ಪುರುಷರಿಗಿಂತ ಮಹಿಳೆಯ ತೊಡೆ ದಪ್ಪಗಿರಲು ಕಾರಣವೇನು ? ಇಲ್ಲಿದೆ ಅಶ್ಚರ್ಯಕರ ವಿಷಯ

ಪುರುಷರಿಗಿಂತ ಮಹಿಳೆಯ ತೊಡೆ ದಪ್ಪಗಿರಲು ಕಾರಣವೇನು ? ಇಲ್ಲಿದೆ ಅಶ್ಚರ್ಯಕರ ವಿಷಯ

ಸಾಮಾನ್ಯವಾಗಿ ಮಹಿಳೆಯರ ತೊಡೆಗಳು ಪುರುಷರಿಗಿಂತಲೂ ದಪ್ಪ ಆಗಿರುತ್ತದೆ. ಬಹುತೇಕ ಮಹಿಳೆಯರಲ್ಲಿ ಇದನ್ನು ನೋಡಬಹುದು. ಇದು ಒಳ್ಳೆಯ ಕೊಬ್ಬು ? ಅಥವಾ ಕೆಟ್ಟ ಕೊಬ್ಬ? ಮಹಿಳೆಯ ತೊಡೆ ದಪ್ಪ ಇರಲು ಕಾರಣವೇನು ?

ಕುತೂಹಲದ ವಿಷಯ ಏನೆಂದರೆ, ಮಹಿಳೆಯರ ತೊಡೆಯಲ್ಲಿರುವ ಕೊಬ್ಬು ಅನಾರೋಗ್ಯದ ಸಂಕೇತವಾಗಿರದೇ ಇದು ಆರೋಗ್ಯದ ಸಂಕೇತವಾಗಿದೆ! ಅಧ್ಯಯನದ ಪ್ರಕಾರ ದಪ್ಪ ತೊಡೆಯನ್ನು ಹೊಂದಿದವರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ ಎನ್ನುವುದು ಸಾಬೀತಾಗಿದೆ.

ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಪುರುಷರು ಎಂಡ್ರಾಯ್ಡ್​ ಪ್ಯಾಟರ್ನ್​ ಮತ್ತು ಮಹಿಳೆಯರು ಜಿನಾಯ್ಡ್​ ಪ್ಯಾಟರ್ನ್ ಹೊಂದಿರುತ್ತಾರೆ. ಇದನ್ನು ಕಂಟ್ರೋಲ್​ ಮಾಡಲು ಹೋಗಬಾರದು. ಏಕೆಂದರೆ ಇದು ಮಹಿಳೆಯರು ತಾಯಿಯಾಗುವ ಪ್ರಕ್ರಿಯೆಯಿಂದ ಹಿಡಿದು ಮಹಿಳೆಯರ ಶರೀರದ ಮಾದರಿಗೆ ಅನುಗುಣವಾಗಿ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಮಹಿಳೆಯರಲ್ಲಿ ಸಹಜವಾಗಿ ಆಸ್ಟ್ರೋಜನ್ (astrogen) ಪ್ರಮಾಣ ಜಾಸ್ತಿ ಇರುತ್ತದೆ. ಇದರಿಂದ ತೊಡೆಗಳು ದಪ್ಪವಾಗಿ ಇರಲು ಕಾರಣವಾಗಿದೆ.

ಆಸ್ಟ್ರೋಜನ್ ಮಹಿಳೆಯರಲ್ಲಿ ಮುಟ್ಟು ಉಂಟು ಮಾಡಲು, ಸ್ತನಗಳ ಬೆಳವಣಿಗೆಗೆ ಸಹಾಯವಾಗಲಿದೆ. ಅಷ್ಟೇ ಅಲ್ಲದೇ ಗರ್ಭಿಣಿಯಾಗಲು ಕೂಡ ಇದು ನೆರವಾಗಲಿದೆ. ಮಾಸಿಕ ಋತುಸ್ರಾವದಲ್ಲಿ ಸಮಲೋತನ ಕಾಪಾಡಿಕೊಳ್ಳುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಇವೆಲ್ಲಾ ಕಾರಣಗಳಿಂದ ಮಹಿಳೆಯರಲ್ಲಿ ನೈಸರ್ಗಿಕದತ್ತವಾಗಿ ತೊಡೆಗಳು ದಪ್ಪ ಇರುತ್ತವೆ.

 

 

Leave A Reply

Your email address will not be published.