Rape case: ಬೆತ್ತಲೆ ಅತ್ಯಾಚಾರ ಪ್ರಕರಣ ಬೆತ್ತಲೆ ಹುಡುಗಿಯ ಪ್ರಕರಣ, ಕೊನೆಗೂ ಔಟ್ ಮಗನನ್ನು ಗಲ್ಲಿಗೇರಿಸಿ ಎಂದು ಪಟ್ಟು ಹಿಡಿದು ಕೂತದ್ದು ಯಾಕೆ ?!

Latest news attempt to rape Madhya Pradesh Ujjain Rape Case

Rape case: ಇತ್ತೀಚೆಗೆ ಮಧ್ಯ ಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ ಅತ್ಯಾಚಾರ (Ujjain Rape Case) ಸಂತ್ರಸ್ತೆ ಬಾಲಕಿಯನ್ನು ಅತ್ಯಾಚಾರ ಮಾಡಿ ಬೆತ್ತಲೆ ಮಾಡಿದ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಯೆಲ್ಲಾ ಗಾಯ ಮಾಡಿಕೊಂಡು ಸಹಾಯಕ್ಕಾಗಿ ಅಂಗಲಾಚಿದರೂ ಆಕೆಯ ನೆರವಿಗೆ ಯಾರೂ ಬರಲಿಲ್ಲ ಎಂಬ ವಿಚಾರ ದೇಶಾದ್ಯಂತ ಚರ್ಚೆಯಾಗಿತ್ತು. ಆದರೀಗ ಪ್ರಕರಣವನ್ನು ಉಜ್ಜಯಿನಿ ಪೊಲೀಸರು (Ujjain Police) ಭೇದಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಹೌದು, ಬಾಲಕಿಯ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡವನ್ನು ರಚಿಸಿಕೊಂಡು ಹಲವು ಆಯಾಮಗಳಲ್ಲಿ ತನಿಖೆ ಪ್ರಾರಂಭಿಸಿದ್ದರು. ನೂರಾರು ಜನರ ವಿಚಾರಣೆ ನಡೆಸಿದ್ದರು. 700 ಕ್ಕೂ ಹೆಚ್ಚು CCTV ಕ್ಯಾಮೆರಾ ದೃಶ್ಯಗಳನ್ನ ಜಾಲಾಡಿದ್ದರು. 40 ಮಂದಿ ಪೊಲೀಸರ ತಂಡ 72 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿದ್ದು, ಇದೀಗ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸತತ ಕಾರ್ಯಾಚರಣೆ ಬಳಿಕ ಕೊನೆಗೂ ಪ್ರಮುಖ ಆರೋಪಿ ಬಂಧನ ಆಗಿದೆ. ಆಟೋ ಚಾಲಕನೊಂದಿಗೆ ಸಂಪರ್ಕದಲ್ಲಿದ್ದ ಪ್ರಮುಖ ಆರೋಪಿ ಭರತ್ ಸೋನಿಯನ್ನ ಪೊಲೀಸರು ಬಂಧಿಸಿದ್ದಾರೆ. 15 ವರ್ಷದ ಹುಡುಗಿಯನ್ನು ಯೂಪಿಯ ಉಜ್ಜಯಿನಿ ರೈಲು ನಿಲ್ದಾಣದಿಂದ ಕರೆದೊಯ್ದು ಅತ್ಯಾಚಾರ ಎಸಗಿ, ಬಳಿಕ ಅರೆಬೆತ್ತಲಾದ ಸ್ಥಿತಿಯಲ್ಲಿ ಬಾಲಕಿಯನ್ನು ಬಿಟ್ಟು ಹೋಗಲಾಗಿತ್ತು.

ಪೊಲೀಸರು ಮೊದಲು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಪೋಲಿಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಕೃತ್ಯ ನಡೆದಿರುವುದು ತಿಳಿದಿದ್ದರೂ ಅದನ್ನು ಪೊಲೀಸರಿಗೆ ತಿಳಿಸದೇ ಇದ್ದ ಕಾರಣ ಆಟೋ ಚಾಲಕ ರಾಕೇಶ್ ಮಾಳವಿಯಾ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗನಿಗೆ ಮರಣ ದಂಡನೆ ವಿಧಿಸಲು ಒತ್ತಾಯ:

ಅತ್ಯಾಚಾರದ ಪ್ರಮುಖ ಆರೋಪಿ ಭರತ್ ಸೋನಿ ತಂದೆ ರಾಜು ಸೋನಿ ತನ್ನ ಮಗನಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿ ಗಮನ ಸೆಳೆದಿದ್ದಾರೆ. ಅತ್ಯಾಚಾರ ಎಸಗಿದ್ದು ಮಹಾ ತಪ್ಪು, ನನ್ನ ಮಗನಿಗೆ ಶಿಕ್ಷೆ ಆಗಲೇಬೇಕು. ಮರಣದಂಡನೆ ಹೊರತಾಗಿ ಬೇರೆ ಯಾವುದೇ ಶಿಕ್ಷೆಗೂ ಅವನು ಅರ್ಹನಲ್ಲ. ಅವನನ್ನು ಕೊಂದು ಬಿಸಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಷ್ಟೇ, ಉಜ್ಜಯಿನಿ ಬೀದಿಗಳಲ್ಲಿ ಸಹಾಯಕ್ಕಾಗಿ ಅಂಗಲಾಚಿದರೂ ಬಾಲಕಿಗೆ ಸಹಾಯ ಮಾಡದೆ ಇದ್ದ ಜನರ ವಿರುದ್ಧ ಕೂಡಾ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಜ್ಜಯಿನಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದ ಬಾಲಕಿ ರಕ್ಷಣೆಗೆ ಧಾವಿಸಿದ ಇಬ್ಬರು ಪೊಲೀಸರು ರಕ್ತದಾನ ಮಾಡಿದ್ದು, ಈ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಯೇ ಬಾಲಕಿಯನ್ನು ದತ್ತು ಪಡೆಯಲು ಬಯಸಿದ್ದು ಭಾರೀ ಶ್ಲಾಘನೆಗೆ ಕಾರಣ ಆಗಿದೆ.

One minute Sari: ಬಂದಿದೆ ‘ಒನ್ ಮಿನಿಟ್ ಸಾರಿ’ : ಒಂದು ಮಿನಿಟ್ ನಲ್ಲಿ ಸೀರೆ ಉಟ್ಟು ತೋರ್ಸಿ; ಹುಡುಗ್ರು – ಗಂಡಂದಿರು ಫುಲ್ ಶಾಕ್ !!

Leave A Reply

Your email address will not be published.