Tata Motors: ನೆಕ್ಸಾನ್ ಖರೀದಿಸುವ ಗ್ರಾಹಕರಿಗೆ ಹಬ್ಬ, 1 ಲಕ್ಷದ ಆಫರ್ ಘೋಷಿಸಿದ ಟಾಟಾ ಮೋಟಾರ್ಸ್ !

Tata Motors: ದೇಶದ ಜನಪ್ರಿಯ ಮತ್ತು ಸುರಕ್ಷಿತ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ತನ್ನ ಹೊಸ ನೆಕ್ಸಾನ್ ಕಂಪ್ಯಾಕ್ಟ್ ಎಸ್ ಯುವಿ (Nexon compact SUV) ಮೇಲೆ ಮೊತ್ತ ಮೊದಲ ಬಾರಿಗೆ ಆಕರ್ಷಕ ಆಫರ್ ಗಳನ್ನು ಘೋಷಣೆ ಮಾಡಿದೆ. ನೆಕ್ಸಾನ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳ ಮೇಲೂ 1 ಲಕ್ಷಕ್ಕೂ ಮಿಕ್ಕಿದ ಆಫರ್ ನೀಡಲಾಗುತ್ತಿದ್ದು, ಈ ಹೊಸ ಆಫರ್ ಗಳು ಈ ತಿಂಗಳು ಕೊನೆಯ ತನಕವೂ ಲಭ್ಯವಿರಲಿವೆ ಎದ್ದು ಆಟೋ ವರದಿಗಳು ತಿಳಿಸಿವೆ.

ಹೊಸ ಆಫರ್ ಗಳಲ್ಲಿ ನೆಕ್ಸಾನ್ ಖರೀದಿಸುವ ಗ್ರಾಹಕರಿಗೆ ಟಾಟಾ ಮೋಟಾರ್ಸ್ ತನ್ನ ವಿವಿಧ ವೆರಿಯೆಂಟ್ ಗಳನ್ನು ಆಧರಿಸಿ ರೂಪಾಯಿ 16,000 ದಿನದ 1,00,000 ತನಕ ಆಫರ್ ದೊರೆಯಲಿದ್ದು, ಸ್ಮಾರ್ಟ್ ಆಪ್ಷನ್ ವೆರಿಯೆಂಟ್ ಹೊರತುಪಡಿಸಿ ಇನ್ನುಳಿದ ಎಲ್ಲಾ ವೆರಿಯೆಂಟ್ ಗಳಲ್ಲಿ ಈ ಆಫರ್ ಲಭ್ಯವಿವೆ.

ಅಲ್ಲದೆ ಟಾಟಾ ನೆಕ್ಸಾನ್ ನ ಪ್ಯೂರ್ ವೆರಿಯೆಂಟ್ ಗಳ ಮೇಲೆ ರೂ. 20,000 ರೂ. 40,000 ತನಕ ಆಫರ್ ದೊರೆಯುತ್ತದೆ. ಅಂತೆಯೇ ಕ್ರಿಯೆಟಿವ್ ವೆರಿಯೆಂಟ್ ಗಳ ಮೇಲೆ ರೂ. 60,000 ದಿಂದ ರೂಪಾಯಿ 1 ಲಕ್ಷದ ವರೆಗೆ ಆಫರ್ ದೊರೆತರೆ, ಫಿಯರ್ಲೆಸ್ ವೆರಿಯೆಂಟ್ ಮೇಲೆ ರೂ. 60,000 ತನಕ ಆಫರ್ ನೀಡಲಾಗುತ್ತಿದೆ.

ಇನ್ನು ಹೊಸ ವೆರಿಯೆಂಟ್ ಗಳೊಂದಿಗೆ ನೆಕ್ಸಾನ್ ಕಾರು ಇದೀಗ ವಿವಿಧ ಎಂಜಿನ್ ಆಯ್ಕೆ, ಫೀಚರ್ಸ್ ಗಳಿಗೆ ಅನುಗುಣವಾಗಿ ಮಾರಾಟವಾಗುತ್ತಿದ್ದು, ಎಕ್ಸ್ ಶೋರೂಂ ಬೆಲೆ ರೂಪಾಯಿ 7.99 ಲಕ್ಷ ದಿಂದ ರೂಪಾಯಿ15.60 ಲಕ್ಷ ಬೆಲೆ ತನಕ ರೇಟ್ ಟ್ಯಾಗ್ ಹಾಕಿಕೊಂಡಿದೆ. ಜತೆಗೆ ನೆಕ್ಸಾನ್ ಫೇಸ್ ಲಿಫ್ಟ್ ಕಾರು ಸದ್ಯ ವಿವಿಧ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

Leave A Reply

Your email address will not be published.