ಈ ಎಲ್ಲಾ ನಟರ ಜೊತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು ಪವರ್ ಸ್ಟಾರ್!

ಈ ಎಲ್ಲಾ ನಟರ ಜೊತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು ಪವರ್ ಸ್ಟಾರ್!

ಸೋಷಿಯಲ್ ಮೀಡಿಯಾಗಳಲ್ಲಿ ಎರಡು ವರ್ಷಗಳ ಹಿಂದೆ ನಮ್ಮನ್ನಗಲಿರುವ ಪುನೀತ್ ರಾಜ್‌ಕುಮಾರ್ ಅವರು ನಟರಾದ ದರ್ಶನ-ಸುದೀಪ್ – ಯಶ್- ಶಿವಣ್ಣ ಬಗ್ಗೆ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದರ್ಶನ್- ಸುದೀಪ್ ಬಗ್ಗೆ ಅದೇನು ಹೇಳಿದ್ದರು? ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮಾತುಕತೆ ವೇಳೆ ನೀವು ದರ್ಶನ್- ಸುದೀಪ್ ಜೊತೆ ಸಿನಿಮಾ ಮಾಡುತ್ತೀರಾ ? ಯಾವಗ? ಎಂದು ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ನಟ ಪುನೀತ್ ‘ದರ್ಶನ್ ಜೊತೆಗಾ? ವೈ ನಾಟ್..? ಒಂದು ಒಳ್ಳೆ ಕಥೆ ಬಂದು ಒಳ್ಳೇ ಕಾಂಬಿನೇಶನ್ ಚಿತ್ರ ಅಂದ್ರೆ ವಿ ವಿಲ್ ಡೆಫಿನೆಟ್ಲಿ ಡೂ’ ಎಂದಿದ್ದಾರೆ.

ಮುಂದೆ, ‘ಸುದೀಪ್‌ ಅಣ್ಣ ಜೊತೆ? ಓಹ್, ಸುದೀಪ್‌ ಜೊತೆನಲ್ಲೂ ಸಿನಿಮಾ ಮಾಡ್ಬೇಕಾ? ಖಂಡಿತ ಮಾಡೋಣ, ಅದಕ್ಕೇನಂತೆ? ಆಫ್‌ಕೋರ್ಸ್‌ , ನಾವೆಲ್ಲಾ ಒಟ್ಟಿಗೇ ಸಿನಿಮಾಕ್ಕೆ ಬಂದೋರು. ನಾನಿರ್ಬಹುದು, ಸುದೀಪ್ ಇರ್ಬಹುದು, ದರ್ಶನ್ ಇರ್ಬಹುದು.
ಎಲ್ಲರ ಜೊತೆ ಚಾನ್ಸ್ ಸಿಕ್ಕಿದ್ರೆ ಕಂಡಿತ ಒಟ್ಟಿಗೇ ಸಿನಿಮಾ ಮಾಡೋಣ. ಅದಕ್ಕೆಲ್ಲಾ ಒಳ್ಳೊಳ್ಲೆ ಕಥೆಗಳು ಸಿಗ್ಬೇಕು ಅಷ್ಟೇನೇ. ಇಟ್ ವಿಲ್ ಬಿ ಪ್ಲೆಸರ್‌ ವಿತ್ ಆಲ್‌ ಆಫ್ ದೆಮ್ ಎಂದಿದ್ದರು.

ಶಿವಣ್ಣ ಜೊತೆ ಒಂದೊಳ್ಳೆ ಕಥೆ ಸಿಕ್ಕಿದ್ ತಕ್ಷಣ ಶುರು. ನನಗೂ ಕೂಡ ಖುಷಿ, ಶಿವಣ್ಣ ಜೊತೆ ನಟನೆ ಮಾಡೋಕೆ. ನಾನೂ ಕೂಡ ಶಿವಣ್ಣನ ಅಭಿಮಾನಿ’ ಎಂದಿದ್ದಾರೆ. ಮುಂದಿನ ಪ್ರಶ್ನೆಗೆ ‘ಯಶ್ ಜೊತೆಗಾ? ಯಶ್‌ನೇ ಕೇಳಿ, ಮುಂದಿನ ಸಾರಿ ಸಿಕ್ಕಾಗ… ನಾವು ಯಾವತ್ತೂ ಸಿಕ್ಕಾಗ ಮಾತಾಡ್ತಾ ಇರ್ತೀವಿ, ಡೆಫಿನೆಟ್ಲೀ ಹ್ಯಾಪಿ’ ಎಂದಿದ್ದರು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.

Leave A Reply

Your email address will not be published.