Kerala: ಮೂರು ತಿಂಗಳ ಪುಟ್ಟ ಕಂದನ ಗಂಟಲಲ್ಲಿ ಉಳಿದುಕೊಂಡ ತಾಯಿಯ ಎದೆಹಾಲು! ಮಗು ಸಾವು!

Kerala death news breast milk stuck in throat three month old baby died

Kerala: ತಾಯಿಯ ಎದೆಹಾಲು ಮಗುವಿಗೆ ಅಮೃತ ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ತಾಯಿಯ ಎದೆಹಾಲೇ ಮಗುವಿನ ಸಾವಿಗೆ ಕಾರಣವಾಗಿದೆ. ತಾಯಿಯ ಎದೆಹಾಲು ಗಂಟಲಿನಲ್ಲಿ ಉಳಿದುಕೊಂಡ ಪರಿಣಾಮ ಮೂರು ತಿಂಗಳ ಮಗು ಸಾವು ಕಂಡಿದೆ. ಗಂಟಲು, ಮತ್ತು ಶ್ವಾಸಕೋಶದಲ್ಲಿ ತಾಯಿ ಎದೆಹಾಲು ಇದ್ದು, ಈ ಕಾರಣದಿಂದ ಮಗು ಸಾವು ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ಮಂಗಳವಾರದಂದು ಕೇರಳ(Kerala) ತಿರುವನಂತಪುರದ ಪಲ್ಲಿಚಾಲ್‌ನಲ್ಲಿ ನಡೆದಿದೆ.

ಎದೆಹಾಲು ಕುಡಿಸಿ ತಾಯಿ ಜಾನಿಮೋಳ್‌ ಮಗುವನ್ನು ಮಲಗಿಸಿದ್ದರು. ಆದರೆ ಬೆಳಗ್ಗೆಯಾದರೂ ಮಗು ಏನೂ ಶಬ್ದ ಮಾಡದೇ ಇರುವುದನ್ನು ಕಂಡು ಗಾಬರಿಯಾದ ದಂಪತಿಗಳು ಕೂಡಲೇ ಮಗುವನ್ನು ಬಲರಾಮಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಗುವಿನ ಪಲ್ಸ್‌ ರೇಟ್‌ ಬಹಳ ಕಡಿಮೆ ಇದ್ದುದರಿಂದ ಎಸ್‌ಐಟಿ ಆಸ್ಪತ್ರೆಗೆ ಮಗುವನ್ನು ಶಿಫ್ಟ್‌ ಮಾಡಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸೋಮವಾರ ಸಂಜೆ 6 ಗಂಟೆಗೆ ಸಾವು ಕಂಡಿದೆ.

ಇದನ್ನೂ ಓದಿ: Spandana Vijay: ಸ್ಪಂದನಾ ವಿಜಯ್‌ ಬಹುದೊಡ್ಡ ಕನಸು ಏನಾಗಿತ್ತು? ಡೈರಿಯಲ್ಲಿತ್ತು ಈ ವಿಚಾರ! ಏನು ಗೊತ್ತೇ?

Leave A Reply

Your email address will not be published.