ಮದುವೆಯಾಗಿ ಹಲವು ವರ್ಷವಾದರೂ ತಾಯಿಯಾಗೋಕೆ ಸಾಧ್ಯ ಆಗ್ತಿಲ್ವಾ? ಇಲ್ಲಿದೆ ಈ ಮುಖ್ಯ ಕಾರಣ

ಮದುವೆಯಾಗಿ ಹಲವು ವರ್ಷವಾದರೂ ತಾಯಿಯಾಗೋಕೆ ಸಾಧ್ಯ ಆಗ್ತಿಲ್ವಾ?

ದುವೆಯಾಗಿ ವರ್ಷಗಳು ಮೂರು -ನಾಲ್ಕು ಆಗಿದ್ರೂ, ತಾಯಿಯಾಗೋಕೆ ಸಾಧ್ಯ ಆಗ್ತಿಲ್ವಾ? ಹಾಗಿದ್ರೆ ಇಲ್ಲಿದೆ ಈ ಎಲ್ಲಾ ಕಾರಣ.ಋತುಚಕ್ರದ ತೊಂದರೆ, ಲೈಂಗಿಕ ಕ್ರಿಯೆಯ ಸಮಯದಲ್ಲಿ ನೋವು, ಗರ್ಭಾಶಯದಿಂದ ರಕ್ತಸ್ರಾವ, ನಿದ್ರಾಹೀನತೆ, ಮುಖದ ಮೇಲಿನ ಕೂದಲು ಇವೆಲ್ಲವೂ ನಿಮಗೆ ಬಂಜೆತನ ಸಮಸ್ಯೆ ಕಾಡುತ್ತಿದೆ ಅನ್ನೋದನ್ನ ಸೂಚಿಸುತ್ತೆ.

ಅತಿಯಾದ ಒತ್ತಡವು ತಾಯ್ತನಕ್ಕೆ ಅಡ್ಡಿಯಾಗುತ್ತದೆ. ಮಗುಯಾಗೋದಿಲ್ಲ ಎಂದು ಹೆಚ್ಚು ಹೆಚ್ಚು ತಲೆ ಕೆಡಿಸಿದಷ್ಟು ಒತ್ತಡ ಹೆಚ್ಚುತ್ತದೆ. ಇದರಿಂದ ಗರ್ಭ ನಿಲ್ಲೋದಕ್ಕೆ ಕಷ್ಟವಾಗುತ್ತೆ. ಹಾಗಾಗಿ ಒತ್ತಡದಿಂದ ದೂರವಿರಬೇಕು.

ನೀವು ತುಂಬಾ ಕಲುಷಿತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಅದು ಸಹ ಬಂಜೆತನಕ್ಕೆ ಒಂದು ಕಾರಣವಾಗಿರಬಹುದು. ಯಾಕಂದ್ರೆ ಮಾಲಿನ್ಯದಿಂದ ಹಾರ್ಮೋನ್ ಗಳಲ್ಲಿ ಅಸಮತೋಲವಾಗಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬೊಜ್ಜು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯಿಂದಾಗಿ ಮಕ್ಕಳಾಗಲು ತಡೆ ಉಂಟಾಗುತ್ತೆ.ಸಿಗರೇಟ್ ಮತ್ತು ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ. ಇವು ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತವೆ.

Leave A Reply

Your email address will not be published.