ಎಚ್ಚರ! ಕೆಲ ಪುರುಷರನ್ನು ಆರೋಗ್ಯ ಇಲಾಖೆ ಹುಡುಕುತ್ತಿದೆ! ಕಾರಣವಾದರೂ ಏನು ಗೊತ್ತೆ ?

ಕೆಲ ಪುರುಷರನ್ನು ಆರೋಗ್ಯ ಇಲಾಖೆ ಹುಡುಕುತ್ತಿದೆ! ಕಾರಣವಾದರೂ ಏನು ಗೊತ್ತೆ ?

 

 

ಮದುವೆಯಾಗಿ ಕೆಲ ದಿನ ಸಂಸಾರ ಮಾಡಿದ ಮೇಲೆ ಗಂಡನ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ನಗನಾಣ್ಯಗಳ ಜೊತೆ ಎಸ್ಕೇಪ್‌ ಆಗುತ್ತಿದ್ದ ಮಹಿಳೆಯೊಬ್ಬಳನ್ನುಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.. ಆಕೆಗೆ ಸಹಾಯ ಮಾಡುತ್ತಿದ್ದ ಆರು ಮಂದಿಯ ಗ್ಯಾಂಗ್‌ ಕೂಡಾ ಅಂದರ್‌ ಆಗಿದೆ.. ಬಂಧಿತ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಆರು ಮಂದಿಯನ್ನು ಮದುವೆಯಾಗಿ ವಂಚಿಸಿರುವುದಾಗಿ ಹೇಳಿದ್ದಾರೆ.. ಇದರಲ್ಲಿ ಬಹುತೇಕ ಉತ್ತರಾಖಂಡ್‌ ಮೂಲದವರೇ ಆಗಿದ್ದಾರೆ.

ಆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಆಕೆಗೆ ಏಡ್ಸ್‌ (HIV) ಇರುವುದು ಪತ್ತೆಯಾಗಿದೆ. ಮಹಿಳೆ ಇನ್ನೂ ಹೆಚ್ಚು ಮಂದಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಆದ್ರೆ ಆಕೆ ಉತ್ತರಾಖಂಡ್‌ , ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಓಡಾಡಿದ್ದಾಳೆ.ಅಲ್ಲೆಲ್ಲಾ ಪುರುಷರ ಜೊತೆ ದೈಹಿಕ ಸಂಪರ್ಕ ನಡೆಸಿದ್ದಾಳೆ.

ಆಕೆಗೆ ಹೆಚ್‌ಐವಿ ಇರುವುದರಿಂದ ಪುರುಷರಿಗೂ ಅದು ಹರಡಿರುವ ಸಾಧ್ಯತೆ ಇದೆ.ಹಾಗೇನಾದರೂ ಆಗಿದ್ದರೆ, ಅವರಿಂದ ಮತ್ತಷ್ಟು ಜನಕ್ಕೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದೆ.ಆಕೆಯ ಸಂಪರ್ಕಕ್ಕೆ ಬಂದಿರುವ ಪುರುಷರನ್ನು ಪತ್ತೆ ಹಚ್ಚಿ ಅವರ ಆರೋಗ್ಯ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.

Leave A Reply

Your email address will not be published.