NEET 2024: ಬಿಹಾರ ಆಯ್ತು, ಈಗ NEET ಪೇಪರ್ ಲೀಕ್ ಪ್ರಕರಣದಲ್ಲಿ ಮಹಾರಾಷ್ಟ್ರ ಸಂಪರ್ಕ ಪತ್ತೆ !

NEET 2024 : ವೈದ್ಯಕೀಯ ಪ್ರವೇಶ ಪರೀಕ್ಷೆಯ NEET 2024 ಪರೀಕ್ಷೆಯ ವೇಳೆ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರನ್ನು ಮಹಾರಾಷ್ಟ್ರ ಪೊಲೀಸರು ಪ್ರಶ್ನಿಸಿದ್ದು, ಕೇವಲ ಬಿಹಾರದಲ್ಲಿ ಮಾತ್ರ ಅವ್ಯವಹಾರ ಕಂಡುಬಂದಿಲ್ಲ. ಡಿಲೀಟ್ ವಂಚನೆಯ ಜಾಗ ಮಹಾರಾಷ್ಟ್ರಕ್ಕೂ ಹಬ್ಬಿರೋದು ಇದೀಗ ಖಚಿತವಾಗುತ್ತಿದೆ.

ದರ್ಶನ್ ಜೈಲು ಮೆಟ್ಟಿಲು ಹತ್ತುವಾಗ ನಡೆದ ಘಟನೆ ಏನು ಗೊತ್ತೆ ? ಹೀಗೆಲ್ಲಾ ಆಯಿತು!

ಸಂಜಯ್ ತುಕಾರಾಂ ಜಾಧವ್ ಮತ್ತು ಜಲೀಲ್ ಉಮಾರ್ಖಾನ್ ಪಠಾಣ್ ಎಂಬ ಇಬ್ಬರು ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯ ಮೇರೆಗೆ ನಾಂದೇಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅವರನ್ನು ಬಂಧಿಸಿತ್ತು. ಅವರು ಜಿಲ್ಲಾ ಪರಿಷತ್ ಶಾಲೆಗಳಲ್ಲಿ ಕಲಿಸುತ್ತಿದ್ದರು ಮತ್ತು ಮಹಾರಾಷ್ಟ್ರದ ಲಾತೂರ್‌ನಲ್ಲಿ ಖಾಸಗಿ ಕೋಚಿಂಗ್ ಸೆಂಟರ್‌ಗಳನ್ನು ನಡೆಸುತ್ತಿದ್ದರು.

ಮಹಾರಾಷ್ಟ್ರದ ಪೊಲೀಸರ ಹಲವಾರು ಗಂಟೆಗಳ ವಿಚಾರಣೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅಗತ್ಯವಿದ್ದರೆ ಮತ್ತೆ ಕರೆಸಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ. NEET ಮತ್ತು UGC-NET ನ ಅವಳಿ ಸಾರ್ವಜನಿಕ ಪರೀಕ್ಷೆಗಳು ಭಾರತೀಯ ಶೈಕ್ಷಣಿಕ ಮತ್ತು ರಾಜಕೀಯ ಜಗತ್ತನ್ನು ಬೆಚ್ಚಿಬೀಳಿಸಿದ್ದು, ನೀಟ್ ಪರೀಕ್ಷೆ ಪತ್ರಿಕೆಯ ಸೋರಿಕೆಯನ್ನು ಕೇಂದ್ರ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಇದೀಗ ತನಿಖೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವುದಾಗಿ ಸರ್ಕಾರ ಹೇಳಿದ್ದರೂ ಈತನಕ ಕೇಂದ್ರ ಸರ್ಕಾರ ಮೀಟ್ 2024 ಮರು ಪರೀಕ್ಷೆಯನ್ನು ಘೋಷಿಸಿಲ್ಲ. ನಿನ್ನೆ ರಾತ್ರಿ ನೀಟ್ ಪೇಪರ್ ಸೋರಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು ಜೊತೆಗೆ ಎನ್ಟಿಎ ಮುಖ್ಯಸ್ಥರನ್ನು ಅಮಾನತು ಮಾಡಿತ್ತು. ಆದರೆ ದೇಶದಾದ್ಯಂತ ಮರು ಪರೀಕ್ಷೆಗಾಗಿ ಕೂಗು ಎದ್ದಿದೆ. 24 ಲಕ್ಷ ವಿದ್ಯಾರ್ಥಿಗಳು ಮತ್ತು ಕೋಟ್ಯಂತರ ಪೋಷಕರು ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿದರು ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು ಸಮರ್ಥನೆಗೆ ಇಳಿದಿದೆ.

ನಿನ್ನೆ ರಾತ್ರಿ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದಾಗಿ ಒಪ್ಪಿಕೊಂಡ ನಾಲ್ವರನ್ನು ಬಿಹಾರ ಪೊಲೀಸರು ಈ ಹಿಂದೆ ಬಂಧಿಸಿದ್ದರು. ಅವರು ಸೋರಿಕೆಯಾದ ಪರೀಕ್ಷಾ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಮತ್ತು ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪ್ರಾಕ್ಸಿ ಅಭ್ಯರ್ಥಿಗಳನ್ನು ಒದಗಿಸುವ ‘ಸಾಲ್ವರ್ ಗ್ಯಾಂಗ್’ಗಳ ಪಾತ್ರವನ್ನು ಪೊಲೀಸರು ಈಗ ತನಿಖೆ ಮಾಡುತ್ತಿದ್ದಾರೆ.

ಈ ಎಲ್ಲಾ ನಟರ ಜೊತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು ಪವರ್ ಸ್ಟಾರ್!

Leave A Reply

Your email address will not be published.