ಈ ರೆಸ್ಟೋರೆಂಟ್ ನಲ್ಲಿ ಸುಂದರಿಯರ ಬೆತ್ತಲೆ ದೇಹವೇ ತಟ್ಟೆ! ಏನು ಈ ವಿಚಿತ್ರ ಪದ್ದತಿ?

ಈ ರೆಸ್ಟೋರೆಂಟ್ ನಲ್ಲಿ ಸುಂದರಿಯರ ಬೆತ್ತಲೆ ದೇಹವೇ ತಟ್ಟೆ! ಏನು ಈ ವಿಚಿತ್ರ ಪದ್ಧತಿ?

ತೈವಾನ್‌ನ ಖಾಸಗಿ ಕ್ಲಬ್‌ ಒಂದರಲ್ಲಿ ನಗ್ನ ಯುವತಿಯರ ದೇಹದ ಮೇಲೆ ಆಹಾರ ಸರ್ವ್ ಮಾಡುವ ನ್ಯೋಟೈಮೊರಿ ಎಂಬ ವಿಚಿತ್ರ ಭೋಜನ ಪಾರ್ಟಿ ಆಯೋಜನೆ ಮಾಡಲಾಗುತ್ತದೆ. ಇದೀಗ ಈ ಕ್ಲಬ್‌ನ ಕೆಲವು ಫೋಟೋಗಳು ಆನ್‌ಲೈನ್‌ ಅಲ್ಲಿ ಲೀಕ್‌ ಆಗಿದೆ.

ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿಯ ಪ್ರಕಾರ ತೈವಾನ್‌ನ ಕರಾವಳಿ ನಗರವಅದ ತೈಚುಂಗನ್‌ ನಲ್ಲಿರುವ ಖಾಸಗಿ ಕ್ಲಬ್‌ ಒಂದರಲ್ಲಿ “ಸುಶಿ ಬೋಟ್”‌ ಎಂಬ ಹೆಸರಿನಲ್ಲಿ ಈ ನ್ಯೋಟೈಮೊರಿ ಡಿನ್ನರ್‌ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಸುಮಾರು 20 ಅತಿಥಿಗಳು ಭಾಗವಹಿಸಿದ್ದು, ಅವರುಗಳಲ್ಲಿ ಪ್ರತಿಯೊಬ್ಬರು ಸುಂದರಿಯರ ಬೆತ್ತಲೆ ದೇಹದ ಮೇಲೆ ಸುಶಿ ಮತ್ತು ಸಾಶಿಮಿ ಸವಿಯಲು ಬರೋಬ್ಬರಿ 2.5 ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ.

ಇಲ್ಲಿನ ಕೆಲವೊಂದು ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್‌ ಆದ ಬಳಿಕ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಅಧಿಕಾರಿಗಳು ಕ್ಲಬ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.ಇದೀಗ ತೈವಾನ್‌ನ ಕ್ಲಬ್‌ ಒಂದರಲ್ಲಿ ನ್ಯೋಟೈಮೊರಿ ಡಿನ್ನರ್‌ ಪಾರ್ಟಿ ನಡೆಯುತ್ತಿದೆ ಎಂದು ಗೊತ್ತಾದ ಬಳಿಕ ಹಲವರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ನ್ಯೋಟೈಮೊರಿ ಎನ್ನುವುದು 1980 ರ ದಶಕದ ಜಪಾನಿನ ಒಂದು ಸಂಪ್ರದಾಯವಾಗಿತ್ತು. ಹಿಂದಿನ ಕಾಲದಲ್ಲಿ ಜಪಾನ್‌ನಲ್ಲಿ ಯುದ್ಧದಲ್ಲಿ ಗೆದ್ದು ಬಂದವರಿಗೆ ಅದ್ಧೂರಿ ಸ್ವಾಗತ ನೀಡುವುದರ ಜೊತೆಗೆ ಭರ್ಜರಿ ಔತನಕೂಟವನ್ನು ಏರ್ಪಡಿಸಲಾಗುತ್ತಿತ್ತು. ಅದರಲ್ಲಿ ಸುಂದರವಾದ ಯುವತಿಯರನ್ನು ಊಟದ ಟೇಬಲ್‌ ಮೇಲೆ ಬೆತ್ತಲೆಯಾಗಿ ಮಲಗಿಸಿ ನಂತರ ಅವರ ದೇಹದ ಖಾಸಗಿ ಭಾಗವನ್ನು ಹೂವು ಮತ್ತು ಎಲೆಗಳಿಂದ ಮುಚ್ಚಿ ಅದರ ಮೇಲೆ ಭೋಜನವನ್ನು ಬಡಿಸಲಾಗುತ್ತಿತ್ತು. ಇದನ್ನೇ ನ್ಯೋಟೈಮೊರಿ ಡಿನ್ನರ್‌ ಎಂದು ಕರೆಯುತ್ತಾರೆ. ಬಳಿಕ ಈ ಪದ್ಧತಿಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿ ಹಲವೆಡೆ ಇದನ್ನು ನಿಷೇಧಿಸಲಾಗಿತ್ತು.

Leave A Reply

Your email address will not be published.