ಕಾಂಡೋಮ್ ಬಳಸುತ್ತೀರಾ ? ಇದು ಆರೋಗ್ಯಕ್ಕೆ ಒಳ್ಳೆಯದೇ? ತಪ್ಪದೇ ಈ ಸುದ್ದಿ ಓದಿ

ಕಾಂಡಮ್ ಬಳಸುತ್ತೀರಾ ? ತಪ್ಪದೇ ಈ ಸುದ್ದಿ ಓದಿ

ಮಧುರ ದಾಂಪತ್ಯ ಜೀವನಕ್ಕೆ ಲೈಂಗಿಕತೆ ಅನ್ನೋದು ತುಂಬಾನೆ ಮುಖ್ಯ. ಹೆಚ್ಚಾಗಿ ಜನ ಫ್ಲೇವರ್ಡ್ ಕಾಂಡೋಮ್ ಗಳನ್ನ ಬಳಸ್ತಾರೆ, ಇದು ಜೋಡಿಗಳಿಬ್ಬರಿಗೂ ಅಹ್ಲಾದಕರ ಅನುಭವ ನೀಡುತ್ತೆ. ಆದರೆ ಇದನ್ನ ಪದೇ ಪದೇ ಬಳಕೆ ಮಾಡೋದು ಒಳ್ಳೆಯದೇ?

ಪರಿಮಳಯುಕ್ತ ಅಥವಾ ಫ್ಲೇವರ್ಡ್ ಕಾಂಡೋಮ್ಸ್ ಸಾಮಾನ್ಯವಾಗಿ ಲ್ಯಾಟೆಕ್ಸ್ ಅಥವಾ ಪಾಲಿಯುರೆಥೇನ್ನಿಂದ ತಯಾರಿಸಲಾಗುತ್ತೆ. ಹಾಗಾಗಿ ಇದನ್ನ ನೀವು ಯಥೆಚ್ಚವಾಗಿ ಬಳಸಿದ್ರೆ ಸಮಸ್ಯೆ ಗ್ಯಾರಂಟಿ.ಫ್ಲೇವರ್ಡ್ ಕಾಂಡೋಮ್ಸ್ ಯೀಸ್ಟ್ ಸೋಂಕುಗಳು ಅಥವಾ ಇತರ ಯೋನಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಯೋನಿಯು ಸೂಕ್ಷ್ಮ ಪಿಎಚ್ ಸಮತೋಲನ ಮತ್ತು ನಿರ್ದಿಷ್ಟ ಸೂಕ್ಷ್ಮಜೀವಿಯನ್ನು ಹೊಂದಿದೆ, ಇದು ಸಕ್ಕರೆಯಿಂದ ಅಡ್ಡಿಯಾಗಬಹುದು, ಇದು ಯೀಸ್ಟ್ ಅತಿಯಾದ ಬೆಳವಣಿಗೆಗೆ ಕಾರಣವಾಗುತ್ತೆ ಮತ್ತು ಯೀಸ್ಟ್ ಸೋಂಕಿಗೂ (yeast infection) ಕಾರಣವಾಗುತ್ತೆ.

ಫ್ಲೇವರ್ಡ್ ಕಾಂಡೋಮಿನಲ್ಲಿ ಬಳಸುವ ಫ್ಲೇವರ್ ಏಜೆಂಟ್ಗಳು ಮತ್ತು ಇತರ ರಾಸಾಯನಿಕಗಳು ಕೆಲವು ವ್ಯಕ್ತಿಗಳಲ್ಲಿ ಅಲರ್ಜಿ (allergy) ಉಂಟು ಮಾಡಬಹುದು. ತುರಿಕೆ, ಕೆಂಪಾಗುವಿಕೆ, ಊತ ಮತ್ತು ಉರಿ ಮೊದಲಾದ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು, ಇದು ಯೀಸ್ಟ್ ಸೋಂಕುಗಳು ಸೇರಿದಂತೆ ಇತರ ಸೋಂಕುಗಳಿಗೆ ಕಾರಣವಾಗಬಹುದು.

Leave A Reply

Your email address will not be published.