NEET-UG 2024: ಮುಂದೆ ಏನು ಮಾಡ್ತೀರಿ ಎಂಬ ಕ್ರೀಯಾ ಯೋಜನೆ ಕೊಡಿ, ಡೈಲಿ ಬುಲೆಟಿನ್ ನೀಡಿ- ಮಾಜಿ ಇನ್ಫೋಸಿಸ್ CFO ಮೋಹನ್‌ ದಾಸ್ ಪೈ ಮನವಿ

NEET UG 2024: ವೈದ್ಯಕೀಯ ಪ್ರವೇಶ ಪರೀಕ್ಷೆ NEET 2024 ಯಲ್ಲಿನ ಅಕ್ರಮಗಳ ತನಿಖೆಯನ್ನು ಶಿಕ್ಷಣ ಸಚಿವಾಲಯವು ಈಗ ಸಿಬಿಐಗೆ ವರ್ಗಾಯಿಸಿದೆ. ಕೆಲವು ಅಕ್ರಮಗಳು, ವಂಚನೆ, ಸೋಗುಹಾಕುವಿಕೆ ಮತ್ತು ಅವ್ಯವಹಾರದ ಕೆಲವು ಪ್ರಕರಣಗಳ ಬಗ್ಗೆ ಸಿಬಿಐ ಭಾನುವಾರ ಎಫ್‌ಐಆರ್ ದಾಖಲಿಸಿದೆ. ಈ ಸಂದರ್ಭದಲ್ಲಿ ನೀಟ್-ಯುಜಿ ಪರೀಕ್ಷೆ ಬರೆದ 24 ಲಕ್ಷ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಕ್ರಿಯಾ ಯೋಜನೆ ಪ್ರಕಟಿಸುವಂತೆ ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್‌ದಾಸ್ ಪೈ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ದರ್ಶನ್ ರನ್ನು ಪ್ರೀತಿಯಿಂದ ಪವಿತ್ರಾ ಗೌಡ ಏನೆಂದು ಕರೆಯುತ್ತಿದ್ದರು ಗೊತ್ತೆ ?

ಇಲ್ಲಿಯತನಕ ಶಿಕ್ಷಣ ಸಚಿವಾಲಯವು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸುವಂತೆ ಮತ್ತು ಮತ್ತು ಮುಂದಿನ ಕ್ರಮಗಳ ಬಗ್ಗೆ ದೈನಂದಿನ ಬುಲೆಟಿನ್ ಅನ್ನು ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ. ಈಗ 24 ಲಕ್ಷ ವಿದ್ಯಾರ್ಥಿಗಳು ತುಂಬಾ ಒತ್ತಡದಲ್ಲಿದ್ದಾರೆ ಎಂದು ಟ್ವೀಟ್ ನಲ್ಲಿ ಅವರು ತಿಳಿಸಿದ್ದಾರೆ.

ನೀಟ್ 2024 ಪರೀಕ್ಷೆಯು ಮೇ 5 ರಂದು 4,750 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆದಿತ್ತು. 67 ವಿದ್ಯಾರ್ಥಿಗಳು ಪರಿಪೂರ್ಣ 720 ಅಂಕಗಳನ್ನು ಗಳಿಸಿದ ನಂತರ ಕೆಲವು ವಿದ್ಯಾರ್ಥಿಗಳು ಅಕ್ರಮಗಳನ್ನು ಆರೋಪಿಸಿದ್ದರು. ದಿನಗಳಿದಂತೆ ಅದಕ್ಕೆ ಪೂರಕ ಸಾಕ್ಷಿಗಳು ಕೂಡ ಸಿಕ್ಕಿದ್ದವು. ಇಂತಹ ಘಟನೆ NTA ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ. ಪ್ರಶ್ನೆ ಪತ್ರಿಕೆಗಳ ಸೋರಿಕೆಯು ಮೊದಲು ಬಿಹಾರದಲ್ಲಿ ಗಮನಕ್ಕೆ ಬಂದಿದ್ದು, ನಂತರ ಗುಜರಾತ್‌ನ ಗೋದ್ರಾದಲ್ಲಿ ಕಾಣಿಸಿಕೊಂಡವು. ನಿನ್ನೆ ಸಂಜೆಯ ಹೊತ್ತಿನಲ್ಲಿ ಮಹಾರಾಷ್ಟ್ರಕ್ಕೂ ಅದು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ.

ಪೇಪರ್ ಸೋರಿಕೆಗೆ ಸಂಬಂಧಿಸಿದಂತೆ ಬಿಹಾರದ ಆರ್ಥಿಕ ಅಪರಾಧಗಳ ಘಟಕವು ಪ್ರಮುಖ ಶಂಕಿತ ಸಿಕಂದರ್ ಯಾದವೆಂದು ಸಹಿತ 13 ಜನರನ್ನು ಬಂಧಿಸಿದೆ. ಆರೋಪಿಗಳ “ನಾರ್ಕೋ ವಿಶ್ಲೇಷಣೆ ಮತ್ತು ಮೆದುಳಿನ ಮ್ಯಾಪಿಂಗ್ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ” ಯನ್ನು EOU ತನಿಖೆ ನಡೆಸುತ್ತಿದೆ. ನೀಟ್ ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆಯನ್ನು ಶಿಕ್ಷಣ ಸಚಿವಾಲಯವು ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಿದೆ.

ಈಗ ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ, ಕೇಂದ್ರ ಸರ್ಕಾರವು ಸಾರ್ವಜನಿಕ ಪರೀಕ್ಷೆಗಳಲ್ಲಿ ಅನ್ಯಾಯದ ವಿಧಾನಗಳನ್ನು ತಡೆಗಟ್ಟಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಒದಗಿಸಲು ಸಾರ್ವಜನಿಕ ಪರೀಕ್ಷೆ ಕಾಯಿದೆ, 2024 ಅನ್ನು ಸಹ ಜಾರಿಗೊಳಿಸಿದೆ. ಜತೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಚಿವಾಲಯವು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದ್ದು ಅದರ ಸಮಿತಿಯ ನೇತೃತ್ವವನ್ನು ಇಸ್ರೋ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ವಹಿಸಲಿದ್ದಾರೆ.

ವಿದ್ಯಾರ್ಧಿಗಳಿಗೆ ಗುಡ್ ನ್ಯೂಸ್; ಇಲ್ಲಿದೆ ಸ್ಕಾಲರ್ ಶಿಪ್ ಪಡೆಯುವ ವಿಧಾನ

Leave A Reply

Your email address will not be published.