ಬೆಳಗಿನ ಜಾವದ ಲೈಂಗಿಕ ಕ್ರಿಯೆಯಿಂದ ಈ ಎಲ್ಲಾ ಲಾಭಗಳಿವೆ ಗೊತ್ತೆ ?!
ಬೆಳಗಿನ ಜಾವದ ಲೈಂಗಿಕ ಕ್ರಿಯೆಯಿಂದ ಈ ಎಲ್ಲಾ ಲಾಭಗಳಿವೆ ಗೊತ್ತೆ ?!
ಲೈಂಗಿಕತೆಯು ನಿಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಹಾಗಾದರೆ ಮುಂಜಾನೆ ಸೆಕ್ಸ್ ಮಾಡುವುದರಿಂದ ದೇಹ ಮತ್ತು ಮನಸ್ಸಿನಲ್ಲಿ ಆಗುವ ಅದ್ಭುತ ಬದಲಾವಣೆಗಳೇನೇನು?
ಕೆಲವು ದಂಪತಿಗಳು ಸೆಕ್ಸ್ ಲೈಫನ್ನು ಬಹಳ ಎಂಜಾಯ್ ಮಾಡುತ್ತಾರೆ. ಇದರ ಹಿಂದೆ ಒಂದೇ ಒಂದು ಕಾರಣವಿದೆ. ಅವರು ಬೇಗ ಮಲಗುತ್ತಾರೆ, ಬೇಗ ಏಳುತ್ತಾರೆ. ಮುಂಜಾನೆಯೇ ಸೆಕ್ಸ್ ನಡೆಸಿ ಆ ದಿನಕ್ಕೆ ಬೇಕಾದ ಉತ್ಸಾಹವನ್ನು ಜೋಡಿಸಿಕೊಳ್ಳುತ್ತಾರೆ. ಇಂಥವರು ದೀರ್ಘಾಯುಷ್ಯವನ್ನು ಕೂಡ ಹೊಂದಿರುತ್ತಾರೆ ಎಂದು ವಿಜ್ಞಾನ ಹೇಳುತ್ತೆ.
ಇತ್ತೀಚಿನ ಕೆಲವು ಅಧ್ಯಯನಗಳು ಬೆಳಗಿನ ಸೆಕ್ಸ್ ನಿಮ್ಮ ಮನಸ್ಸಿಗೆ ಮಾತ್ರವಲ್ಲದೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು ಎಂದು ದೃಢಪಡಿಸಿದೆ. ಬೆಳಗ್ಗೆ ಸೆಕ್ಸ್ ಮಾಡುವುದರಿಂದ ಹೊಳೆಯುವ ತ್ವಚೆ ಪಡೆಯಲು ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಚರ್ಮವು ಆರೋಗ್ಯಕರ ಮತ್ತು ರೋಮಾಂಚಕವಾಗುತ್ತದೆ. ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತದೆ.
ಬೆಳಗಿನ ಸೆಕ್ಸ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆಗೆ ಸಹಾಯ ಮಾಡುವ ಅಪಧಮನಿಗಳ ಊತವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ದಂಪತಿಗಳಿಗೆ ಬೆಳಿಗ್ಗೆ ಲೈಂಗಿಕತೆ ಅನುಕೂಲ. ಈ ರೀತಿಯ ಲೈಂಗಿಕತೆಯು 300 ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.