CM Siddaramaiah: ಕಾಲೇಜು ದಿನಗಳ ತಮ್ಮ ಪ್ರೇಮ ಕಹಾನಿ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ !!

CM Siddaramaiah: ನಾನು ಆಗ ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬಳನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೂ ಒಪ್ಪಲಿಲ್ಲ, ಅವರ ಮನೆಯವರೂ ಒಪ್ಪಲಿಲ್ಲ. ಅದು ಅಲ್ಲಿಗೆ ನಿಂತುಹೋಯಿತು ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ಹೇಳಿದ್ದಾರೆ.

ಇದನ್ನೂ ಓದಿ: Ram Mandir: ರಾಮ ಮಂದಿರಕ್ಕೆ ಇನ್ನು ಮುಂದೆ ಈ ವಸ್ತು ನಿಷೇಧ! ಇಲ್ಲಿದೆ ನ್ಯೂ ರೂಲ್ಸ್

ಜನ ಸ್ಪಂದನ(Janaspandana) ಮತ್ತು ಮಾನವ ಮಂಟಪ(Manava Mantapa) ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆಯ ವೆಬ್ ಸೈಟ್ ಉದ್ಘಾಟನೆ ಮಾಡಿ ಮಾತನಾಡಿದ ಅವರು ತಮ್ಮ ಕಾಲೇಜು ದಿನಗಳನ್ನು ನೆನೆದರು. ಈ ಸಂದರ್ಭದಲ್ಲಿ ಆಗ ತಾವು ತಮ್ಮ ಸ್ನೇಹಿತೆಯನ್ನು ಮದುವೆ ಆಗಬೇಕೆಂದು ನಿರ್ಧರಿಸಿದ್ದ ವಿಚಾರವನ್ನು ಬಹಿರಂಗ ಪಡಿಸಿದರು.

ಇದನ್ನೂ ಓದಿ: Mangaluru: ಭಾರೀ ಮಳೆಗೆ ಅವಾಂತರ; ಚರಂಡಿ ತೋಡಿಗೆ ರಿಕಾ ಬಿದ್ದು, ಚಾಲಕ ಸಾವು

ಆಗ ಮಾತನಾಡಿದ ಅವರು ‘ನನಗೂ ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು. ಕಾನೂನು ಓದುವಾಗ ನನಗೊಬ್ಬಳು ಸ್ನೇಹಿತೆ ಇದ್ದಳು. ಅವಳು ಬೇರೆ ಜಾತಿ. ಆವಳನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಅದನ್ನು ಆಕೆಯ ಬಳಿ ಹೇಳಿದಾಗ ಆ ಹುಡುಗಿ ಒಪ್ಪಲಿಲ್ಲ. ಅವರ ಮನೆಯವರೂ ಒಪ್ಪಲಿಲ್ಲ. ಅದು ಅಲ್ಲಿಗೆ ನಿಂತು ಹೋಯಿತು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿದ್ದವರು ಸಿದ್ದರಾಮಯ್ಯನ ಪ್ರೇಮ ಕಹಾನಿ ಕೇಳಿ ನಕ್ಕು ಸುಮ್ಮನಾಗಿದ್ದಾರೆ.

Leave A Reply

Your email address will not be published.