Ambani richness: ಅತಿಥಿಗಳಿಗೆ ರೊಟ್ಟಿಯ ಜತೆ ಚಿನ್ನ ಬಡಿಸಿದ್ದರಾ ಅಂಬಾನಿ: ಅನಂತ್‌- ರಾಧಿಕಾ ಪ್ರಿವೆಡ್ಡಿಂಗ್‌ ಸಂದರ್ಭ ನೆನಪಿಸಿಕೊಂಡ ಸಾರಾ ಆಲಿ ಖಾನ್‌ !

Ambani richness: ಅಂಬಾನಿ ಕುಟುಂಬದ ಒಂದು ಸಣ್ಣ ಸಂಗತಿ ಕೂಡ ದೊಡ್ಡ ಸುದ್ದಿಯಾಗುತ್ತದೆ. ಅಂಬಾನಿ ಕುಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದ ಕುರಿತು ಬಾಲಿವುಡ್ ನಟಿ ಸಾರಾ ಆಲಿಖಾನ್‌ ಮಾಹಿತಿ ನೀಡಿದ್ದಾರೆ. ಈ ಕಾರ್ಯಕ್ರಮ ಎಷ್ಟು ಅದ್ಧೂರಿಯಾಗಿತ್ತು, ಅಲ್ಲಿ ಏನೆಲ್ಲ ಇತ್ತು ಎಂಬ ಅಚ್ಚರಿಯ ವಿವರ ನೀಡಿದ್ದಾರೆ ಆ ನಟಿ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ರ ವಿವಾಹ ಪೂರ್ವ ಸಮಾರಂಭವು ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆದಿತ್ತು. ಅದುವೇ ಸಾಕಷ್ಟು ಸುದ್ದಿಯಾಗಿತ್ತು. ಹಲವು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಗಣ್ಯರು ಮತ್ತು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದರಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಅವರ ಕುಟುಂಬವೂ ಸೇರಿತ್ತು.ಅವತ್ತು ಊಟದ ಜತೆ ಚಿನ್ನ ವಜ್ರ ಬಡಿಸಿದ್ದರು ಎಂದಿದ್ದಾರೆ ಈ ನಟಿ.

ಮದುವೇಲಿ ಆಹಾರದ ಜತೆ ಚಿನ್ನ ಬಡಿಸಿದ ಅಂಬಾನಿ
ಇತ್ತೀಚೆಗಷ್ಟೇ ಮಿಡ್ ಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನಟಿ ಸಾರಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಒಂದು ಪ್ರಶ್ನೆಗೆ ತಮಾಷೆಯಾಗಿ ಸಾರಾ ಆಲಿಖಾನ್‌ ಹೀಗಂದ್ರು. “ಅಲ್ಲಿ ಎಲ್ಲೆಲ್ಲೂ ವಜ್ರಗಳಿದ್ದವು. ಊಟದ ಜತೆಗೆ ಚಿನ್ನಾಭರಣ ಕೂಡ ಬಡಿಸಿದ್ರು” ಎಂದು ಹೇಳಿ ನಕ್ಕಿದ್ದಾರೆ. ಇದಾದ ಬಳಿಕ ಗಂಭೀರವಾಗಿ ಆ ಕಾರ್ಯಕ್ರಮದ ಕುರಿತು ಸಾಕಷ್ಟು ವಿವರ ನೀಡಿದ್ದಾರೆ. “ಕಾರ್ಯಕ್ರಮವು ತುಂಬಾ ಸುಂದರವಾಗಿತ್ತು. ನಮಗೆ ಅತ್ಯುತ್ತಮ ಆತಿಥ್ಯ ದೊರಕಿತು” ಎಂದು ತಿಳಿಸಿದ್ದಾರೆ. ಈಗ ನಟಿ ಸಾರ ಅಲಿ ಖಾನ್ ಹೇಳಿರುವ ಮಾಹಿತಿ ವೈರಲಾಗುತ್ತಿದೆ. ನಟಿ ಈ ವಿಷಯವನ್ನು ತಮಾಷೆಯಾಗಿ ಹೇಳಿರಬಹುದು. ಆದರೆ ಅಂಬಾನಿ ಕುಟುಂಬ ಬಂದ ಅತಿಥಿಗಳಿಗೆ ಚಿನ್ನ ಬೆಳ್ಳಿ ವಜ್ರ ವೈಢೂರ್ಯ ಬಡಿಸಿದ್ದರೂ ಅಚ್ಚರಿ ಇಲ್ಲ.

ಈ ಸಂದರ್ಭ ಅನಂತ್‌ ಅಂಬಾನಿ ಜತೆಗೆ ತಾವು ಶಾಲೆಗೆ ಹೋಗಿರುವ ವಿಚಾರ ಒಂದು ಪ್ರಸ್ತಾಪಿಸಿದ್ದಾರೆ. ರಾಧಿಕಾ ಮರ್ಚೆಂಟ್‌ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತ ಬಂದಿದ್ದೇನೆ ಎಂದೆಲ್ಲ ಹೇಳಿದ್ದಾರೆ. ಇದೇ ಸಮಯದಲ್ಲಿ ಸಾರಾ ಆಲಿ ಖಾನ್‌ ಅಂಬಾನಿ ಕುಟುಂಬದವರನ್ನು ಹೊಗಳಿದ್ದಾರೆ. ರಾಧಿಕಾ ಮರ್ಚೆಂಟ್ ಎಲ್ಲರನ್ನೂ ತುಂಬಾ ಆತ್ಮೀಯವಾಗಿ ಸ್ವಾಗತಿಸುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ಸಂದರ್ಭದ ಕೆಲವು ಅಚ್ಚುಮೆಚ್ಚಿನ ನೆನಪುಗಳನ್ನೂ ನಟಿ ಸಾರ ಅಲಿ ಖಾನ್ ಹಂಚಿಕೊಂಡಿದ್ದಾರೆ.
ಫ್ರೀ ವೆಡ್ಡಿಂಗ್‌ ಇವೆಂಟ್‌ನಲ್ಲಿ ನಿಮ್ಮ ನೆಚ್ಚಿನ ನೆನಪು ಯಾವುದು ಎಂಬ ಪ್ರಶ್ನೆಗೂ ಸಾರಾ ಉತ್ತರಿಸಿದ್ದು, “ಅನಂತ್‌ ಮತ್ತು ರಾಧಿಕಾರವರು ವಿವಾಹದ ಪೇಪರ್‌ಗಳಿಗೆ ಸಹಿ ಹಾಕಿ ಪರಸ್ಪರ ಪ್ರೀತಿಯಿಂದ ನೋಡುತ್ತಿರುವ ಆ ಸಂದರ್ಭ ಸ್ಮರಣೀಯ” ಎಂದು ಸಾರಾ ಹೇಳಿದ್ದಾರೆ. ಮಿಡ್‌ಡೇಗೆ ನೀಡಿದ ಸಂದರ್ಶನದಲ್ಲಿ ಇನ್ನೂ ಹಲವು ಸಂಗತಿಗಳನ್ನು ಸಾರಾ ಹೇಳಿದ್ದಾರೆ. ಜತೆಗೆ ಅಂದು ನೃತ್ಯಪಟು ನೀತಾ ಅಂಬಾನಿ ಪ್ರದರ್ಶಿಸಿದ ಭರತನಾಟ್ಯವಂತೂ ಅದ್ಭುತವಾಗಿತ್ತು. ನಾನು ಆ ಕಾರ್ಯಕ್ರಮವನ್ನು ರೆಪ್ಪೆ ಎವೆಯಿಕ್ಕದೆ ನೋಡಿದೆ ಎಂದು ಆಕೆ ಹೇಳಿದ್ದಾರೆ.

Leave A Reply

Your email address will not be published.