Women Health Tips: ಮಹಿಳೆಯರೇ ಎಚ್ಚರ! ಈ ಟೆಸ್ಟ್ ಮಾಡಲು ಮರೆಯದಿರಿ!

Women Health Tips: ಕುಟುಂಬದ ಅಡಿಪಾಯ ಆಗಿರುವ ಮಹಿಳೆಯರ ಆರೋಗ್ಯವು (Women Health) ಹಲವು ರೀತಿಯಲ್ಲಿ ಪುರುಷರಿಗಿಂತ ಭಿನ್ನವಾಗಿದೆ. ಮೂತ್ರನಾಳದ ಪರಿಸ್ಥಿತಿಗಳು, ಗರ್ಭ ಧರಿಸುವಿಕೆ ಸಮಸ್ಯೆ , ಮಗು ಹೆರುವಿಕೆ, ಲೈಂಗಿಕವಾಗಿ ಹರಡುವ ರೋಗಗಳು ಈ ಎಲ್ಲಾ ಕಾರಣದಿಂದ ಮಹಿಳೆಯರಿಗೆ ಹೆಚ್ಚಾಗಿ ಹಾನಿಯುಂಟು ಮಾಡಬಹುದು. ವಿಶೇಷವಾಗಿ ಮಹಿಳೆಯರು ಕೆಲವು ಮಾರಣಾಂತಿಕವಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇದಕ್ಕೆ ಪ್ರಮುಖವಾದ ಕಾರಣ ಕೆಲವು ಕಾಯಿಲೆಗಳು ಅನುವಂಶೀಯವಾಗಿ ಬಂದರೆ ಇನ್ನು ಕೆಲವು ಜೀವನ ಶೈಲಿಯ ಹಾಗೂ ಆಹಾರ ಪದ್ಧತಿಯ ಕಾರಣದಿಂದ ಕಂಡು ಬರುತ್ತವೆ. ಇದರ ಜೊತೆಗೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಕೂಡ ಆಗಿರಬಹುದು.

ಅದರಲ್ಲೂ 30 ದಾಟಿದ ಮಹಿಳೆಯರು ಇಂದು ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿ ಕೊಂಡಿದ್ದಾರೆ. ಅದಕ್ಕಾಗಿ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಕಡ್ಡಾಯವಾಗಿ ಕೆಲವೊಂದು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಬಿಪಿ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆ:

ಹೃದಯವು ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕಾಲಕಾಲಕ್ಕೆ ಬಿಪಿ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆಯನ್ನು ಮಾಡಬೇಕು. ಏಕೆಂದರೆ ವಯಸ್ಸಾದಂತೆ ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ.

ಸ್ತನ ಪರೀಕ್ಷೆ:

ಋತುಚಕ್ರದ ನಂತರ ಪ್ರತಿ 3-4 ತಿಂಗಳಿಗೊಮ್ಮೆ ಸ್ವಯಂ ಸ್ತನ ಪರೀಕ್ಷೆಯನ್ನು ಮಾಡಿಕೊಳ್ಳಬೇಕು. 20- 35 ವಯಸ್ಸಿನಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ಸ್ತ್ರೀರೋಗ ತಜ್ಞರಿಂದ ಸ್ತನ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. 35ರ ನಂತರ ವರ್ಷಕ್ಕೊಮ್ಮೆ ಈ ಪರೀಕ್ಷೆ ಕಡ್ಡಾಯ.

ಸ್ತನ ಕ್ಯಾನ್ಸ‌ರ್ ಪರೀಕ್ಷೆ: 

40 ವಯಸ್ಸಿನ ಬಳಿಕ ಸ್ತನ ಕ್ಯಾನ್ಸ‌ರ್ ಅನ್ನು ಪರೀಕ್ಷೆಯನ್ನು ಮಹಿಳೆಯರು ಪ್ರತಿ ವರ್ಷ ಅಥವಾ ಎರಡು ವರ್ಷಗಳಿಗೊಮ್ಮೆ ಮಾಡಿಸಿಕೊಳ್ಳಬೇಕು. ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಕಡ್ಡಾಯವಾಗಿ ಅಂಥವರು ಈ ಪರೀಕ್ಷೆ ಮಾಡಿಸಿಕೊಳ್ಳುವುದು.

ಮೂಳೆ ಸಾಂದ್ರತೆ: 

ಅಷ್ಟೇ ಅಲ್ಲ 30 ರಿಂದ 40 ವರ್ಷ ವಯಸ್ಸಿನ ಮಹಿಳೆಯರು ಮೂಳೆ ಸಾಂದ್ರತೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ. ಆಸ್ಟಿಯೊಪೊರೋಸಿಸ್ ಕಡಿಮೆಯಾಗುತ್ತದೆ.

ಮಧುಮೇಹ ಪರೀಕ್ಷೆ:

30 ವರ್ಷ ದಾಟಿದ ಮಹಿಳೆಯರಿಗೆ ಬೊಜ್ಜು ಅಥವಾ ಹಾರ್ಮೋ ನುಗಳ ಬದಲಾವಣೆ, ಕೌಟುಂಬಿಕ ಇತಿಹಾಸ ಇವೆಲ್ಲದರ ಕಾರಣಗಳಿಂದ ಗರ್ಭವಸ್ಥೆಯಲ್ಲಿ ಸಕ್ಕರೆ ಕಾಯಿಲೆಯನ್ನು ಹೊಂದುವ ಸಾಧ್ಯತೆ ಇರುತ್ತದೆ.

ಕರುಳಿನ ಕ್ಯಾನ್ಸ‌ರ್ ಪರೀಕ್ಷೆ: 

45 ವರ್ಷ ವಯಸ್ಸಿನ ನಂತರ, ಕೊಲೊರೆಕ್ಟಲ್ ಕ್ಯಾನ್ಸರ್ ಅನ್ನು ತಪ್ಪಿಸಲು ಮಹಿಳೆಯರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಇದು ಸಿಗ್ಮೋಡೋಸ್ಕೊಪಿ ಅಥವಾ ಕೊಲೊನೋಸ್ಕೋಪಿಯನ್ನು ಒಳಗೊಂಡಿದೆ.

Leave A Reply

Your email address will not be published.