ಬಟ್ಟೆ ಬಿಚ್ಚಿ ಮಲಗಿದ್ದ ಆ ಸೀನ್ ಬಗ್ಗೆ ಮುಜುಗರ ಇಲ್ಲದೆ ಮಾತನಾಡಿದ ನಟಿ ದರ್ಶನಾ ಹೇಳಿದ್ದೇನು‌?

ಬಟ್ಟೆ ಬಿಚ್ಚಿ ಮಲಗಿದ್ದ ಆ ಸೀನ್ ಬಗ್ಗೆ ಮುಜುಗರ ಇಲ್ಲದೆ ಮಾತನಾಡಿದ ನಟಿ ದರ್ಶನಾ ಹೇಳಿದ್ದೇನು‌?

ಮಾಲಿವುಡ್​ನಲ್ಲಿ ಖ್ಯಾತಿ ಗಳಿಸಿರುವ ದರ್ಶನಾ ಅವರು ಇದಾಗಲೇ ತೆಲುಗುವಿನಲ್ಲಿಯೂ ನಟಿಸಿದ್ದಾರೆ. ನಟನೆ ಮೂಲಕ ಗಮನ ಸೆಳೆದ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರುತ್ತಿವೆ. ಸ್ಯಾಂಡಲ್​ವುಡ್​ನಲ್ಲಿಯೂ ಅವಕಾಶಕ್ಕಾಗಿ ನಟಿ ಕಾಯುತ್ತಿರುವ ಬೆನ್ನಲ್ಲೇ ಇದೀಗ ಇಂಟಿಮೇಟ್​ ಸೀನ್​ ಕುರಿತು ಓಪನ್​ ಆಗಿ ಮಾತನಾಡಿದ್ದಾರೆ ನಟಿ.

ಇತ್ತೀಚೆಗೆ ಅವರ ಪ್ಯಾರಡೈಸ್​ ಚಿತ್ರ ಬಿಡುಗಡೆಯಾಗಿತ್ತು. ರೋಷನ್ ಮ್ಯಾಥ್ಯೂಸ್ ಅವರ ಜೊತೆ ದರ್ಶನಾ ತೆರೆ ಹಂಚಿಕೊಂಡಿದ್ದಾರೆ. ಶ್ರೀಲಂಕಾದ ನಿರ್ದೇಶಕ ಪ್ರಸನ್ನ ವಿತಾನಗೆ ಅವರು ಇದರ ನಿರ್ದೇಶಕರು. ಈ ಸಂದರ್ಭದಲ್ಲಿ ನಟಿ ನೀಡಿದ್ದ ಸಂದರ್ಶನವೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರಲ್ಲಿ ನಟಿ ಇಂಟಿಮೇಟ್​ ಸೀನ್​, ಹಸಿಬಿಸಿ ದೃಶ್ಯಗಳ ಕುರಿತು ಮಾತನಾಡಿದ್ದಾರೆ.

ಇದರಲ್ಲಿ ನಟಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಟ್ಟೆ ಇಲ್ಲದೇ ಇದರಲ್ಲಿ ನಟಿಸಿರುವ ಬಗ್ಗೆ ನಟಿಗೆ ಕೇಳಿದ ಪ್ರಶ್ನೆಗೆ ಅವರು ಯಾವುದೇ ಮುಜುಗರವಿಲ್ಲದೇ ಉತ್ತರ ನೀಡಿದ್ದಾರೆ. ಇದರಲ್ಲಿ ಇಂಟಿಮೇಟ್​ ಸೀನ್​ ಇರುವ ಬಗ್ಗೆ ನಿರ್ದೇಶಕರು ಹೇಳಿದ್ದರು. ಆ ಕಥೆ ಕೇಳಿದಾಗ ಬಟ್ಟೆ ಇಲ್ಲದೇ ಬರಬೇಕು ಎನ್ನುವುದು ತಿಳಿಯಿತು. ಚಿತ್ರಕ್ಕಾಗಿ ಹೀಗೆ ಮಾಡುವಲ್ಲಿ ತಪ್ಪೇನು ಎಂದು ಅಂದುಕೊಂಡೆ. ಈ ಚಿತ್ರದ ಶೂಟಿಂಗ್​ ಮಾಡುವಾಗ ಬಟ್ಟೆ ಧರಿಸಬೇಕು ಎಂದು ನನಗೇನೂ ಅನ್ನಿಸಲಿಲ್ಲ. ಬಟ್ಟೆ ಇಲ್ಲದೇ ಶೂಟಿಂಗ್​ ಮುಗಿಸಿ ಬಂದೆ ಎಂದಿದ್ದಾರೆ. ಇಂಥ ದೃಶ್ಯ ಇರುವಾಗ ಹಾಗೆ ಮಾಡುವುದು ನಟಿಯಾದವಳ ಕರ್ತವ್ಯ. ಅಷ್ಟಕ್ಕೂ ನಿರ್ದೇಶಕ ಆಶಿಕ್, ಛಾಯಾಗ್ರಾಹಕ ಶೈಜುಕಾ ಮತ್ತು ನನ್ನ ಸಹ ನಟ ರೋಷನ್ ಮೇಲೆ ನನಗೆ ನಂಬಿಕೆ ಇದ್ದುದರಿಂದ ಬಟ್ಟೆ ಬಿಚ್ಚಿದೆ ಎಂದಿದ್ದಾರೆ.

‘ವೈರಸ್​’, ‘ಸೀ ಯೂ ಸೂನ್​’, ‘ಜಯ ಜಯ ಜಯ ಜಯ ಹೇ’, ‘ಹೃದಯಂ’ ಮುಂತಾದ ಇವರ ಸಿನಿಮಾಗಳು ಹಿಟ್​ ಆಗಿವೆ. ನಟಿಸಿದ್ದು ಕೆಲವೇ ಚಿತ್ರಗಳಾದರೂ ಅವರು ಯಶಸ್ಸು ಕಂಡಿವೆ. ಇದು ಅವರಿಗೆ ಪ್ಲಸ್​ ಪಾಯಿಂಟ್​ ಆಗಿದೆ. ಅದರಲ್ಲಿಯೂ ಮಾಲಿವುಡ್​ನ ಹೃದಯಂ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ಅದರಲ್ಲಿನ ಅಭಿನಯಕ್ಕೆ ಸಿನಿ ಪ್ರೇಮಿಗಳು ಮನಸೋತಿದ್ದಾರೆ. ತೆಲಗುವಿನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Leave A Reply

Your email address will not be published.