Actor Darshan: ಸಿನಿಮಾ ಹಾಗೆ ಆಯ್ತು ದರ್ಶನ್ ಲೈಫು – ನೆಲದ ಮೇಲೆ ಕೂರ್ಬೇಕು, ಅನ್ನ ಸಾಂಬರ್ ತಿನ್ಬೇಕು, ಚಾಪೆ ಮೇಲೆ ಮಲಗ್ಬೇಕು -ದರ್ಶನ್ ಪರಿಸ್ಥಿತಿ ಹೇಗಿದೆ ಗೊತ್ತಾ ?

Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆದ ದರ್ಶನ್ ದಿನಚರಿಯೇ ಅಸ್ತವ್ಯಸ್ತವಾಗಿದೆ. ಪೊಲೀಸ್ ಠಾಣೆಯಲ್ಲಿ ತನಿಖೆ ಎದುರಿಸುತ್ತಿರುವ ದರ್ಶನ್ ದಿನಚರಿ ಹೇಗಿದೆ ಗೊತ್ತಾ?

ರೇಣುಕಾಸ್ವಾಮಿ ಹತ್ಯೆ ಆಗಿ ದರ್ಶನ್ ಬಂಧನ ಆದ ನಂತ್ರ ದರ್ಶನ್ ನ ಸೆಲೆಬ್ರಿಟಿ ಜೀವನ ಇನ್ನೆಲ್ಲಿ ? ಬಿಂದಾಸ್ ಜೀವನ ನಡೆಸುತ್ತಿದ್ದ, ಸುಂದರ ವಿಲಾಸದ ದಾಸ ಚಿತ್ರದುರ್ಗ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿ ಸಿಕ್ಕಿಬಿದ್ದು, ಇದೀಗ ಪಶ್ಚಾತ್ತಾಪ ಪಡುವಂತಾಗಿದೆ. ಈಗ ದರ್ಶನ್ ಸ್ಟೇಷನಿನ್ನಲ್ಲೇ ಮಲಗಿ, ಅಲ್ಲೇ ಒಂದು ಕಡೆ ಹಲ್ಲು ಉಜ್ಜಿ, ಸಣ್ಣಗೆ ಟಿಪನ್ನು ಮಾಡಿ ದಿನನಿತ್ಯ ತನಿಖೆಗೆ ಹಾಜರಾಗುತ್ತಿದ್ದಾರೆ. ಸದ್ಯ ದರ್ಶನ್ ಜೀವನ ಶೈಲಿ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. ನಾನು ಕೃಷಿಕ, ನಮ್ ತೋಟಕ್ಕೆ ಬನ್ನಿ, ಇಲ್ಲಿ ಸಗಣಿ ವಾಸ್ನೆ ಬರತ್ತೆ. ನಾನು ಡೌನ್ ಟು ಅರ್ಥ್ ಅಂಥ ಹೇಳಿಕೊಳ್ಳುತ್ತಿದ್ದ ದರ್ಶನ್ ನನ್ನು ಈಗ ಡೌನ್ ಮಾಡಿ ನೆಲಕ್ಕೆ ಕೆಡವಿ ಕೂರಿಸಿದ್ದಾರೆ ಪೊಲೀಸರು. ಯಾಕೆಂದರೆ ಪೊಲೀಸರ ಕೈಲಿ ಇರೋದು ಕೊಲೆ ಕೇಸು !

ನಟ ಡಿ ಬಾಸ್ ದರ್ಶನ್ ಕೆಲ ವಾರಗಳ ಹಿಂದೆ ಸೆಲೆಬ್ರಿಟಿ ಜೀವನ ನಡೆಸುತ್ತಿದ್ದರು. ಕೈ ತುಂಬಾ ಮುದ್ದೆ, ಇಷ್ಟ ಬಂದಾಗ ನಿದ್ದೆ ಮತ್ತು ಇತರ ವಿಲಾಸಗಳು ಸಾಂಗವಾಗಿ ನಡೆಯುತ್ತಿದ್ದವು. ಜತೆಗೆ ಸಿನಿಮಾಗಾಗಿ ಆರಡಿಯ ಪರ್ಶನಾಳಿಟಿಯನ್ನು ಕಾಪಾಡಿಕೊಳ್ಳಲು ಜಿಮ್ ಗೆ ಹೋಗಿ ಬರುತ್ತಿದ್ದರು. ಮನೆ ತುಂಬಾ ಅಣ್ಣಾ ಅಣ್ಣಾ ಅಂತ ಕರೆಯೋ ಹುಡುಗ್ರು, ಜೊತೆಗೆ ಜೀವದ ಗೆಳೆಯರು, ಅಭಿಮಾನಿಗಳು ಕಾದಿರುತ್ತಿದ್ದರು. ಇಷ್ಟೇ ಅಲ್ಲದೆ, ತರಹೇವಾರಿ ಊಟ ತಿಂಡಿ ಸವಿಯುತ್ತಿದ್ದರು. ಮಧ್ಯಾಹ್ನಕ್ಕೆ ಶುರುವಾಗುತ್ತಿದ್ದ ಪಾರ್ಟಿ, ತಡ ರಾತ್ರಿವರೆಗೂ ಬಿಂದಾಸ್ ಲೈಫ್, ಮೂವರು ಮಲಗೋ ಸೈಜಿನ ಬೆಡ್ ಇಷ್ಟೆಲ್ಲಾ ಜೀವನ ನಡೆಸುತ್ತಿದ್ದ ದರ್ಶನ್ ಇದೀಗ ಪೊಲೀಸ್ ಠಾಣೆಯಲ್ಲಿ ದಿನ ದೂಡುವಂತಾಗಿದೆ.

ದರ್ಶನ್ ಸದ್ಯದ ದಿನಚರಿ ಹೇಗಿದೆ?

ಈಗ ಬೆಳಗ್ಗೆ 6 ಗಂಟೆಗೆ ಎದ್ದೇಳಲೇಬೇಕು. ಠಾಣೆಯಲ್ಲಿ ಎಲ್ಲರೂ ಬಳಸುವ ಶೌಚಾಲಯ ಬಳಸಬೇಕು. ಬೇಗನೆ ಎದ್ದು ಬಿರಬಿರಾನೇ ಟಾಯ್ಲೆಟ್ ಗೆ ಹೋಗದೆ ಇದ್ದರೆ ಕೊನೆಗೆ ನೀರು ಬರಲಿಕ್ಕಿಲ್ಲ ಅನ್ನುವ ಭಯ. ಜಿಮ್ ಇಲ್ಲ. ಸ್ನಾನ ಕೂಡ ಅಪರೂಪ, ಇಡ್ಲಿ ತಿನ್ನಬೇಕು. ವಡೆ ಕೊಟ್ರೆ ಅದು ಬಂಪರ್. ನೆಲದ ಮೇಲೆ ಕೂರುವಂತಾಗಿದೆ. ಇನ್ನು ಮಧ್ಯಾಹ್ನ ಅನ್ನ ಸಾಂಬರ್ ಸಿಗುತ್ತೆ. ರಾತ್ರಿಗೂ ಅನ್ನ ಸಾಂಬಾರ್. ಮುಚ್ಕೊಂಡು ತಿನ್ನಬೇಕು. ಸಂಜೆಗೆ ಕಲರ್ ಫುಲ್ ಕನಸು ಕಾಣಲು ತರಾವರಿ ಬಾಟಲ್ ಇಲ್ಲವೇ ಇಲ್ಲ. ಕೊನೆಯ ಪಕ್ಷ ಕುಡಿಯಲು ನೀರು ತುಂಬಿಸಿಕೊಳ್ಳಲು ಕೂಡ ಖಾಲಿ ಬಾಟಲ್ ಸಿಗುತ್ತಿಲ್ಲ.
ದಿಂಬಿಲ್ಲದ ಹಾಸಿಗೆಯಲ್ಲಿ ಏಕಾಂತದಲ್ಲಿ ಮಲಗುವಂತ ಸ್ಥಿತಿ ಸದ್ಯ ದರ್ಶನ್ ಪರಿಸ್ಥಿತಿ. ಬಹುಕಾಂತಯರೊಂದಿಗೆ ಬಹುಕಾಲ ಬಾಳುತ್ತಿರುವ ದರ್ಶನ್ ಸ್ಥಿತಿ ಯಾರಿಗೂ ಬೇಡ, ಹಾಗಾಗಿದೆ.

Leave A Reply

Your email address will not be published.