ಸಾಮಾಜಿಕ ಮಾಧ್ಯಮದಲ್ಲಿ ಈ ಆಪ್ ಸ್ಥಗಿತ!

ಸಾಮಾಜಿಕ ಮಾಧ್ಯಮದಲ್ಲಿ ಈ ಆಪ್ ಸ್ಥಗಿತ!

ಟ್ವಿಟರ್ ಗೆ ಪರ್ಯಾಯವಾಗಿ ಕಳೆದ ನಾಲ್ಕು ವರ್ಷದ ಹಿಂದೆ ಅಸ್ತಿತ್ವಕ್ಕೆ ತಂದಿದ್ದ ಕೂ ಆಯಪ್ ಆರಂಭದಲ್ಲಿ 20 ಲಕ್ಷ ದೈನಂದಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಂತೆ 1 ಕೋಟಿ ಮಾಸಿಕ ಬಳಕೆದಾರರನ್ನು ಹೊಂದಿತ್ತು ಎನ್ನಲಾಗಿದೆ. ಅಲ್ಲದೆ ಈ ಆಯಪ್ ನಲ್ಲಿ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಬಳಕೆದಾರರರನ್ನು ಹೊಂದಿತ್ತು ಆದರೆ ಬಳಕೆದಾರರನ್ನು ಉಳಿಸಿಕೊಳ್ಳುವಲ್ಲಿ ‘ಕೂ’ ವಿಫಲವಾಗಿದೆ.

2020ರಲ್ಲಿ ಉದ್ಯಮಿಗಳಾದ ಅಪ್ರಮೇಯ ರಾಧಾಕೃಷ್ಣ ಹಾಗೂ ಮಯಾಂಕ್ ಬಿಡವಟ್ಕಾ ಎಂಬುವವರು ‘ಕೂ’ ಆಯಪ್ ಅನ್ನು ಅಭಿವೃದ್ಧಿಪಡಿಸಿದ್ದರು ಅಷ್ಟು ಮಾತ್ರವಲ್ಲದೆ ಹತ್ತು ಭಾಷೆಗಳಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತಿತ್ತು. ಹಳದಿ ಬಣ್ಣದ ಹಕ್ಕಿಯ ಲೋಗೊ ಹೊಂದಿತ್ತು. ಇಲ್ಲಿಯವರೆಗೆ ಈ ಅಪ್ಲಿಕೇಶನ್ 60 ಮಿಲಿಯನ್ ಅಂದರೆ 6 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ ಎಂದು ಹೇಳಲಾಗಿದೆ.

ದೇಶಿಯ ಸಾಮಾಜಿಕ ಜಾಲತಾಣವಾದ ‘ಕೂ’ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಕಂಪೆನಿಯ ಸಂಸ್ಥಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ. ಬಿಲಿಯನ್ ಡಾಲರ್ ಮೌಲ್ಯಕ್ಕೆ ಕೂ ಅನ್ನು ಮಾರಾಟ ಮಾಡುವ ಕುರಿತು ಮಾತುಕತೆ ಕೂಡ ನಡೆದಿತ್ತು ಆದರೆ ಕೊನೆಯಲ್ಲಿ ಈ ಮಾತುಕತೆ ಕೂಡ ವಿಫಲವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರು ಹೇಳಿಕೊಂಡಿದ್ದಾರೆ.

Leave A Reply

Your email address will not be published.