಾಗಿದೆ.

ಜೊತೆಗೆ ಇದರಲ್ಲಿ ಬೀಟಾ ಕ್ಯಾರೋಟಿನ್ ತರಹದ ಇನ್ನು ಅನೇಕ ಆಂಟಿ ಆಕ್ಸಿಡೆಂಟ್ ಅಂಶಗಳು ಕೂಡ ಸಾಕಷ್ಟು ಸಿಗುತ್ತವೆ.

ಇದು ಎದೆಯುರಿ, ಅಜೀರ್ಣತೆ, ವಾಕರಿಕೆ, ವಾಂತಿ ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತದೆ.

Leave A Reply

Your email address will not be published.