Jacqueline Fernandez Birthday: ಜೈಲಿನಿಂದ‌ ನಟಿ ಜಾಕ್ವೆಲಿನ್‌ಗೆ ಮತ್ತೆ ರೊಮ್ಯಾಂಟಿಕ್‌ ಆಗಿ ಪ್ರೇಮಪತ್ರ ಬರೆದ ಸುಕೇಶ್‌ ಚಂದ್ರಶೇಖರ್‌!

Bollywood news Jacqueline Fernandez Birthday Sukesh Chandrashekar love letter for Jacqueline Fernandez from jail

Jacqueline Fernandez Birthday: ಸುಕೇಶ್‌ ಚಂದ್ರಶೇಖರ್‌ ಮತ್ತೊಮ್ಮೆ ಬಾಲಿವುಡ್‌ ಚಿತ್ರ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ಗೆ ಪ್ರೇಮ ಪತ್ರ ಬರೆದಿದ್ದಾನೆ. ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ದೆಹಲಿ ಜೈಲಿನಲ್ಲಿರುವ ಸುಕೇಶ್‌ ಜಾಕ್ವೆಲಿನ್‌ ಹುಟ್ಟುಹಬ್ಬದಂದು( Jacqueline Fernandez Birthday) ಬರೆದಿರುವ ಈ ಪ್ರೇಮ ಪತ್ರದಲ್ಲಿ ಸುಕೇಶ್‌ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ. ಈ ಪತ್ರದಲ್ಲಿ ಹಲವು ತಪ್ಪುಗಳಿದ್ದರೂ ಸುಕೇಶ್‌ ರೊಮ್ಯಾಂಟಿಕ್‌ ಆಗಿ ಬರೆದಿದ್ದಾರೆ. ಹಿಂದಿಯಲ್ಲಿ ಈ ಪ್ರೇಮಪತ್ರ ಬರೆಯಲಾಗಿದೆ.

“ನನ್ನ ಪ್ರೀತಿಯ ಪ್ರಪಂಚದ ಅತ್ಯಂತ ಸುಂದರಿ ಬೊಮ್ಮ ಜಾಕಿ (ಜಾಕ್ವೆಲಿನ್ ಫರ್ನಾಂಡೀಸ್)…ಒಂದು ಮರದಲ್ಲಿ ಸಾವಿರಾರು ಹೂವುಗಳು ಅರಳುತ್ತವೆ ಆದರೆ ಅವುಗಳಲ್ಲಿ ಒಂದು ವಿಶೇಷವಾಗಿದೆ…ಜೀವನದಲ್ಲಿ ಸಾವಿರಾರು ನೆನಪುಗಳಿವೆ, ಆದರೆ ಅವುಗಳಲ್ಲಿ ಒಂದು ವಿಶೇಷವಾಗಿದೆ. ಅದು ಹೃದಯವನ್ನು ಸ್ಪರ್ಶಿಸುತ್ತದೆ ಮತ್ತು ಒಬ್ಬನನ್ನು ಹುಚ್ಚನಂತೆ ಪ್ರೀತಿಸುವಂತೆ ಮಾಡುತ್ತದೆ ಎಂದು ಸುಕೇಶ್‌ ಬರೆದಿದ್ದಾರೆ. ಇನ್ನೂ ಮುಂದುವರಿದು ಜಗತ್ತಿನ ಸುಖವನ್ನೆಲ್ಲ ನಿನ್ನ ಪಾದದಲ್ಲಿ ಇಡುತ್ತೇನೆ. ನಿನ್ನ ದುಃಖಗಳನ್ನು ನಾನು ತೆಗೆದುಕೊಳ್ಳುತ್ತೇನೆ. ನಿನ್ನ ಪ್ರತಿಯೊಂದು ಕನಸು, ಆಸೆ ನನಸಾಗಲಿ. ಜನ್ಮದಿನದ ಶುಭಾಶಯಗಳು…ನಾನು ನಿನ್ನನ್ನು ಪ್ರೀತಿಸುತ್ತೇನೆ ಮೇರಿ ಜಾನ್‌ ಎಂದು ಬರೆದಿದ್ದಾರೆ.

ಸುಕೇಶ್‌ ಚಂದ್ರಶೇಖರ್‌ ಜಾಕ್ವೆಲಿನ್‌ಗೆ ಇದೇನು ಮೊದಲ ಬಾರಿಗೆ ಪತ್ರ ಬರೆದಿರುವುದಲ್ಲ. ಆತ ಈ ವರ್ಷ ಮೂರಿ ಬಾರಿ ತನ್ನ ಪ್ರೀತಿಯ ಪತ್ರ ಬರೆದಿದ್ದಾನೆ. ಕಳೆದ ವರ್ಷ ನಿನ್ನ ಹುಟ್ಟುಹಬ್ಬದಂದು ನಾನು ನಿನ್ನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದ. ನಂತರ ಎಪ್ರಿಲ್‌ನಲ್ಲಿ, ಮೇ ತಿಂಗಳಲ್ಲಿ ಕೂಡಾ ತನ್ನ ಮನದಾಳದ ಮಾತನ್ನು ಪತ್ರದ ಮೂಲಕ ತಿಳಿಸಿದ್ದ. ಅಂದ ಹಾಗೆ ಸುಕೇಶ್‌ ಚಂದ್ರಶೇಖರ್‌ 200ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ.

ಇದನ್ನೂ ಓದಿ: ಹೆಂಡತಿಗೆ ಮೊಬೈಲ್‌ ಗೀಳು, ಅನೈತಿಕ ಸಂಬಂಧದ ಶಂಕೆ; ಕೊಲೆ ಮಾಡಿ ನದಿಗೆಸೆದ ಗಂಡ

Leave A Reply

Your email address will not be published.