ಹಿಜಾಬ್ ಹಾಗು ಈ ಆಚರಣೆಗಳನ್ನು ನಿಷೇಧ ಮಾಡಿದ ಮುಸ್ಲಿಂ ದೇಶ!

ಹಿಜಾಬ್ ಹಾಗು ಈ ಆಚರಣೆಗಳನ್ನು ನಿಷೇಧ ಮಾಡಿದ ಮುಸ್ಲಿಂ ದೇಶ!

 ಹಿಜಾಬ್‌ ನಿಷೇಧ ಮಸೂದೆಯನ್ನು ತಜಕಿಸ್ತಾನ್‌ದ ಮೇಲ್ಮನೆ ಅಂಗೀಕಾರ ಮಾಡಿದೆ. ಆ ಮೂಲಕ ದೇಶಾದ್ಯಂತ ಹಿಜಾಬ್‌ಧಾರಣೆ ನಿಷೇಧಿಸಿದೆ.ಹಲವಾರು ವರ್ಷಗಳ ಅನಧಿಕೃತ ನಿಷೇಧದ ನಂತರ ತಜಕಿಸ್ತಾನ್ ಇಸ್ಲಾಮಿಕ್ ಹಿಜಾಬ್ ಅನ್ನು ನಿಷೇಧಿಸಿದೆ ಎಂದು ಗಮನಾರ್ಹ.

ಮಜ್ಲಿಸಿ ನಮೋಯಂಡಗಾನ್ (ತಜಕಿಸ್ತಾನದ ಸಂಸತ್ತಿನ ಕೆಳಮನೆ) ಜೂನ್ 8 ರಂದು ಹಿಜಾಬ್ ಮತ್ತು ಈದ್ಗಾರ್ಡಕ್ ಅನ್ನು ನಿಷೇಧಿಸುವ ಮಸೂದೆಯನ್ನು ಅನುಮೋದಿಸಿತ್ತು. ಇದೀಗ ಮೇಲ್ಮನೆಯಾದ ಮಜ್ಲಿಸಿ ಮಿಲ್ಲಿಯ ಕೂಡಾ ಮಸೂದೆ ಅಂಗಿಕಾರ ಮಾಡಿದ್ದು ಇದು ಈ ನೆಲದ ಕಾನೂನಾಗಲಿದೆ.

ಮದ್ಯಪ್ರಾಚ್ಯ ದೇಶದಿಂದ ತಜಕಿಸ್ತಾನಕ್ಕೂ ವಿಸ್ತರಣೆಗೊಂಡ ಹಿಜಾಬ್‌ಧಾರಣೆ ಅಭ್ಯಾಸ ತಜಕಿಸ್ತಾನದ ಸಂಪ್ರದಾಯದ ವಿರುದ್ಧವಾಗಿದೆ ಎಂದಿದೆ. ಈ ದೇಶ ಇದೀಗ ಕಾನೂನನ್ನೇ ತಂದಿದ್ದು ಯಾರೂ ಹಿಜಾಬ್‌ ಧರಿಸುವಂತಿಲ್ಲ ಎಂದಿದೆ. ತಜಕಿಸ್ತಾನದಲ್ಲಿ ಗಂಡಸರು ಕುರುಚಲು ಗಡ್ಡ ಬೆಳೆಸಿಕೊಳ್ಳುವುದನ್ನೂ ನಿಷೇಧಿಸಿದೆ. ಕಳೆದ ದಶಕದಲ್ಲಿ ಸಾವಿರಾರು ಪುರುಷರನ್ನು ಪೊಲೀಸರು ತಡೆದಿದು ಈ ವಿಚಾರವಾಗಿ ದಂಡ ಹಾಕಿದ್ದಾರೆ ಹಾಗೂ ಅನೇಕ ಜನ ತಮ್ಮ ಇಚ್ಛೆಗೆ ವಿರುದ್ಧವಾಗಿ ಅವರ ಗಡ್ಡವನ್ನು ಬೋಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಕ್ಕಳು ಈದ್‌-ಅಲ್‌-ಫಿತರ್‌ ಹಾಗೂ ಈದ್‌-ಅಲ್‌-ಅಧಾ ಸಮಯದಲ್ಲಿ ಮಕ್ಕಳು ರಸ್ತೆಗಳಲ್ಲಿ ಹಬ್ಬದ ಶುಭಾಶಯ ವಿನಿಮಯ ಮಾಡುವುದು ಹಾಗೂ ಮನೆಮನೆಗೆ ತೆರಳಿ ಹಬ್ಬಕ್ಕೆ ವಿಶ್‌ ಮಾಡುವುದರ ಮೇಲೆಯೂ ನಿರ್ಬಂಧ ಹೇರಿದೆ

Leave A Reply

Your email address will not be published.