ಇಲ್ಲಿ ನಡಿಯುತ್ತೆ ಸಂಪೂರ್ಣ ಬೆತ್ತಲೆ ಈಜಾಟ!

ಇಲ್ಲಿ ನಡಿಯುತ್ತೆ ಸಂಪೂರ್ಣ ಬೆತ್ತಲೆ ಈಜಾಟ!

 

ಇಲ್ಲಿ ಎಲ್ಲರೂ ಸಂಪೂರ್ಣ ಬೆತ್ತಲು! ಪುರುಷ-ಮಹಿಳೆ ಅನ್ನೋ ಬೇಧವಿಲ್ಲ. ಎಲ್ಲರೂ ಜೊತೆಯಾಗಿ ಈಜಾಟ ಮಾಡುತ್ತಾರೆ. ಪ್ರತಿ ವರ್ಷ ಇಲ್ಲಿಗೆ ಆಗಮಿಸಿ ಬೆತ್ತಲಾಗಿ ಈಜುವವರ ಸಂಖ್ಯೆ ಹೆಚ್ಚಾಗುತ್ತಿದೆ.ಈ ಬಾರಿ 3,000ಕ್ಕೂ ಹೆಚ್ಚು ಪುರುಷರು-ಮಹಿಳೆಯರು ಆಗಮಿಸಿ ಈ ಬೆತ್ತಲೆ ಈಜಿನಲ್ಲಿ ಪಾಲ್ಗೊಂಡಿದ್ದಾರೆ! ಈ ವಿಡಿಯೋಗಳು, ಫೋಟೋ ಎಲ್ಲೆಡೆ ವೈರಲ್ ಆಗಿದೆ.

ಬೆತ್ತಲೆ ಈಜು ಸಂಪ್ರದಾಯ ನಡೆಯುತ್ತಿರುವು ಆಸ್ಟ್ರೇಲಿಯಾದ ಹೊಬಾರ್ಟ್‌ನಲ್ಲಿ. ಇಲ್ಲಿನ ಡರ್ವೆಂಟ್ ನದಿಯಲ್ಲಿ ಈ ಬೆತ್ತಲೆ ಈಜು ಆಯೋಜನೆಗೊಳ್ಳುತ್ತದೆ. ಚಳಿಗಾಳದ ಸೊಲ್ಸ್‌ಟೈಸ್(ಅಯನ ಸಂಕ್ರಾಂತಿ)‌ನಲ್ಲಿ ಈ ಬೆತ್ತಲೆ ಈಜು ನಡೆಯುತ್ತದೆ.‌ಈ ಬಾರಿ ಜೂನ್ 21ರಂದು 3,000ಕ್ಕೂ ಹೆಚ್ಚು ಮಂದಿ ಬೆತ್ತಲಾಗಿ ಈಜಿ ಸಂಭ್ರಮಿಸಿದ್ದಾರೆ.

2013ರಲ್ಲಿ ಬೆತ್ತಲೆ ಈಜು ಸಂಪ್ರದಾಯ ಆರಂಭಗೊಂಡಿತ್ತು. 2013ರಲ್ಲಿ 100 ಮಂದಿ ಈ ಬೆತ್ತಲೇ ಈಜಿನಲ್ಲಿ ಪಾಲ್ಗೊಂಡಿದ್ದರು. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋದ ಈ ಸಂಪ್ರದಾಯ ಕಳೆದ ವರ್ಷ 2,000 ಆಸುಪಾಸಿನಲ್ಲಿದ್ದ ಈ ಸಂಖ್ಯೆ ಇದೀಗ 3,000ಕ್ಕೇರಿಕೆಯಾಗಿದೆ.

ಸೋಲ್ಸ್‌ಟೈಸ್ ಅಥವಾ ಅಯನ ಸಂಕ್ರಾಂತಿ. ಪಾಶ್ಚಿಮಾತ್ಯ ದೇಶಗಳಲ್ಲಿ ಸೋಲ್ಸ್‌ಟೈಸ್‌ಗೆ ವಿಶೇಷ ಮಹತ್ತವಿದೆ. ಇದನ್ನು ಬೇಸಿಗೆಯ ಮೊದಲ ದಿನ ಎಂದು ಕರೆಯುತ್ತಾರೆ. ಬೇಸಿಗೆಯ ಅಯನ ಸಂಕ್ರಾಂತಿಯಲ್ಲಿ ಹಲವು ದೀರ್ಘವಾಗಿರುತ್ತದೆ. ಇನ್ನು ಚಳಿಗಾಲದ ಅಯನ ಸಂಕ್ರಾಂತಿಯಲ್ಲಿ ರಾತ್ರಿ ದೀರ್ಘವಾಗಿರುತ್ತದೆ. ಈ ದಿನದಲ್ಲಿ ಪಾಶ್ಚಿಮಾತ್ಯರು ಸೂರ್ಯನ ಕಿರಿಣಗಳಲ್ಲೇ ದಿನ ಕಳೆಯಲು ಇಷ್ಟಪಡುತ್ತಾರೆ. ಸಮುದ್ರಕ್ಕಿಳಿದು ಆಟ, ನೀರಿನಲ್ಲಿ ಈಜಾಟ ಸೇರಿದಂತೆ ಬಯಲು ಪ್ರದೇಶಗಳಲ್ಲೇ ಹೆಚ್ಚಾಗಿ ಕಳೆಯುತ್ತಾರೆ.

 

Leave A Reply

Your email address will not be published.