ಕಲ್ಕಿ ಸಿನಿಮಾದ ಅರ್ಜುನನ ಪಾತ್ರಕ್ಕೆ ವಿಜಯ್ ದೇವರಕೊಂಡ ಪಡೆದ ಸಂಭಾವನೆ ಎಷ್ಟು?

ಕಲ್ಕಿ ಸಿನಿಮಾದ ಅರ್ಜುನನ ಪಾತ್ರಕ್ಕೆ ವಿಜಯ್ ದೇವರಕೊಂಡ ಪಡೆದ ಸಂಭಾವನೆ ಎಷ್ಟು?

 

ಜೂನ್ 27 ರಂದು ಬಿಡುಗಡೆಯಾದ ಕಲ್ಕಿ 2898 AD ಅದ್ಭುತ ಯಶಸ್ಸನ್ನು ಕಂಡಿತು.
ಪ್ರಸ್ತುತ ಭಾರತದ ಅತ್ಯಂತ ಟ್ರೆಂಡಿಂಗ್ ನಟರಲ್ಲಿ ಒಬ್ಬರಾದ ವಿಜಯ್ ದೇವರಕೊಂಡ ಈ ಚಿತ್ರದಲ್ಲಿ ಅರ್ಜುನನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಕಿ ಚಿತ್ರದ ಕೊನೆಯಲ್ಲಿ ವಿಜಯ್ ಐದು ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತಾರೆ. ಆದರೆ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಅರ್ಜುನನಾಗಿ ಕಾಣಿಸಿಕೊಳ್ಳಲು ವಿಜಯ್ ದೇವರಕೊಂಡ ಯಾವುದೇ ಸಂಭಾವನೆ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಅಲ್ಲದೇ ಕಲ್ಕಿ ಎರಡನೇ ಭಾಗದಲ್ಲಿ ವಿಜಯ್ ದೇವರಕೊಂಡ ನಿರ್ವಹಿಸಿದ ಪಾತ್ರಕ್ಕೆ ಪ್ರಾಮುಖ್ಯತೆ ಇರಲಿದೆ ಎನ್ನಲಾಗಿದೆ..

ಈ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳಲು ಹಲವು ತಾರೆಯರು ಯಾವುದೇ ಸಂಭಾವನೆ ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಮೃಣಾಲ್ ಠಾಕೂರ್, ರಾಜಮೌಳಿ ಸೇರಿದಂತೆ ಇತರೆ ನಟರು ಯಾವುದೇ ಸಂಭಾವನೆ ತೆಗೆದುಕೊಂಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

Leave A Reply

Your email address will not be published.