ಕರ್ನಾಟಕ ಸಿಎಂ ಗೆ ಬಂದಿದ್ಯಾ ಅಂಬಾನಿ ಪುತ್ರನ ಮದುವೆ ಆಮಂತ್ರಣ?

ಕರ್ನಾಟಕ ಸಿಎಂ ಗೆ ಬಂದಿದ್ಯಾ ಅಂಬಾನಿ ಪುತ್ರನ ಮದುವೆ ಆಮಂತ್ರಣ?

ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಮದುವೆ ನಡೆಯಲಿದೆ. ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಸಿಎಂ ಸಿದ್ದರಾಮಯ್ಯಗೂ ಮದುವೆ ಆಹ್ವಾನಿಸಲಾಗಿದೆ ಎಂದು ವಿಡಿಯೋ ವೈರಲ್ ಮಾಡಲಾಗಿದೆ. ಆಮಂತ್ರಣ ಪತ್ರಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಹೆಸರು ಉಲ್ಲೇಖಿಸಿರುವ ಆಹ್ವಾನ ಪತ್ರಿಕೆ ಒಂದು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಆಮಂತ್ರಣ ವೈರಲ್ ಆಗುತ್ತಿದೆ. ಚಿನ್ನದ ದೇವರ ವಿಗ್ರಹಗಳು, ಬೆಳ್ಳಿಯ ಪುಟ್ಟ ದೇವಾಲಯವಿರುವ ಬಾಕ್ಸ್​ನೊಂದಿಗೆ ವಿಶೇಷವಾಗಿ ಮಾಡಿರುವ ಆಮಂತ್ರಣ ಪತ್ರ ವೈರಲ್ ಆಗುತ್ತಿದೆ.

ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಸಿಎಂ ಕಚೇರಿ ಅಧಿಕೃತವಾಗಿ ಯಾವುದೇ ಆಹ್ವಾನ ಬಂದಿಲ್ಲ ಎಂದಿದ್ದಾರೆ.ಆದರೆ ಈವರೆಗೆ ಯಾವುದೇ ರೀತಿ ಯ ಆಮಂತ್ರಣ ಸಿಎಂಗೆ ಬಂದಿಲ್ಲ. ಅಧಿಕೃತವಾಗಿ ಯಾವುದೇ ಆಹ್ವಾನ ಪತ್ರ ತಲುಪಿಲ್ಲ ಎಂದು ಸಿಎಂ ಕಚೇರಿಯಿಂದ ಸ್ಪಷ್ಟಪಡಿಸಲಾಗಿದೆ.ಅಂಬಾನಿ ಪುತ್ರನ ಮದುವೆ ಆಮಂತ್ರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.

Leave A Reply

Your email address will not be published.