ಜೈಲಿನಲ್ಲಿ ಕೈದಿಗಳಿಗೆ ಸಂಗಾತಿ ಜೊತೆ ಸೆಕ್ಸ್ ಗೆ ಅವಕಾಶವಿದೆಯೇ ?

ಜೈಲಿನಲ್ಲಿ ಸಂಗಾತಿ ಜೊತೆ ಸೆಕ್ಸ್ ಗೆ ಅವಕಾಶವಿದೆಯೇ ?

 

 ಜೈಲಿನಲ್ಲಿ ಕೈದಿಗಳಿಗೆ ಸಿಗೋ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಜೈಲಿನಲ್ಲಿರುವ ಕೈದಿ ತನ್ನ ಸಂಗಾತಿ ಜೊತೆ ವಿಶೇಷ ಸಮಯ ಕಳೆಯಬಹುದು.ಶಾರೀರಿಕ ಸಂಬಂದ ಕೂಡ ಬೆಳೆಸಬಹುದು. ಅದಕ್ಕೆ ವಿಶೇಷ ರೂಮ್ ವ್ಯವಸ್ಥೆ ಕೂಡ ಇರುತ್ತೆ. ವಿದೇಶದಲ್ಲಿ ಮಾತ್ರವಲ್ಲ ಭಾರತದ ಜೈಲಿನಲ್ಲೂ ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಇದೆ.

ಕೈದಿಗಳು ಸಂಗಾತಿ ಜೊತೆ ಪ್ರತ್ಯೇಕವಾಗಿ ಮಾತನಾಡಲು ಅಥವಾ ಸಂಬಂಧ ಬೆಳೆಸಲು ಜೈಲಿನಲ್ಲಿ ವಿಶೇಷ ರೂಮ್ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಜೈಲಿನಲ್ಲಿ ಇಂಥ ವ್ಯವಸ್ಥೆ ಇರೋದಿಲ್ಲ. ಪಂಜಾಬಿನ ಕೆಲ ಜೈಲಿನಲ್ಲಿ ಪ್ರೈವೇಟ್ ಟೈಂಗಾಗಿ ರೂಮ್ ಇದೆ. ಈ ರೂಮಿನಲ್ಲಿ ಡಬಲ್ ಬೆಡ್ ಇದೆ. ಹಾಗೆಯೇ ವಾಶ್ ರೂಮ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಒಂದು ಟೇಬಲ್, ಎರಡು ಕುರ್ಚಿ, ಮೇಜು ಹಾಗೂ ನೀರಿನ ವ್ಯವಸ್ಥೆ ಇದೆ. ಕೋರ್ಟ್ ಒಪ್ಪಿಗೆ ನಂತ್ರ ಪತಿ – ಪತ್ನಿಯನ್ನು ರೂಮ್ ಒಳಗೆ ಬಿಡಲಾಗುತ್ತದೆ. ಹೊರಗಿನಿಂದ ಬೀಗ ಹಾಕಲಾಗುತ್ತದೆ. ಪತಿ – ಪತ್ನಿ ಎರಡು ಗಂಟೆ ಒಟ್ಟಿಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ

ಜೈಲಿನಲ್ಲಿದ್ದಾಗ ಗರ್ಭಿಣಿಯಾಗುವ ಹಕ್ಕು ಖೈದಿಗಳಿಗೆ ಇದೆ ಮತ್ತು ಅದು ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿದೆ. ಕೆನಡಾ, ಜರ್ಮನಿ, ರಷ್ಯಾ, ಬೆಲ್ಜಿಯಂ, ಸ್ಪೇನ್, ಸೌದಿ ಅರಬ್, ಡೆನ್ಮಾರ್ಕ್, ಅಮೆರಿಕಾದಲ್ಲಿ ಕೈದಿಗಳು ಸಂಗಾತಿ ಜೊತೆ ಒಂದಾಗಬಹುದಾದ ಅವಕಾಶಗಳಿವೆ.

 

Leave A Reply

Your email address will not be published.