Driving Licence: ಲೈಸೆನ್ಸ್ ಗಾಗಿ ಡ್ರೈವಿಂಗ್ ಟೆಸ್ಟ್ ನೀಡಲು ಇನ್ಮುಂದೆ RTOಗೆ ಹೋಗಬೇಕಿಲ್ಲ – ಇಲ್ಲಿಗೆ ಹೋದರೆ ಸಾಕು !!

Driving Licence: ವಾಹನ ಚಲಾವಣೆ, ರಸ್ತೆ ನಿಯಮಗಳ ಕುರಿತು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುವ ಸಾರಿಗೆ ಇಲಾಖೆಯು ಇದೀಗ ಡ್ರೈವಿಂಗ್ ಲೈಸೆನ್ಸ್ (DL) ಹಾಗೂ RC ಬಗ್ಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ಹೊಸ ನಿಯಮ ಹೊಸದಾಗಿ ಲೈಸೆನ್ಸ್ ಮಾಡಿಸುವವರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇದನ್ನೂ ಓದಿ: Weather Updates: ಈ ಸ್ಥಳಗಳಲ್ಲಿ ಜೋರಾಗಿ ಮಳೆ ಬರುವ ಸಾಧ್ಯತೆ ಹೆಚ್ಚು! ಮೀನುಗಾರರಿಗೆ ಬಿಗ್ ಅಲರ್ಟ್

ಇದುವರೆಗೂ ನೀವು ಡ್ರೈವಿಂಗ್ ಲೈಸೆನ್ಸ್ ಗಾಗಿ ಡ್ರೈವಿಂಗ್ ಟೆಸ್ಟ್ ನೀಡಲು RTO ಗೆ ಹೋಗಬೇಕಿತ್ತು. ಅದರಿಗ ಸರ್ಕಾರ ಈ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ತರಲು ತೀರ್ಮಾನಿಸಿದ್ದು ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ (Driving License) ಪಡೆದುಕೊಳ್ಳಲು ಆರ್‌ಟಿಓ ಆಫೀಸ್ ಬಳಿಯೇ ಹೋಗಬೇಕಿಲ್ಲ, ಬದಲಿಗೆ ಯಾವುದಾದರೂ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.

ಇದನ್ನೂ ಓದಿ: Belthangady : ಶಾಸಕ ಹರೀಶ್ ಪೂಂಜರಿಂದ ಹಿಂದೂ ಧರ್ಮಕ್ಕೆ ಅಪಮಾನ?!

ಹೌದು, ಈ ಹೊಸ ನಿಯಮವನ್ನು ಜೂನ್ 1ನೇ ತಾರೀಕು 2024ರಂದು ಸರ್ಕಾರ ಜಾರಿಗೆ ತರಲಿದ್ದು, ಅದಾಗಲೇ ಇದರ ನೋಟಿಸನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಬ್ರೋಕರ್ ಗಳ ಕಾಟವೂ ತಪ್ಪಲಿದೆ ಜೊತೆಗೆ ಪದೇ ಪದೇ RTO ಆಫೀಸ್ ಗೆ ಅಲೆಯುವ ಕಾಟವು ಇರುವುದಿಲ್ಲ. ಒಟ್ಟಿನಲ್ಲಿ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ಇದನ್ನೂ ಓದಿ: Driving Licence: ಲೈಸೆನ್ಸ್ ಗಾಗಿ ಡ್ರೈವಿಂಗ್ ಟೆಸ್ಟ್ ನೀಡಲು ಇನ್ಮುಂದೆ RTOಗೆ ಹೋಗಬೇಕಿಲ್ಲ – ಇಲ್ಲಿಗೆ ಹೋದರೆ ಸಾಕು !!

ಟೆಸ್ಟ್ ನೀಡುವುದು ಎಲ್ಲಿ? 

• ಖಾಸಗಿ ಡ್ರೈವಿಂಗ್ ಸ್ಕೂಲ್ ಗಳಲ್ಲಿ ಟೆಸ್ಟ್ ನೀಡಬಹುದು.

• ಡ್ರೈವಿಂಗ್ ಸ್ಕೂಲ್ ಗಳಿಗೆ ಸದ್ಯದಲ್ಲೇ ಪ್ರಮಾಣ ಪತ್ರ ಮತ್ತು ಪರವಾನಿಗೆಯನ್ನು ನೀಡಲಾಗುತ್ತದೆ.

ನಿಯಮ ಏನು?

• ಡ್ರೈವಿಂಗ್ ಸ್ಕೂಲ್ ಒಂದು ಎಕರೆ ಭೂಮಿ ಹೊಂದಿರಬೇಕು.

• 4 ಚಕ್ರದ ವಾಹನಗಳಿಗೆ ಟ್ರೈನಿಂಗ್ ನೀಡೋರು 2 ಎಕರೆ ಜಾಗ ಹೊಂದಿರಬೇಕು. ದೊಡ್ಡ ವಾಹನಗಳಿಗೆ ಹೆಚ್ಚು ಜಾಗ ಬೇಕು ಹಾಗಾಗಿ.

• ಡ್ರೈವಿಂಗ್ ಟೆಸ್ಟ್ ಗೆ ಸರಿಯಾದ ಪ್ರದೇಶ ಹೊಂದಿರಬೇಕು. ಜಾಗ ಸಮತಟ್ಟಾಗಿರಬೇಕು

• ಡ್ರೈವಿಂಗ್ ಸ್ಕೂಲ್ ನವರು, ಕಲಿಸುವವರು ಹೈಸ್ಕೂಲ್, ಡಿಪ್ಲೋಮ ಹಾಗೂ 5 ವರ್ಷ ಚಾಲನಾ ತರಭೇತಿ ಅನುಭವ ಹೊಂದಿರಬೇಕು.

• IT ವ್ಯವಸ್ಥೆಗಳ ಜ್ಞಾನ ಹೊಂದಿರಬೇಕು.

• ನಿಯಮ ಉಲ್ಲಂಘನೆ ಮಾಡಿದರೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ.

Leave A Reply

Your email address will not be published.