ದರ್ಶನ್ ವರ್ತನೆ ಬಗ್ಗೆ ಮಾತನಾಡಿದ ಭಾವನಾ ಬೆಳಗೆರೆ ಹೇಳಿದ್ದೇನು?

ದರ್ಶನ್ ವರ್ತನೆ ಬಗ್ಗೆ ಮಾತನಾಡಿದ ಭಾವನಾ ಬೆಳಗೆರೆ ಹೇಳಿದ್ದೇನು?

 

ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮಾತ್ರವಲ್ಲ ಹಲವು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಆದರೆ ಈಗ ಕಾನೂನು ಒಂದೇ. ಕುಡಿದು ಮಾಡಿದೆ ಅಂತ ಕ್ಷಮೆ ಏನು ಕಡಿಮೆ ಆಗಲ್ಲ. ಆದರೆ ದರ್ಶನ್‌ ಯಾವಾಗ ಈ ರೀತಿಯ ಗುಣವನ್ನು ಸರಿ ಮಾಡ್ಕೋತ್ತಾರೆ? ಆದರೆ ಮುಂದೆ ಏನಾಗುತ್ತೆ ಎನ್ನುವುದು ಗೊತ್ತಿಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ.

ಭಾವನಾ ಬೆಳಗೆರೆ ಮಾತನಾಡಿ ದರ್ಶನ್‌ ಅವರು ಕುಡಿದು ಮಾತನಾಡುವಾಗ ಅಗ್ರೆಸಿವ್‌ ಆಗಿ ಮಾತಾಡ್ತಾರೆ. ಇಲ್ಲ ಅಂದರೆ ಆರಾಮಾಗಿ ಮಾತನಾಡುತ್ತಾರೆ. ಕುಡಿದಿದ್ದಾಗ ಯಾರು ಏನೇ ಹೇಳಿದ್ದರೂ ಒಪ್ಪಿಕೊಳ್ಳಲ್ಲ. ಇಂದು ನಾನು ತಂದೆಯವರೆ ಹಿಸ್ಟರಿ ಇಟ್ಟುಕೊಂಡು ಮಾತಾಡ್ತಾ ಇಲ್ಲ. ನನ್ನ ಸ್ವತಃ ಅನುಭವ ಹಂಚಿಕೊಳ್ಳುತ್ತಿರುವೆʼʼಎಂದರು.

 

Leave A Reply

Your email address will not be published.