Deadly Accident: ಹಾಸನದಲ್ಲಿ ಭೀಕರ ಅಪಘಾತ; ಕಾರು ಸಂಪೂರ್ಣ ನಜ್ಜುಗುಜ್ಜು, 6 ದುರ್ಮರಣ

Hassan: ಟೊಯೋಟಾ ಇಟಿಯೋಸ್‌ ಕಾರು ಎರಡು ಲಾರಿಗಳ ನಡುವೆ ಸಿಲುಕಿ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ಇಬ್ಬರು ಮಹಿಳೆಯರು, ಮೂವರು ಪುರುಷರು, ಒಂದು ಮಗು ಸೇರಿ ಕಾರಿನಲ್ಲಿದ್ದ ಒಂದೇ ಕುಟುಂಬದ ಎಲ್ಲ ಆರು ಜನರು ಸಾವಿಗೀಡಾದ ಘಟನೆಯೊಂದು ನಡೆದಿದೆ. ಭಾನುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 75ರ ಕಂದಲಿ ಸಮೀಪ ನಡೆದಿದೆ.

ನಾರಾಯಣಪ್ಪ, ಸುನಂದಾ, ರವಿಕುಮಾರ್‌, ನೇತ್ರ, ಚೇತನ್‌ (ಬಾಲಕ), ರಾಕೇಶ್‌ (ಡ್ರೈವರ್‌) ಮೃತರು.

ಹೊಸಕೋಟೆ ತಾಲ್ಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಗ್ರಾಮದವರು. KA-53-C 1419 ನಂಬರ್‌ನ ಇಟಿಯೋಸ್‌ನ ಕಾರಿನಲ್ಲಿ ಹೋಗಿದ್ದ ಕುಟುಂಬ ಸದಸ್ಯರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಿ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿದ್ದ ಕಾರು ಚಾಲಕ ಅಜಾಗರೂಕತೆಯಿಂದ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಲೇನ್‌ಗೆ ಹಾರಿ ಕಂಟೇನರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಪಟ್ಟಿದ್ದಾರೆ.
ಹಿಮ್ಸ್‌ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.

ಈ ಘಟನೆ ಹಾಸನ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.