Different Love Story: ಬಾಯ್ ಫ್ರೆಂಡ್ ಗಾಗಿ ಮಹಾ ತ್ಯಾಗ: ಬರೋಬ್ಬರಿ 2484 ಕೋಟಿ ಆಸ್ತಿ ತ್ಯಜಿಸಿ ಸಾಮಾನ್ಯನ ವರಿಸಿದ ಹುಡುಗಿ!!

Malaysia Love story business tycoons daughter gives up 2484 family inheritance to marry boyfriend

Different Love Story: ಪ್ರೀತಿ ಎಂಬ ನವಿರಾದ ಭಾವಕ್ಕೆ ನಂಬಿಕೆ (Trust )ಅತ್ಯವಶ್ಯಕ. ನೈಜ ಪ್ರೀತಿ( Love)ಬಣ್ಣ ಧರ್ಮದ ಎಲ್ಲೆಯ ಗಡಿ ದಾಟಿ ಸ್ವಚ್ಚಂದ ಹಕ್ಕಿಯಂತೆ ಪ್ರೇಮಿಸಿ ಮದುವೆ ಎಂಬ ಬಂಧಕ್ಕೆ ಮುನ್ನುಡಿ ಬರೆಯುವುದು ಸಹಜ. ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಅದೇ ರೀತಿ ಪ್ರೀತಿ ಪ್ರೇಮ ಪ್ರಣಯ ಎಂದು ನಾಲ್ಕು ದಿನ ಅಲೆದಾಡಿ ಮತ್ತೆ ಯಾರನ್ನೋ ಪ್ರೀತಿಸುವ ನಾಟಕವಾಡಿ ನಾನೊಂದು ತೀರ ನೀನೊಂದು ತೀರ ಎಂದು ವರ್ತಿಸುವವರು ಕೂಡ ಇದ್ದಾರೆ.ಆದ್ರೆ, ನಿಜವಾದ ಪ್ರೀತಿಗೆ ವ್ಯಾಖ್ಯಾನ ಬರೆಯಲು ಮುಂದಾದ ನೈಜ ಕಥೆಯೊಂದು ಬೆಳಕಿಗೆ ಬಂದಿದೆ.

ಕಳೆದ ವರ್ಷ ಜನರ ಮೆಚ್ಚುಗೆಗೆ ಪಾತ್ರವಾದ ‘ಸೀತಾರಾಮಾಂ ‘ ಸಿನಿಮಾ ಮಾದರಿಯಲ್ಲಿ ಪ್ರೀತಿಗಾಗಿ ತನ್ನೆಲ್ಲ ಸಮಸ್ತ ಕೋಟಿಗಟ್ಟಲೆ ಆಸ್ತಿಯನ್ನು ಬಿಟ್ಟು ಪ್ರಿಯಕರನ ಪ್ರೀತಿಗಾಗಿ ಹಂಬಲಿಸಿದ ನಿಷ್ಕಲ್ಮಶ ಪ್ರೇಮವನ್ನು ನೆನಪಿಸುವ ನೈಜ ಘಟನೆಯೊಂದು ಬೆಳಕಿಗೆ ಬಂದಿದೆ. ಮಲೇಷ್ಯಾದ (Malaysia)ಶ್ರೀಮಂತ ಉದ್ಯಮಿಯೊಬ್ಬರ ಮಗಳು ತಾನು ಪ್ರೀತಿಸಿದ ಪ್ರಿಯಕರನನ್ನು ವರಿಸಲು ತನ್ನ ಬರೋಬ್ಬರಿ 2484 ಕೋಟಿ ರೂ. ಆಸ್ತಿಯನ್ನು ಬಿಟ್ಟು ಬಂದ ಘಟನೆ ವರದಿಯಾಗಿದೆ.

ಏಂಜಲೀನಾ ಫ್ರಾನ್ಸಿಸ್ ಎಂಬ ಯುವತಿಗೆ (Girl) ಕಾಲೇಜಿನಲ್ಲಿ ಜೆದ್ದಿಯಾಹ್ ಎಂಬ ವ್ಯಕ್ತಿಯ ಮೇಲೆ ಪ್ರೇಮಾಂಕುರವಾಗಿತ್ತು. ಈ ವಿಚಾರವನ್ನು ಮನೆಯಲ್ಲಿ ತಿಳಿಸಿದಾಗ ಮನೆಯವರು ಈ , ಆತ ನಮ್ಮ ಅಂತಸ್ತಿಗೆ ಸಮಾನನಲ್ಲ ಎಂದು ಸಂಬಂಧವನ್ನು ನಿರಾಕರಿಸಿದ್ದಾರೆ.ಮಲೇಷ್ಯಾದ 50 ಶ್ರೀಮಂತರ ಪಟ್ಟಿಯಲ್ಲಿ 44 ನೇ ಸ್ಥಾನದಲ್ಲಿರುವ ಖೂ ಕೇ ಪೆಂಗ್ ಅವರು ಮಲಯನ್ ಯುನೈಟೆಡ್ ಇಂಡಸ್ಟ್ರೀಸ್ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರ ನಿವ್ವಳ ಮೌಲ್ಯ US$300 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಖೂ ಅವರ ಐದು ಮಕ್ಕಳಲ್ಲಿ ನಾಲ್ಕನೆಯವರು ಏಂಜಲೀನ್ ಫ್ರಾನ್ಸಿಸ್.

ಏಂಜಲೀನ್ ಫ್ರಾನ್ಸಿಸ್ ತನ್ನ ಕುಟುಂಬದ ಪಿತ್ರಾರ್ಜಿತ ಆಸ್ತಿಯಾದ ಸುಮಾರು 300 ಮಿಲಿಯನ್ ಡಾಲರ್ ಅಂದರೆ ಸುಮಾರು 2,484 ಕೋಟಿ ರೂ. ಒಡತಿಯಾಗಿದ್ದರು ಕೂಡ ಮಧ್ಯಮ ವರ್ಗದ ಹುಡುಗನ ಪ್ರೇಮದ ಬಲೆಯಲ್ಲಿ ಬಿದ್ದಿದ್ದಳು. ಈ ವಿಚಾರ ಮನೆಯವರಿಗೆ ತಿಳಿದು ಮನೆಯವರೆಲ್ಲ ಈ ಸಂಬಂಧಕ್ಕೆ ನಕಾರ ಸೂಚಿಸಿದ್ದು, ಇದರ ಜೊತೆಗೆ ಮನೆ ಅಥವಾ ಹುಡುಗ ಯಾರನ್ನಾದರೂ ಒಬ್ಬರನ್ನು ಆರಿಸಿಕೊಳ್ಳಲು ಮನೆಯವರು ಸೂಚಿಸಿದ್ದಾರೆ. ಯುವತಿ ಕೋಟಿ ಕೋಟಿ ಆಸ್ತಿಯ (Asset) ಎದುರಲ್ಲಿಯು ಹಣಕ್ಕಿಂತ ಹೆಚ್ಚು ಬೆಲೆಯುಳ್ಳದ್ದು ಪ್ರೀತಿ ಎಂದು ನಂಬಿ ಪ್ರಿಯಕರನನ್ನು ಆರಿಸಿಕೊಂಡಿದ್ದಾರೆ.

ಯುವತಿ ಹೀಗಾಗಿ, ಮನೆ ಬಿಟ್ಟು ಬಂದು ತನ್ನ ಪ್ರಿಯರಕನನ್ನು ಮದುವೆ (Marriage)ಯಾಗಿದ್ದಾಳೆ.  ಪ್ರಿಯತಮ (Lover)ನಿಗಾಗಿ ಮನೆಯವರನ್ನು ಎದುರು ಹಾಕಿಕೊಂಡು ಆಸ್ತಿ ಪಾಸ್ತಿಗಳನ್ನೆಲ್ಲಾ ಬಿಟ್ಟು ತಾನು ಪ್ರೀತಿಸಿದ ಯುವಕನ ಜೊತೆಗೆ ಸುಖೀ ಜೀವನ ನಡೆಸುತ್ತಿದ್ದಾಳೆ. ಹೆಚ್ಚಿನ ಸಂದರ್ಭದಲ್ಲಿ ಹೆಣ್ಣು ಹಣ ನೋಡಿ ಹುಡುಗನನ್ನು ಪ್ರೀತಿಸುತ್ತಾಳೆ ಎಂಬ ಧೋರಣೆಯನ್ನೂ ಸುಳ್ಳು ಮಾಡಿ, ನೈಜ ಪ್ರೀತಿಗೆ ಹಣಕ್ಕಿಂತ ಗುಣ ಮುಖ್ಯ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯಲ್ಲ ಎಂಬುದನ್ನು ಯುವತಿ ನಿರೂಪಿಸಿದ್ದಾಳೆ.

ಆಸ್ತಿ ಮತ್ತು ಪ್ರೀತಿಯ ಮಧ್ಯೆ, ಪ್ರೀತಿಯನ್ನು ಆಯ್ಕೆ ಮಾಡಿಕೊಂಡಿರುವುದರ ಕುರಿತು ಮಾಧ್ಯಮವೊಂದಕ್ಕೆ ಏಂಜಲೀನ್ ಖೂ ಪ್ರತಿಕ್ರಿಯೆ ನೀಡಿದ್ದಾರೆ.’ನಾವು ಹಣವನ್ನು ಯಾವಾಗಲೂ ಬೇಕಾದರೂ ಸಂಪಾದಿಸಬಹುದು. ಆದರೆ ಪ್ರೀತಿ ಅನ್ನೋದು ಅಮೂಲ್ಯವಾಗಿದ್ದು, ಅದನ್ನು ಯಾವಾಗಲೂ ಸಂಪಾದಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ, ಹಣ ಹಲವು ನಕಾರಾತ್ಮಕ ಗುಣಗಳೊಂದಿಗೆ ಬರುವುದು. ಸಮಸ್ಯೆ, ಗೊಂದಲವನ್ನು ಹೆಚ್ಚಿಸುತ್ತದೆ. ಆದರೆ ಪ್ರೀತಿ ಖುಷಿಯನ್ನು ತರುತ್ತದೆ ‘ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Ram Gopal Varma: ಹೆಣ್ಣಿನ ಎಲ್ಲಾ ಪಾರ್ಟ್ ಆಯ್ತು, ಈಗ ಹುಡುಗಿಯ ಆ ಅಂಗಾಗದ ಬಗ್ಗೆ ವರ್ಣನೆ ಮಾಡಿದ ಸ್ಟಾರ್ ನಿರ್ದೇಶಕ!

Leave A Reply

Your email address will not be published.