Bank of Baroda: ರಿಸರ್ವ್ ಬ್ಯಾಂಕ್ನಿಂದ ಗುಡ್ ನ್ಯೂಸ್! ಬ್ಯಾಂಕ್ ಆಫ್ ಬರೋಡಾಗೆ ಬಿಗ್ ರಿಲೀಫ್!
Bank of Baroda: ಬ್ಯಾಂಕ್ ಆಫ್ ಬರೋಡಾಕ್ಕೆ, ಭಾರತೀಯ ರಿಸರ್ವ್ ಬ್ಯಾಂಕ್ ನಿಂದ (Reserve Bank Of India) ಬಿಗ್ ರಿಲೀಫ್ ದೊರೆತಿದೆ. ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಸೆಕ್ಷನ್ 35 ಎ ಅಡಿಯಲ್ಲಿ, ಕಳೆದ ವರ್ಷ ಅಕ್ಟೋಬರ್ನಲ್ಲಿ ಬ್ಯಾಂಕ್ ಆಫ್ ಬರೋಡಾದ (Bank of Baroda) ‘ಬಾಬ್ ವರ್ಲ್ಡ್’ (BoB) ಮೊಬೈಲ್ ಅಪ್ಲಿಕೇಶನ್ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು. ಇದೀಗ ‘ಬಾಬ್ ವರ್ಲ್ಡ್’ (BoB) ಮೊಬೈಲ್ ಅಪ್ಲಿಕೇಶನ್ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಿದೆ. ಈ ಮೂಲಕ ಸಾರ್ವಜನಿಕ ವಲಯದ ಸಾಲದಾತ ಬ್ಯಾಂಕ್ ಆಫ್ ಬರೋಡಾಕ್ಕೆ ತನ್ನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್, ಬಾಬ್ ವರ್ಲ್ಡ್ಗೆ ಗ್ರಾಹಕರನ್ನು ಆನ್ಬೋರ್ಡ್ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಬುಧವಾರದ ನಿಯಂತ್ರಕ ಫೈಲಿಂಗ್ನಲ್ಲಿ, ಬ್ಯಾಂಕ್ ಆಫ್ ಬರೋಡಾ ಈ ಬಗ್ಗೆ ತಿಳಿಸಿದ್ದು, “ಆರ್ಬಿಐ, ಮೇ 8, 2024 ರಂದು ತನ್ನ ಪತ್ರದ ಮೂಲಕ, ಬಾಬ್ ವರ್ಲ್ಡ್ ಮೇಲಿನ ಮೇಲಿನ ನಿರ್ಬಂಧಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತೆಗೆದು ಹಾಕುವ ನಿರ್ಧಾರವನ್ನು ಬ್ಯಾಂಕ್ಗೆ ತಿಳಿಸಿದೆ. ಇನ್ನು ನಿಯಮಗಳ ಅನುಸಾರವಾಗಿ ಬಾಬ್ ವರ್ಲ್ಡ್ ಅಪ್ಲಿಕೇಶನ್ ಮೂಲಕ ಆನ್ಬೋರ್ಡ್ ಗ್ರಾಹಕರಿಗೆ ಬ್ಯಾಂಕ್ ಈಗ ಬಾಬ್ ವರ್ಲ್ಡ್ ಅಪ್ಲಿಕೇಶನ್ನಲ್ಲಿ ಹೊಸ ಗ್ರಾಹಕರನ್ನು ಆನ್ಬೋರ್ಡಿಂಗ್ ಮಾಡಲು ಪ್ರಾರಂಭಿಸುತ್ತದೆ.
SEBI (LODR) ನಿಯಮಗಳು, 2015 ರ ನಿಯಮ 30 ರ ಅನುಸಾರವಾಗಿ ನಿಮ್ಮ ವೆಬ್ಸೈಟ್ನಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಲು ನಾವು ನಿಮ್ಮನ್ನು ವಿನಂತಿಸುತ್ತೇವೆ.” ಎಂದು ತಿಳಿಸಿದೆ.
ಸದ್ಯ ಆರ್ಬಿಐ ಬಾಬ್ ವರ್ಲ್ಡ್’ (BoB) ಮೊಬೈಲ್ ಅಪ್ಲಿಕೇಶನ್ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕುತ್ತಿದ್ದಂತೆ ಬ್ಯಾಂಕ್ ಆಫ್ ಬರೋಡಾದ ಷೇರುಗಳು 1.35% ರಷ್ಟು ಏರಿಕೆಯಾಗಿ 262.70 ರೂ. ತಲುಪಿವೆ.