ತಮಿಳುನಾಡು ಕಲ್ಲಕುರಿಚಿ ಕಳ್ಳ ಭಟ್ಟಿ ದುರಂತ: 50 ಸಾವು, ನೂರಾರು ಜನ ಚಿಂತಾಜನಕ

ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಎಂಬ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಕಳ್ಳಭಟ್ಟಿ ದುರಂತದಿಂದ ಸತ್ತವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಜತೆಗೆ ಕನಿಷ್ಠ 100 ಜನ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಪೈಕಿ ಹೆಚ್ಚಿನವರ ಪರಿಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಳೆದ ಮೂರ್ನಾಕು ದಿನಗಳ ಹಿಂದೆ ನಮ್ಮ ಪಕ್ಕದ ರಾಜ್ಯ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಅನೇಕರು ನಕಲಿ ಮದ್ಯವನ್ನು ಸೇವಿಸಿ ಆಸು ನೀಗಲು ಪ್ರಾರಂಭವಾಗಿತ್ತು. ನಂತರ ನಿರಂತರವಾಗಿ ಸಾವಿನ ಕುರಿತು ವರದಿಗಳು ಬರುತ್ತಿದ್ದು, ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಇಂದು ಮತ್ತೆ ಎಂಟು ಜನರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 50. ಮೇಲೆ ದಾಟಿದೆ.

ಕಳೆದ ವರ್ಷ ಕಳೆದ ವಿಲ್ಲುಪುರಂ ಜಿಲ್ಲೆಯಲ್ಲಿ ಎರಡೆರಡು ಕಳ್ಳಭಟ್ಟಿ ದುರಂತಗಳು ಸಂಭವಿಸಿದ್ದವು. ಆಗ 22 ಜನ ಸಾವಿಗೀಡಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಕೇವಲ 1 ವರ್ಷದೊಳಗೆ ಮತ್ತೊಂದು ಘೋರ ದುರಂತ ಘಟಿಸಿದೆ.

ದುರಂತದಿಂದಾಗಿ ತಮಿಳುನಾಡಿನ ಕಲ್ಲಕುರಿಚಿ ಟೌನ್ ಬಸ್ ನಿಲ್ದಾಣದಿಂದ ಕೇವಲ ಕೂಗಳತೆಯ ದೂರದಲ್ಲಿರುವ ಕರುಣಾಪುರದಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತರಲ್ಲಿ ಬಹುತೇಕರು ಬಡವರು, ಕಾರ್ಮಿಕರೇ ಆಗಿದ್ದು, ಈಗ ಜಿಲ್ಲಾ ಕೇಂದ್ರಗಳಲ್ಲಿಯೂ ಅಕ್ರಮ ಮದ್ಯದ ತಯಾರಿಕೆ ಮತ್ತು ಮಾರಾಟ ತಡೆಯಲು ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿದೆ. ತಮಿಳುನಾಡು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಪಳನಿ ಸ್ವಾಮಿ ಒತ್ತಾಯಿಸಿದ್ದಾರೆ.

Leave A Reply

Your email address will not be published.