ಜಾಮೂನಿಗೆ ವಿಷ ಹಾಕಿ ತನ್ನ ಮಕ್ಕಳಿಗೆ ತಿನ್ನಿಸಿದ ಪಾಪಿ ಅಪ್ಪ! ಕಾರಣವೇನು ಗೊತ್ತೇ?

Rama Nagar news father gives poison to children's and attempt suicide in ramnagar

Ramnagar: ತಂದೆಯೋರ್ವ ತನ್ನ ಇಬ್ಬರು ಮಕ್ಕಳಿಗೆ ಜಾಮೂನಿನಲ್ಲಿ ವಿಷ ಬೆರೆಸಿ ತಿನ್ನೋಕೆ ನೀಡಿದ್ದು, ಕೊನೆಗೆ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ರಾಮನಗರದಲ್ಲಿ(Ramnagar) ನಡೆದಿದೆ. ವಿಷ ತಿಂದ ಮಕ್ಕಳು ಒದ್ದಾಡುವುದನ್ನು ನೋಡಿದ ಮನೆಮಂದಿ ಕೂಡಲೇ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಈ ಘಟನೆಗೆ ಕೌಟುಂಬಿಕ ಕಾರಣ ಎನ್ನಲಾಗಿದೆ. ಬೆಂಗಳೂರಿಗೆ ಹತ್ತಿರ ಇರುವ ರಾಮನಗರ ತಾಲ್ಲೂಕಿನ ಕ್ಯಾಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆ ತನ್ನಿಬ್ಬರು ಮಕ್ಕಳಿಗೆ ಜಾಮೂನಿನಲ್ಲಿ ವಿಷ ಬೆರೆಸಿ ಕೊಲೆ ಮಾಡುವ ಪ್ರಯತ್ನ ಪಟ್ಟಿದ್ದಾನೆ. ವಿಷ ನೀಡಿ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಕುಮಾರ್‌ (35) ಎಂದು ಗುರುತಿಸಲಾಗಿದೆ. ಈತ ಮಕ್ಕಳಿಗೆ ವಿಷ ಕುಡಿಸಲು ಮುಂದಾದಾಗ ಮಕ್ಕಳು ಕಹಿ ಎಂದು ಹಿಂಜರಿದಿದ್ದಾರೆ. ಹಾಗಾಗಿ ಮನೆಯಲ್ಲಿದ್ದ ಜಾಮೂನುಗೆ ವಿಷಯ ಬೆರೆಸಿ ನೀಡಿದ್ದಾನೆ. ವಂದನಾ (4) ತನುಶ್ರೀ (3) ಮಕ್ಕಳಿಗೆ ಜಾಮೂನು ತಿನ್ನಿಸಿದ್ದಾನೆ. ಈಗ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Ram Gopal Varma: ಹೆಣ್ಣಿನ ಎಲ್ಲಾ ಪಾರ್ಟ್ ಆಯ್ತು, ಈಗ ಹುಡುಗಿಯ ಆ ಅಂಗಾಗದ ಬಗ್ಗೆ ವರ್ಣನೆ ಮಾಡಿದ ಸ್ಟಾರ್ ನಿರ್ದೇಶಕ!

Leave A Reply

Your email address will not be published.