Belthangady : ಶಾಸಕ ಹರೀಶ್ ಪೂಂಜರಿಂದ ಹಿಂದೂ ಧರ್ಮಕ್ಕೆ ಅಪಮಾನ?!

Belthangady: ದ.ಕ ಜಿಲ್ಲೆಯ ಬೆಳ್ತಂಗಡಿ(Belthangady) ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಲ್ಲಿನ ಶಾಸಕರಾದ ಹರೀಶ್ ಪೂಂಜ(Harish Poonja) ವಿಚಾರವಾಗಿ ನಡೆದ ಕೆಲವು ಹೈಡ್ರಾಮಗಳು ರಾಜ್ಯದ ಗಮನ ಸೆಳೆದಿದೆ. ಇದೀಗ ಈ ವಿಚಾರವಾಗಿ ಹರೀಶ್ ಪೂಂಜರ ಮೇಲೆ ಮತ್ತೊಂದು ಆರೋಪ ಕೇಳಿಬಂದಿದ್ದು, ಶಾಸಕರು ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಇದನ್ನೂ ಓದಿ: Credit Cards: ಕ್ರೆಡಿಟ್ ಕಾರ್ಡ್ ಯೂಸ್ ಮಾಡ್ತೀರ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

ಪೋಲೀಸರ ಕಾರ್ಯಕ್ಕೆ ಅಡ್ಡಿಪಡಿಸಿದರೆಂದು ಹರೀಶ್ ಪೂಂಜ ವಿರುದ್ಧ ದೂರು ದಾಖಲಿಸಿದ್ದಕ್ಕಾಗಿ ಬೆಳ್ತಂಗಡಿ ಮಿನಿ ವಿಧಾನಸೌಧಧದ ಎದುರು ಬಿಜೆಪಿ ನಾಯಕರು ಪ್ರತಿಭಟನೆ ಏರ್ಪಡಿಸಿದ್ದರು. ಈ ಸಮಯದಲ್ಲಿ ಮಾತನಾಡಿದ ಹರೀಶ್ ಪೂಂಜ ಅವರು SP, ತಹಶೀಲ್ದಾರ್, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಮ(Rakshith Shivram) ಅವರನ್ನು ಕಾಗೆಗೆ ಹೋಲಿಸಿದ್ದರು. ಇದನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ವಾಗ್ದಾಳಿ ನಡೆಸಿ ಆರೋಪ ಮಾಡಿದೆ.

ಇದನ್ನೂ ಓದಿ: Weather Updates: ಈ ಸ್ಥಳಗಳಲ್ಲಿ ಜೋರಾಗಿ ಮಳೆ ಬರುವ ಸಾಧ್ಯತೆ ಹೆಚ್ಚು! ಮೀನುಗಾರರಿಗೆ ಬಿಗ್ ಅಲರ್ಟ್

ಹರೀಶ್ ಪೂಂಜ ಹೇಳಿದ್ದೇನು?

ಹರೀಶ್ ಪೂಂಜ ಪ್ರತಿಭಟನೆಯಲ್ಲಿ ರಕ್ಷಿತ್ ಶಿವರಾಮರನ್ನು ಮಲ್ಲೇಶ್ವರಂನಿಂದ ಹಾರಿ ಬಂದ ಕಾಗೆ ಎಂದು ಹೇಳಿದ್ದರು.

ಕಾಂಗ್ರೆಸ್ ಹೇಳಿದ್ದೇನು?

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯ ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮರ ಅವರನ್ನು ಹೀಯಾಳಿಸಲು ಹೋಗಿ ಶಾಸಕ ಹರೀಶ್ ಪೂಂಜರಿಂದ ಹಿಂದೂ ಧರ್ಮಕ್ಕೆ ಅವಮಾನಕರ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ ಹಿಂದೂಧರ್ಮವನ್ನು ಇವರು ದತ್ತು ತೆಗೆದುಕೊಂಡಿದ್ದರಾ?, ಹಿಂದೂಧರ್ಮದ ಬಗ್ಗೆ ನಂಬಿಕೆಯಿರುವವರಿಗೆ ಹಿಂದೂ ಧರ್ಮದಲ್ಲಿ ಕಾಗೆಗೆ ಎಷ್ಟು ಬೆಲೆಯಿದೆ ಎಂದು ಗೊತ್ತಿಲ್ಲವೇ?. ನಮ್ಮ ಪೂರ್ವಜರಿಗೆ ಸದ್ಗತಿ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ನೋಡಲು ಎಡೆಯನ್ನು ಕಾಗೆಗೆ ಇಡಲಾಗುತ್ತದೆ. ಕಾಗೆಯನ್ನು ಶನಿದೇವನ ವಾಹನವೆಂದೇ ನಂಬಲಾಗುತ್ತದೆ. ಕಾಗೆಯನ್ನು ಹೋಲಿಸಿ ಹೇಳಿರುವುದು ನೇರವಾಗಿ ಹಿಂದೂಧರ್ಮಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿದ್ದಾರೆ.

Leave A Reply

Your email address will not be published.