Gold Price: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ! ಪ್ರತೀ 10 ಗ್ರಾಂಗೆ 1,000 ರೂ.ನಷ್ಟು ಇಳಿಕೆ!

Gold Price: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Price) ಕೊಂಚ ಇಳಿಮುಖವಾಗಿದ್ದು, ಗ್ರಾಹಕನಿಗೆ ಕೊಳ್ಳಲು ಇದು ಬೆಸ್ಟ್‌ ಟೈಮ್. ಹೌದು, ಆಭರಣ ಪ್ರಿಯರು ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತೆ ಅಂತಾ ಕಾಯುತ್ತಿರುತ್ತಾರೆ. ಇದೀಗ ಅಂತಹವರಿಗೆ ಭರ್ಜರಿ ಸಿಹಿ ಸುದ್ದಿ ಬಂದಿದೆ.

ಇದನ್ನೂ ಓದಿ: Titanic Ship: ಟೈಟಾನಿಕ್ ಹಡಗು ಮುಳುಗಲು ಇದೇ ಕಾರಣ! ನಿಮ್ಗೆ ಗೊತ್ತ್ತಿಲ್ಲದ ಇಂಟ್ರೆಸ್ಟಿಂಗ್ ಡೇಟೆಲ್ಸ್ ಇಲ್ಲಿದೆ

ಸರಾಸರಿ ಪ್ರಕಾರ ದೇಶದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆಯಾಗಿದೆ. ಗುರುವಾರ ದಿಲ್ಲಿಯಲ್ಲಿ 1,050 ರೂ. ಇಳಿಕೆಯೊಂದಿಗೆ 10 ಗ್ರಾಂ ಚಿನ್ನದ ಬೆಲೆ 73,550 ರೂ.ಗೆ ತಲುಪಿದೆ.

ಇದನ್ನೂ ಓದಿ: Udupi: ನಡುರಸ್ತೆಯಲ್ಲೇ ಎರಡು ತಂಡಗಳ ಗ್ಯಾಂಗ್‌ವಾರ್‌

ಬುಧವಾರ ಇದು 74,600 ರೂ.ಗಳಾಗಿತ್ತು. ಇನ್ನು ಬೆಳ್ಳಿ ಬೆಲೆಯೂ 2,500 ರೂ.ಗಳಷ್ಟು ಇಳಿಕೆಯಾಗಿದ್ದು, ಒಂದು ಕೆ.ಜಿ.ಗೆ 92,600 ರೂ. ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 3,300 ರೂ. ಇಳಿಕೆಯಾಗಿ ಕೆ.ಜಿ.ಗೆ 92,500 ರೂ.ಗಳಾಗಿವೆ. ಚಿನ್ನದ ಬೆಲೆ ಬೆಂಗಳೂರಿನಲ್ಲಿ 1,000 ರೂ. ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 67,300 ರೂ.ಗಳಿಗೆ ತಲುಪಿದೆ.

Leave A Reply

Your email address will not be published.