ನನ್ನ ಪ್ರಕಾರ ಹಾಲಿನ ದರ ಇನ್ನು ಹೆಚ್ಚು ಮಾಡಬೇಕು ಎಂದ ಡಿಕೆಶಿ! ಕಾರಣ ಇಲ್ಲಿದೆ

ನನ್ನ ಪ್ರಕಾರ ಹಾಲಿನ ದರ ಇನ್ನು ಹೆಚ್ಚು ಮಾಡಬೇಕು ಎಂದ ಡಿಕೆಶಿ! ಕಾರಣ ಇಲ್ಲಿದೆ

 

ರಾಜ್ಯ ಸರ್ಕಾರದ ದರ ಏರಿಕೆಯ ಬಗ್ಗೆ ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಮಾತನಾಡಿದ ಮಾತುಗಳು ಇಲ್ಲಿವೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರು ರೈತ ವಿರೋಧಿಗಳು ಎಂದು ಈಗ ಅರ್ಥ ಆಯ್ತು, ಕೆಎಂಎಫ್ ಅಂದರೆ ರೈತರ ಒಕ್ಕೂಟ, ದರ ರೈತರಿಗೆ. ನನ್ನ ಪ್ರಕಾರ ಇನ್ನೂ ಹಾಲಿನ‌ ದರ ಜಾಸ್ತಿ ಮಾಡಬೇಕು. ಯಾರು ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ, ರೈತರೆಲ್ಲರೂ ಹಸುಗಳನ್ನು ಮಾರುತ್ತಿದ್ದಾರೆ. ಇದರಿಂದ ಬಿಜೆಪಿಯ ರೈತ ವಿರೋಧಿ ನಿಲುವು ಗೊತ್ತಾಗ್ತಿದೆ ಎಂದು ಹೇಳಿದರು.

ಹಾಲಿನ ಬೆಲೆ ಏರಿಕೆ ಮಾಡಬೇಕು ಅಂತ ರೈತರ (Farmers) ಒತ್ತಾಯವಿದೆ. ರೈತರ ಒತ್ತಾಯದ ಮೇರೆಗೆ ಬೆಲೆ ಏರಿಕೆ ಮಾಡಿದ್ದೇವೆ ಅಂತ ಹೇಳಿದ್ದಾರೆ. ಈಗ ರಾಜ್ಯದಲ್ಲಿ ಹಾಲು ಹೆಚ್ಚು ಶೇಖರಣೆ ಆಗ್ತಿದ್ದು, ಹೀಗಾಗಿ 50ml ಹೆಚ್ಚು ಮಾಡಿದ್ದೇವೆ. ಎರಡು ರೂಪಾಯಿ ಹೆಚ್ಚು ಮಾಡಿದ್ದು 50ml ಹೆಚ್ಚು ಮಾಡಿದ್ದೇವೆ. ರೈತರಿಗೆ ಈಗಾಗಲೇ ಐದು ರೂಪಾಯಿ ಕೊಡ್ತಿದ್ದೇವೆ, ಹೆಚ್ಚುವರಿ ಹಣ ಕೊಟ್ಟಿಲ್ಲ. ಹಾಲು ಹೆಚ್ಚು ಉತ್ಪಾದನೆ ಆಗ್ತಿತ್ತು ಅದನ್ನ ಕೊಳ್ಳಲು 50ml ಜಾಸ್ತಿ ಮಾಡಿದ್ದೇವೆ. ಅದಕ್ಕೆ ಎರಡು ರೂಪಾಯಿ ಪಡೆಯುತ್ತಿದ್ದೇವೆ ಎಂದು ಡಿಕೆಶಿ ಸಮರ್ಥನೆ ಮಾಡಿಕೊಂಡರು.

ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಹೊಸ ಸರ್ಕಾರ ಬಂದ ಮೇಲೆ ಗ್ಯಾರಂಟಿ ಕೊಟ್ಟು ಏನೂ ನಿಲ್ಲಿಸಿಲ್ಲ. ಐದು ವರ್ಷ ಬಿಜೆಪಿಯವರು ಫೇಲ್ ಆಗಿದ್ದಕ್ಕೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಎನ್‌ಡಿಆರ್‌ಎಫ್ ಅನುದಾನ ಕೊಡಲಿಲ್ಲ. ಸುಪ್ರೀಂ ಕೋರ್ಟ್ ಗೆ ಹೋಗಿ ನಾವು ಅನುದಾನ ತಂದಿದ್ದೇವೆ. ವಿರೋಧ ಪಕ್ಷದವರಿಗೆ ಕೆಲಸ ಇಲ್ಲಾ ಹೀಗಾಗಿ ಮಾತಾಡ್ತಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.

Leave A Reply

Your email address will not be published.