ನಡುರಸ್ತೆಯಲ್ಲೇ ನಗ್ನವಾಗಿ ನಡೆದಾಡಿದ ಮಹಿಳೆ! ಮುಂದಾಗಿದ್ದೇನು ?

ನಡುರಸ್ತೆಯಲ್ಲೇ ನಗ್ನವಾಗಿ ನಡೆದಾಡಿದ ಮಹಿಳೆ! ಮುಂದಾಗಿದ್ದೇನು ?

ಇಲ್ಲೊಬ್ಬ ಮಹಿಳೆ ನಡುರಸ್ತೆಯಲ್ಲಿ ನಗ್ನವಾಗಿ ಓಡಾಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ ಆಗಿದೆ.ವಿಡಿಯೊದಲ್ಲಿ ಗಾಜಿಯಾಬಾದ್‌ನ ಮೋಹನ್ ನಗರದ ಚೌರಾಹಾದ ಜನನಿಬಿಡ ರಸ್ತೆಯಲ್ಲಿ ಮಹಿಳೆ ನಗ್ನವಾಗಿ ನಡೆದುಕೊಂಡು ಹೋಗುವುದು ಕಂಡುಬಂದಿದೆ. ಆದರೆ ಮಹಿಳೆಯನ್ನು ಈ ಸ್ಥಿತಿಯಲ್ಲಿ ಕಂಡು ಪುರುಷರು ಬಿಡಿ ಮಹಿಳೆಯರು ಕೂಡ ಸುಮ್ಮನೆ ನೋಡಿ ಹೋದರೇ ವಿನಃ ಆಕೆಯನ್ನು ತಡೆಯಲು ಅಥವಾ ಅವಳಿಗೆ ಬಟ್ಟೆಗಳನ್ನು ನೀಡಲು ಯಾರೂ ಪ್ರಯತ್ನಿಸುತ್ತಿಲ್ಲ ಎಂಬುವುದನ್ನು ಕಾಣಬಹುದು. ಆದರೆ ಮಹಿಳೆಯ ಗುರುತು ತಿಳಿದುಬಂದಿಲ್ಲ.

ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ತಿಳಿದು ಮಹಿಳೆಯನ್ನು ಗುರುತಿಸಲು ಮತ್ತು ಅವಳು ಎಲ್ಲಿಗೆ ಹೋದಳು ಎಂಬುದನ್ನು ಪತ್ತೆ ಹಚ್ಚಲು ವಿಡಿಯೊ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ, ಈ ವೀಡಿಯೊವನ್ನು ಜೂನ್ 25 ರಂದು ರೆಕಾರ್ಡ್ ಮಾಡಲಾಗಿದ್ದು, 10 ಸೆಕೆಂಡುಗಳ ಈ ವಿಡಿಯೊದಲ್ಲಿ ವಾಹನಗಳು ಮತ್ತು ಪಾದಚಾರಿಗಳು ಹಾದುಹೋಗುವ ಭಾರಿ ದಟ್ಟಣೆಯ ಸ್ಥಳದಲ್ಲಿ ಮಹಿಳೆಯನ್ನು ಸೆರೆಹಿಡಿಯಲಾಗಿದೆ. ಮಹಿಳೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಅವಳು ಈ ಸ್ಥಿತಿಯಲ್ಲಿ ಏಕೆ ಇದ್ದಳು ಅಥವಾ ಅವಳು ಹೇಗೆ ರಸ್ತೆಗೆ ಬಂದಳು ಎಂಬುದು ಸ್ಪಷ್ಟವಾಗಿಲ್ಲ.

ಈ ಘಟನೆಯು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಆಕ್ರೋಶ ಮತ್ತು ಟೀಕೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಬೂತ್ ಸಮೀಪದಲ್ಲಿದ್ದರೂ, ಕೂಡ ಬುಧವಾರ ರಾತ್ರಿ ವಿಡಿಯೊ ಆನ್ ಲೈನ್ ನಲ್ಲಿ ಕಾಣಿಸಿಕೊಳ್ಳುವವರೆಗೂ ಅಧಿಕಾರಿಗಳಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.

 

 

Leave A Reply

Your email address will not be published.