ISRO ಮರುಬಳಕೆ RLV ಲ್ಯಾಂಡಿಂಗ್ ಯಶಸ್ವಿ, ಹ್ಯಾಟ್ರಿಕ್ ಸಾಧಿಸಿದ ISRO !

ISRO: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಭಾನುವಾರ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಿಂದ ‘ಪುಷ್ಪಕ್’ ಎಂಬ ಹೆಸರಿನ ಮರುಬಳಕೆ ಉಡಾವಣಾ ವಾಹನದ (RLV) ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

NEET NET Paper leak: NTA ಮುಖ್ಯಸ್ಥ ಸುಬೋಧ್ ಕುಮಾರ್ ವಜಾ, ನೀಟ್ ಮರು ಪ್ರವೇಶ ಪರೀಕ್ಷೆ ಮುಂದೂಡಿಕೆ

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಕುದಾಪುರ ಎಂಬ ಗ್ರಾಮದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನ ಆವರಣದಲ್ಲಿರುವ ರನ್‌ವೇನಲ್ಲಿ ಬೆಳಗ್ಗೆ 7.10ಕ್ಕೆ ಈ ಪ್ರಯೋಗ ನಡೆಸಿದ್ದು, ಅಲ್ಲಿ ಲ್ಯಾಂಡಿಂಗ್ ಯಶಸ್ವಿಯಾಗಿರುವುದಾಗಿ ಇಸ್ರೋ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.

ಇಸ್ರೋ ಈ ರಾಕೆಟ್ ಉಡಾವಣೆ ಮಾಡಿದ ತರುವಾಯ ಸುಮಾರು 4.5 ಕಿಲೋಮೀಟರ್ ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್, ತದನಂತರ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಈ ರಾಕೆಟ್ ಉಡಾವಣೆ ಮತ್ತು ಲ್ಯಾಂಡಿಂಗ್ ನಂತರ ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನದಲ್ಲಿ ಇಸ್ರೋ ಮಹತ್ವದ ಮುನ್ನಡೆ ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶವನ್ನು ಪ್ರವೇಶಿಸುವ ಯತ್ನವಿದು ಎಂದು ಇಸ್ರೋ ಹೇಳಿಕೊಂಡಿದೆ.

ಈ ಯಶಸ್ಸಿನ ಕುರಿತು ಪೋಸ್ಟ್ ಹಂಚಿಕೊಂಡಿರುವ ಬಾಹ್ಯಾಕಾಶ ಸಂಸ್ಥೆ, ‘ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. 3ನೇ ಮತ್ತು ಅಂತಿಮ ಪ್ರಾಯೋಗಿಕ ಪರೀಕ್ಷೆಯಲ್ಲಿ ಪುಷ್ಪಕ್ ತನ್ನ ನಿಖರವಾದ ಸ್ಥಾನದಲ್ಲಿ ಲ್ಯಾಂಡ್ ಆಗಿದೆ’ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದೆ.

ಪುನೀತ್ ಆತ್ಮದ ಜೊತೆ ಮಾತನಾಡಿ ಈ ಮೂರು ಪ್ರಶ್ನೆ ಕೇಳಿದ ಗುರೂಜಿ! ಬಂದ ಉತ್ತರವೇನು ಗೊತ್ತೆ ?

Leave A Reply

Your email address will not be published.