Toyota Rumion MPV Unveiled: ಕೇವಲ 10 ಲಕ್ಷದ ಒಳಗೆ ಟೋಯೋಟಾ ಇನ್ನೊವಾ ಮಾದರಿಯ ಕಾರು, ಇನ್ನು ಮಾರುತಿ ertiga ಕೇಳೋರೇ ಇಲ್ಲ

Technology news Toyota has introduced a 7 seater car under rupees 10 lakhs complete details is here

Toyota Rumion MPV Unveiled: ಹೊಸ ಹೊಸ ವೈಶಿಷ್ಟ್ಯದ ಮೂಲಕ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುವ ಜೊತೆಗೆ ಗ್ರಾಹಕರ ಬೇಡಿಕೆಯ ಅನುಸಾರ ವಿವಿಧ ಬ್ರಾಂಡ್ ಕಾರುಗಳು ಕೈಗೆ ಎಟಕುವ ದರದಲ್ಲಿ ಲಭ್ಯವಿದ್ದು, ವಾಹನಗಳ ಕ್ರೇಜ್ ಹೊಂದಿರುವವರು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿ ನೀಡಲಾಗಿದೆ.

 

ಟೊಯೊಟಾ ಇಂಡಿಯಾ(Toyota India) ಈಗಾಗಲೇ ಪ್ರೀಮಿಯಂ ಕಾರು ಮಾರಾಟದಲ್ಲಿ ತನ್ನ ಅಧಿಪತ್ಯ ಸಾಧಿಸಿದ್ದು,  ಕಂಪನಿಯು ಮಾರುತಿ ಸುಜುಕಿ ಜಂಟಿಯಾಗಿ ಈಗಾಗಲೇ ಹಲವಾರು ಕಾರು ಮಾದರಿಗಳ ರೀಬ್ಯಾಡ್ಜ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ಟೊಯೋಟಾ ತನ್ನ ಇತ್ತೀಚಿನ ಹೊಸ ಮಾದರಿಯನ್ನು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹೊಸದಾಗಿ ಎರ್ಟಿಗಾ ಆಧರಿಸಿರುವ ರೂಮಿಯಾನ್(Toyota Rumion MPV Unveiled) ಎಂಪಿವಿಯನ್ನು ಅನಾವರಣ ಮಾಡಿದೆ.

ಹೆಚ್ಚು ನಿರೀಕ್ಷಿತ ಟೊಯೋಟಾ ರೂಮಿಯಾನ್ MPV.(Toyota Rumion MPV Unveiled) ಮಾರುತಿ ಸುಜುಕಿ ಎರ್ಟಿಗಾವನ್ನು ಆಧರಿಸಿದ ಈ ಹೊಸ ಮಾದರಿಯು ಮಧ್ಯಮ ಗಾತ್ರದ MPV ವಿಭಾಗದಲ್ಲಿ ತನ್ನ ಛಾಪು ಮೂಡಿಸಲು ಸಿದ್ಧವಾಗಿದೆ.ಜಪಾನಿನ ವಾಹನ ತಯಾರಕ ಕಂಪನಿಯಾಗಿರುವ ಟೊಯೊಟಾ ಇಂಡಿಯಾ-ಸ್ಪೆಕ್ ರೂಮಿಯಾನ್.(Toyota Rumion MPV Unveiled) ಅನ್ನು ಅನಾವರಣಗೊಳಿಸಿದ್ದು ,MPV ಮಾರುತಿ ಸುಜುಕಿ ಎರ್ಟಿಗಾವನ್ನು ಆಧರಿಸಿದೆ.

Toyota Rumion MPV Unveiled

ಹೊಸ ಕಾರಿನ ಒಳಭಾಗದಲ್ಲಿ 7 ಸೀಟರ್ ಸೌಲಭ್ಯದೊಂದಿಗೆ ಬ್ಲ್ಯಾಕ್ ಔಟ್ ಡ್ಯಾಶ್ ಬೋರ್ಡ್, ವುಡ್ ಇನ್ಸರ್ಟ್, ಅರಾಮದಾಯಕವಾಗಿರುವ ಆಸನ ಸೌಲಭ್ಯ ನೀಡಲಾಗಿದೆ. 6 ರೂಪಾಂತರಗಳಲ್ಲಿ (S MT/AT, G MT, ಮತ್ತು V MT/AT, S MT CNG) ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ, ಇದು ಎಸ್, ಜಿ, ವಿ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಹೊಸ ಟೊಯೊಟಾ ರೂಮಿಯಾನ್ ಎಂಪಿವಿ ಕಾರು ಮಾರುತಿ ಸುಜುಕಿ ಎರ್ಟಿಗಾದಲ್ಲಿರುವ ರೀತಿಯಲ್ಲಿ 1.5 ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ಜೋಡಣೆ ಇರಲಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 103 ಹಾರ್ಸ್ ಪವರ್ ಮತ್ತು 137 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಕಂಪನಿಯು ಅಧಿಕೃತವಾಗಿ ಇದರ ಬೆಲೆಯನ್ನು ಘೋಷಣೆ ಮಾಡಿಲ್ಲ. ಹೀಗಿದ್ದರೂ, ಇದರ ಬೆಲೆ 10 ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಸಂಭವವಿದೆ.

ರೂಮಿಯಾನ್ ಫ್ಯಾಕ್ಟರಿ-ಅಳವಡಿಕೆಯ ಸಿಎನ್‌ಜಿ ಆಯ್ಕೆಯನ್ನು ಹೊಂದಿರುತ್ತದೆ. ರೂಮಿಯಾನ್‌ನ ಪೆಟ್ರೋಲ್ ಆವೃತ್ತಿಯು 20.51kmpl ಮೈಲೇಜ್ ನೀಡುವ ಜೊತೆಗೆ CNG ಆವೃತ್ತಿಯು 26.11kg/km ಮೈಲೇಜ್ ನೀಡುವ ಕುರಿತು ಕಂಪೆನಿ ಮಾಹಿತಿ ನೀಡಿದೆ. ಈ ಕಾರಿನ ಕೆಲವು ವೈಶಿಷ್ಟ್ಯಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಇರಲಿದೆ. ಇದಲ್ಲದೆ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ ಮತ್ತು ಕ್ರೂಸ್ ನಿಯಂತ್ರಣವನ್ನು ಹೊಂದಿರಲಿದೆ. MPV 7-ಸೀಟ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.

ರೂಮಿಯಾನ್ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದ್ದು, MPV ಕ್ರಿಸ್ಟಾದಂತೆಯೇ ಟ್ರೆಪೆಜಾಯ್ಡಲ್ ಗ್ರಿಲ್ ಅನ್ನು ಒಳಗೊಂಡಿದೆ. ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಮತ್ತು ಹೊಸ ಡ್ಯುಯಲ್-ಟೋನ್ ಮಿಶ್ರಲೋಹದ ಚಕ್ರಗಳು ಇದರಲ್ಲಿ ಲಭ್ಯವಿರಲಿದೆ ಎನ್ನಲಾಗಿದೆ. Rumion B-MPV ಇದು Innova Crysta, Innova Hycross ಮತ್ತು Vellfire ಬಳಿಕ ಬ್ರ್ಯಾಂಡ್‌ನ ನಾಲ್ಕನೇ MPV ಆಗಿದ್ದು, ಹೀಗಿದ್ದರೂ, ರೂಮಿಯನ್ ಅನ್ನು ಮಾರುತಿ ಸುಜುಕಿ ತಯಾರಿಸಿ ಪೂರೈಸುತ್ತದೆ. ಹೀಗಿದ್ದರೂ ಕೂಡ ಮಾರುತಿ ಎರ್ಟಿಗಾದಿಂದ ಪ್ರತ್ಯೇಕಿಸಲು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ರೂಮಿಯಾನ್ ಫಾಕ್ಸ್ ವುಡ್ ಇನ್ಸರ್ಟ್‌ಗಳು ಮತ್ತು ಬೀಜ್ ಅಪ್ಹೋಲ್ಸ್ಟರಿಯೊಂದಿಗೆ ಬೀಜ್ ಡ್ಯಾಶ್‌ಬೋರ್ಡ್ ಅನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Different Love Story: ಬಾಯ್ ಫ್ರೆಂಡ್ ಗಾಗಿ ಮಹಾ ತ್ಯಾಗ:ಬರೋಬ್ಬರಿ 2484 ಕೋಟಿ ಆಸ್ತಿ ತ್ಯಜಿಸಿ ಸಾಮಾನ್ಯನ ವರಿಸಿದ ಹುಡುಗಿ!!

Leave A Reply

Your email address will not be published.